ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಜೇನು ಹುಳುಗಳು ದಾಳಿ ನಡೆಸಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಡೊಳ್ಳಿಪುರ ಗ್ರಾಮದಲ್ಲಿ ಇಂದು ನಡೆದಿದೆ. ಗ್ರಾಮದ ರತ್ನಮ್ಮ ಎಂಬುವರು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಶವವನ್ನು ಅವರ ಜಮೀನಿಗೆ ಕೊಂಡೊಯ್ಯಲಾಗಿತ್ತು. ಜಮೀನಿನಲ್ಲಿ ಶವ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಶವಕ್ಕೆ ಪೂಜೆ ಸಲ್ಲಿಸುತ್ತಿದ್ದ ವೇಳೆ ಜೇನು ಹುಳುಗಳು ದಾಳಿ ನಡೆಸಿವೆ. ಇದರಿಂದ ಗಾಬರಿಗೊಂಡ ಸಂಬಂಧಿಕರು ಶವವನ್ನು ಅಲ್ಲೇ ಬಿಟ್ಟು ದಿಕ್ಕಾಪಾಲಾಗಿ ಓಡಿದರು. ಆದರೂ 20ಕ್ಕೂ ಹೆಚ್ಚು ಜನರನ್ನು…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಬಿಗಿ ಭದ್ರತೆಯಲ್ಲಿ ಮತಯಂತ್ರ, ನಾಳೆ ಮತ ಎಣಿಕೆ
September 2, 2018ಸೋಲು-ಗೆಲುವಿನ ಲೆಕ್ಕಾಚಾರ, ಅಭ್ಯರ್ಥಿಗಳಲ್ಲಿ ಢವಢವ, ಬೆಟ್ಟಿಂಗ್ ಭರಾಟೆ ಚಾಮರಾಜನಗರ: ಜಿಲ್ಲೆಯ ಚಾಮ ರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ 60 ಸದಸ್ಯ ಸ್ಥಾನಗಳಿಗೆ ಶುಕ್ರವಾರ ಶಾಂತಿಯುತ ಮತದಾನ ನಡೆದಿದೆ. ಚಾಮರಾಜನಗರದಲ್ಲಿ ಶೇ.72.03, ಕೊಳ್ಳೇಗಾಲದಲ್ಲಿ ಶೇ.73.71 ರಷ್ಟು ಮತ ದಾನ ನಡೆದಿದ್ದು, ಮತದಾರರು ವಿದ್ಯು ನ್ಮಾನ ಮತಯಂತ್ರದಲ್ಲಿ ತಮ್ಮ ನಿರ್ಧಾ ರದ ಮುದ್ರೆ ಒತ್ತಿದ್ದಾರೆ. ಮತಯಂತ್ರ ಗಳು ಈಗ ಪೊಲೀಸರ ಸರ್ಪಗಾವಲಿನ ಲ್ಲಿದ್ದು, ಎಲ್ಲರ ಚಿತ್ತ ಮತ ಎಣಿಕೆ ದಿನ ವಾದ ಸೆಪ್ಟೆಂಬರ್ 3ರ ಮೇಲಿದೆ. ಜಿಲ್ಲಾ ಕೇಂದ್ರವಾದ…
ಅಂಚೆ ಪಾವತಿ ಬ್ಯಾಂಕ್ ಸೌಲಭ್ಯ ಸದ್ಬಳಕೆಗೆ ಸಲಹೆ
September 2, 2018ಬದನಗುಪ್ಪೆ: ‘ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೌಕರ್ಯವನ್ನು ಗ್ರಾಮಾಂತರ ಪ್ರದೇಶದ ಜನರು ಉಪಯೋಗಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕು’ ಎಂದು ತಿ.ನರಸೀಪುರ ಅಂಚೆ ನಿರೀಕ್ಷಕ ಎಂ.ಮನುಕುಮಾರ್ ಸಲಹೆ ನೀಡಿದರು. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಅಂಚೆ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿಂಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಯೂಆರ್ ಕಾರ್ಡ್ ವಿತರಣೆ ಮಾಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ 164 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆಯು ದೇಶಾ ದ್ಯಂತ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಶಾಂತಿಯುತ ಮತದಾನ ಚಾಮರಾಜನಗರ ಶೇ. 72.03, ಕೊಳ್ಳೇಗಾಲ ಶೇ. 73.71
September 1, 2018ಚಾಮರಾಜನಗರ: ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ 62 ಸದಸ್ಯ ಸ್ಥಾನಗಳ ಪೈಕಿ 60 ಸ್ಥಾನಕ್ಕೆ ಶುಕ್ರವಾರ ಬಹುತೇಕ ಶಾಂತಿ ಯುತ ಮತದಾನ ನಡೆಯಿತು. ಚಾಮರಾಜನಗರ ನಗರಸಭೆಯ ವ್ಯಾಪ್ತಿ ಯಲ್ಲಿ 4 ಸೇವಾ ಮತದಾರರು ಸೇರಿ ಒಟ್ಟು 53,714 ಮತದಾರರು ಇದ್ದರು. ಇವರಲ್ಲಿ 38,692 ಮತದಾರರು ಮತದಾನ ಮಾಡಿ ದರು. ಶೇ72.03ರಷ್ಟು ಮತದಾನ ನಡೆಯಿತು. ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ 41,892 ಮತದಾರರು ಮತದಾನಕ್ಕೆ ಅರ್ಹರಾಗಿದ್ದರು. ಈ ಪೈಕಿ 30,871 ಮತ ದಾರರು ಹಕ್ಕು ಚಲಾಯಿಸಿದರು. ಶೇ.73.71ರಷ್ಟು ಮತದಾನ ನಡೆಯಿತು….
ಚಾಮರಾಜನಗರ 4ನೇ ವಾರ್ಡ್‍ನಲ್ಲಿ ಗಲಾಟೆ
September 1, 2018ಚಾಮರಾಜನಗರ: ಚಾಮರಾಜನಗರ ನಗರಸಭೆಯ 4ನೇ ವಾರ್ಡ್‍ನಲ್ಲಿ ಮತದಾನದ ಸಂದರ್ಭದಲ್ಲಿ ಸಣ್ಣ ಗಲಾಟೆ ನಡೆದ ಬಗ್ಗೆ ವರದಿ ಆಗಿದೆ. 4ನೇ ವಾರ್ಡ್‍ನ ವ್ಯಾಪ್ತಿಗೆ ಬರುವ ಗಾಳೀಪುರ ಬಡಾವಣೆಯಲ್ಲಿ ಇರುವ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಗಲಾಟೆ ನಡೆದು ನಾಲ್ವರು ಗಾಯಗೊಂಡಿದ್ದರು. ಬಡಾವಣೆಯ ಸುಬೇರ್, ಆಶಿಕ್, ಅಕ್ರಂ ಪಾಷ, ಸುಹೇಬ್ ಗಾಯಗೊಂಡವ ರಾಗಿದ್ದು, ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರ ಪರ…
ನಗರಸಭೆ ಚುನಾವಣೆ ಮತ ಎಣಿಕೆ ಹಿನ್ನಲೆ: ಸೆಪ್ಟೆಂಬರ್ 3ರಂದು ನಿಷೇಧಾಜ್ಞೆ
September 1, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆ ಮತ ಎಣಿಕೆ ಕಾರ್ಯವು ಸೆಪ್ಟಂಬರ್ 3ರಂದು ನಡೆಯಲಿರುವ ಹಿನ್ನಲೆಯಲ್ಲಿ ಕೊಳ್ಳೇಗಾಲ ಮತ್ತು ಚಾಮರಾಜನಗರ ಟೌನ್ ವ್ಯಾಪ್ತಿಯಲ್ಲಿ ಸೆಪ್ಟಂಬರ್ 3ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ಗಂಟೆಯವರೆಗೆ (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ) ಮೆರೆವಣಿಗೆ, ಸಭೆ, ಸಮಾರಂಭ, ಪಟಾಕಿ ಸಿಡಿಸುವುದು, ಗುಂಪುಗೂಡುವುದು ಹಾಗೂ ವಿಜಯೋತ್ಸವ ಆಚರಣೆ ಇತ್ಯಾದಿಗಳನ್ನು ಸಿ.ಆರ್.ಪಿ.ಸಿ ಕಲಂ144ರ ಅನ್ವಯ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ. ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್…
ನಗರಸಭೆ ಚುನಾವಣೆ: ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ
August 30, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರ ಸಭೆಗಳಿಗೆ ಆಗಸ್ಟ್ 31 ರಂದು ನಡೆಯಲಿ ರುವ ಚುನಾವಣೆ ಸಂಬಂಧ ಮತದಾನಕ್ಕೆ ಜಿಲ್ಲಾಡಳಿತವು ಸರ್ವ ಸಿದ್ಧತೆ ಮಾಡಿಕೊಂಡಿದೆ. ಚಾಮರಾಜನಗರ ನಗರಸಭೆಗೆ ಸಂಬಂಧಿ ಸಿದಂತೆ ಒಟ್ಟು 31 ವಾರ್ಡ್‍ಗಳಿದ್ದು, 26106 ಪುರುಷರು, 27650 ಮಹಿಳೆಯರು, ಇತರೆ 7 ಮತದಾರರು ಸೇರಿದಂತೆ ಒಟ್ಟು 53763 ಮತದಾರರು ಮತ್ತು 4 ಮಂದಿ ಸೇವಾ ಮತದಾರರಿದ್ದಾರೆ. ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 31 ವಾರ್ಡ್‍ಗಳಿದ್ದು, 21963 ಪುರುಷರು, 22488 ಮಹಿಳೆಯರು, ಇತರೆ 4 ಮತದಾರರು…
ನಾರಾಯಣ ಗುರು ಆದರ್ಶ ಸುಧಾರಣೆ ಇಂದಿಗೂ ಅವಶ್ಯ
August 28, 2018ಚಾಮರಾಜನಗರ: ‘ಬ್ರಹ್ಮಶ್ರೀ ನಾರಾಯಣ ಗುರು ಅವರು 19ನೇ ಶತಮಾನದಲ್ಲಿ ಆರಂಭಿಸಿದ ಸಾಮಾಜಿಕ ಸುಧಾರಣೆಗಳು ಪ್ರಸ್ತುತ ಸಂದರ್ಭಕ್ಕೂ ಅವಶ್ಯಕವಾಗಿವೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಹ್ಮಶ್ರೀ ನಾರಾಯಣಗುರು ಅವರು ಸಾಮಾಜಿಕ ಸಮಾನತೆಗೆ ಅನೇಕ ಸುಧಾರಣೆಗಳನ್ನು ತಂದರು. ಎಲ್ಲಾ ಜಾತಿಗಳು ಸಮಾನ ಎಂದು ಪ್ರತಿಪಾದಿಸಿ ದರು….
ಪಿಎಸ್‍ಐ ದೀಪಕ್‍ಗೆ ಮುಖ್ಯಮಂತ್ರಿ ಪದಕ
August 27, 2018ಚಾಮರಾಜನಗರ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಕೊಡ ಮಾಡುವ ‘ಮುಖ್ಯಮಂತ್ರಿ ಪದಕ’ಕ್ಕೆ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಎಲ್.ದೀಪಕ್ ಭಾಜನರಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ದೀಪಕ್ ಅವರು ಸಲ್ಲಿ ಸುತ್ತಿರುವ ಉತ್ತಮ ಸೇವೆಯನ್ನು ಪರಿ ಗಣಿಸಿ ಈ ಪದಕ ನೀಡಲಾಗಿದೆ. ಪ್ರಸ್ತುತ ಚಾಮರಾಜನಗರದ ಸಂಚಾರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್, ಚಾಮ ರಾಜನಗರದಲ್ಲಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸಲು ಅಪಾರವಾಗಿ ಶ್ರಮಿಸುತ್ತಿ ದ್ದಾರೆ. ಇದಲ್ಲದೇ ಫುಟ್‍ಪಾತ್ ತೆರವು ಕಾರ್ಯಾಚರಣೆಯಲ್ಲೂ…
9 ಬಿಜೆಪಿ ಬಂಡಾಯ ಅಭ್ಯರ್ಥಿಗಳ ಅಮಾನತ್ತು
August 27, 2018ಚಾಮರಾಜನಗರ: ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿ ಸಿರುವ ಪಕ್ಷದ 9 ಮುಖಂಡರನ್ನು ಅಮಾನತ್ತುಗೊಳಿಸಲಾಗಿದೆ. ಚಾಮರಾಜನಗರ ನಗರಸಭೆಯ 17ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಸಿ.ಎ.ಬಸವಣ್ಣ, 23ನೇ ವಾರ್ಡ್‍ನಿಂದ ಸ್ಪರ್ಧಿಸುವ ಕಲ್ಯಾಣಿ ಮಂಜುನಾಥ್, ಎನ್.ಮಂಜುಳ ನಾರಾಯಣ್, 26ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ರೂಪ ಭಾನುಪ್ರಕಾಶ್, 29ನೇ ವಾರ್ಡ್ ನಿಂದ ಸ್ಪರ್ಧಿಸಿರುವ ಜೇಬಿ ಮಹದೇವಪ್ಪ, 30ನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಎಂ.ಬಸವರಾಜು ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಎಸ್.ನಾಗೆಂದ್ರಸ್ವಾಮಿ ತಿಳಿಸಿದ್ದಾರೆ….