ಸಂಘಟನೆಗಾಗಿ ಉಪ್ಪಾರ ಹೋರಾಟ ಸಮಿತಿ ಅಗತ್ಯ
ಚಾಮರಾಜನಗರ

ಸಂಘಟನೆಗಾಗಿ ಉಪ್ಪಾರ ಹೋರಾಟ ಸಮಿತಿ ಅಗತ್ಯ

August 5, 2018

ಯಳಂದೂರು:  ‘ಉಪ್ಪಾರ ಸಮುದಾಯದ ಸಂಘಟನೆ ಮಾಡುವ ನಿಟ್ಟಿನಲ್ಲಿ ತಾಲೂಕು ಕೇಂದ್ರದಲ್ಲಿ ಉಪ್ಪಾರ ಹೋರಾಟ ಸಮಿತಿ ರಚನೆ ಅಗತ್ಯವಾಗಿದೆ’ ಎಂದು ಜಿಲ್ಲಾ ಉಪ್ಪಾರ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ವೈ.ಕೆ.ಮೋಳೆ ನಾಗರಾಜು ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಗಣಿಗನೂರು ಬಂಗಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಉಪ್ಪಾರ ಯುವ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಜನಾಂಗದಲ್ಲಿ ಈಗಾಗಲೇ ಹಲವಾರು ಸಂಘಟನೆಗಳು ಇದೆ. ಆದರೂ ಉಪ್ಪಾರ ಸಮುದಾಯಕ್ಕೆ ಅನ್ಯಾಯವಾಗುವ ಸಂದರ್ಭದಲ್ಲಿ ಯಾರು ಪ್ರಶ್ನಿಸುತ್ತಿಲ್ಲ. ಕಳೆದ ತಿಂಗಳು ಗುಂಡ್ಲುಪೇಟೆ ತಾಲೂಕಿನಲ್ಲಿ ಹಿರಿಬೇಗೂರು ಗ್ರಾಮದಲ್ಲಿ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷಿಗೆ ಗುರಿಪಡಿಸಿ ಎಂದು ಯಾವುದೇ ಸಂಘಟನೆ ಆಗ್ರಹಿಸಲಿಲ್ಲ. ಇದು ಜನಾಂಗದ ಸಂಘಟನೆಗಳ ನಿರ್ಲಕ್ಷೆತೆಗೆ ಕಾರಣವಾಗಿದೆ ಎಂದರು.

ಜನಾಂಗದ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಉಪ್ಪಾರ ಹೋರಾಟ ಸಮಿತಿ ಅಗತ್ಯವಾಗಿದೆ. ಸಮುದಾಯದ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ.ಯೋಗೇಶ್ ಅವರ ಮಾರ್ಗದರ್ಶದಲ್ಲಿ ತಾಲೂಕಿನ ಉಪ್ಪಾರ ಹೋರಾಟ ಸಮಿತಿ ರಚನೆ ಮಾಡಬೇಕು. ಯುವಕರು ಸಮುದಾಯದ ಸಂಘಟನೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಪ್ರತಿಭಾ ಪುರಸ್ಕಾರ ಸೇರಿದಂತೆ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ಸಂಘಟನೆಗೆ ಚಾಲನೆ ನೀಡಲು ಮುಂದಿನ ದಿನಗಳಲ್ಲಿ ಜನಾಂಗದ ಹಿರಿಯ ಮುಖಂಡರು ಮಾಗದರ್ಶನದಲ್ಲಿ ಸಭೆ ನಡೆಸಿ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದರು.

ಸಭೆಯಲ್ಲಿ ಮುಖಂಡರಾದ ಬಸವಪುರ ಗೋವಿಂದಶೆಟ್ಟಿ, ಗುರು ಕೆಸ್ತೂರು, ಶ್ರೀನಿವಾಸ್, ರಾಜಣ್ಣ, ಕಿರಣ್, ಶಿವರಾಜು, ರಂಗರಾಜು, ನಾಯರಾಯಣ್, ದೂಡ್ಡಶೆಟ್ಟಿ, ಲೋಕೇಶ್ ಹಾಜರಿದ್ದರು.

Translate »