ನಗರಸಭೆ ಚುನಾವಣೆ: ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ
ಚಾಮರಾಜನಗರ

ನಗರಸಭೆ ಚುನಾವಣೆ: ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ

August 30, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರ ಸಭೆಗಳಿಗೆ ಆಗಸ್ಟ್ 31 ರಂದು ನಡೆಯಲಿ ರುವ ಚುನಾವಣೆ ಸಂಬಂಧ ಮತದಾನಕ್ಕೆ ಜಿಲ್ಲಾಡಳಿತವು ಸರ್ವ ಸಿದ್ಧತೆ ಮಾಡಿಕೊಂಡಿದೆ.

ಚಾಮರಾಜನಗರ ನಗರಸಭೆಗೆ ಸಂಬಂಧಿ ಸಿದಂತೆ ಒಟ್ಟು 31 ವಾರ್ಡ್‍ಗಳಿದ್ದು, 26106 ಪುರುಷರು, 27650 ಮಹಿಳೆಯರು, ಇತರೆ 7 ಮತದಾರರು ಸೇರಿದಂತೆ ಒಟ್ಟು 53763 ಮತದಾರರು ಮತ್ತು 4 ಮಂದಿ ಸೇವಾ ಮತದಾರರಿದ್ದಾರೆ. ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 31 ವಾರ್ಡ್‍ಗಳಿದ್ದು, 21963 ಪುರುಷರು, 22488 ಮಹಿಳೆಯರು, ಇತರೆ 4 ಮತದಾರರು ಸೇರಿದಂತೆ ಒಟ್ಟು 44455 ಮತದಾರರು ಇದ್ದಾರೆ.

ಚಾಮರಾಜನಗರ ನಗರಸಭೆಗೆ ಸಂಬಂಧಿ ಸಿದಂತೆ ಒಟ್ಟು 61 ಮತಗಟ್ಟೆಗಳನ್ನು ಸ್ಥಾಪಿ ಸಲಾಗಿದ್ದು, ಈ ಪೈಕಿ 11 ಅತೀ ಸೂಕ್ಷ್ಮ, 14 ಸೂಕ್ಷ್ಮ ಮತ್ತು 36 ಸಾಮಾನ್ಯ ಮತಗಟ್ಟೆ ಗಳೆಂದು ಗುರುತಿಸಲಾಗಿದೆ. ಕೊಳ್ಳೇಗಾಲ ನಗರಸಭೆಗೆ ಸಂಬಂಧಿಸಿದಂತೆ ಒಟ್ಟು 45 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 10 ಅತೀ ಸೂಕ್ಷ್ಮ, 19 ಸೂಕ್ಷ್ಮ ಮತ್ತು 16 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸ ಲಾಗಿದೆ. ಚಾಮರಾಜನಗರ ನಗರಸಭೆಯ 31 ವಾರ್ಡ್‍ಗಳಿಗೆ ಆಯ್ಕೆ ಬಯಸಿ ಒಟ್ಟು 132 ಅಭ್ಯರ್ಥಿಗಳು ಅಂತಿಮವಾಗಿ ಕಣ ದಲ್ಲಿ ಉಳಿದಿದ್ದಾರೆ. ಕೊಳ್ಳೇಗಾಲ ನಗರ ಸಭೆಯ 31 ವಾರ್ಡ್‍ಗಳಿಗೆ ಅಂತಿಮ ವಾಗಿ ಒಟ್ಟು 112 ನಾಮಪತ್ರಗಳು ಕ್ರಮ ಬದ್ಧವಾಗಿದ್ದು, 6 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡ ನಂತರ ಒಟ್ಟು 101 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. (6ನೇ ವಾರ್ಡಿನಿಂದ ಗಂಗಮ್ಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. 9ನೇ ವಾರ್ಡಿನಿಂದ ಬಹುಜನ ಸಮಾಜ ಪಾರ್ಟಿ (ಬಿ.ಎಸ್.ಪಿ) ಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಎಸ್. ರಮೇಶ್ ಅವರು ನಿಧನರಾದ ಪ್ರಯುಕ್ತ 9ನೇ ವಾರ್ಡಿನ ಚುನಾವಣೆಯನ್ನು ರದ್ದುಪಡಿಸ ಲಾಗಿದ್ದು, ಈ ವಾರ್ಡಿನಲ್ಲಿ ಸ್ಪರ್ಧಿಸಿರುವ 4 ಅಭ್ಯರ್ಥಿಗಳು ಸೇರಿ ಒಟ್ಟು 5 ಅಭ್ಯ ರ್ಥಿಗಳನ್ನು ಹೊರತುಪಡಿಸಿ). ಚಾಮ ರಾಜನಗರ ನಗರಸಭೆ ಮತದಾನಕ್ಕಾಗಿ 75 ಬ್ಯಾಲೆಟ್ ಯೂನಿಟ್ ಮತ್ತು 75 ಕಂಟ್ರೋಲ್ ಯೂನಿಟ್‍ಗಳನ್ನು ಬಳಸಲಾಗುತ್ತಿದೆ. ಕೊಳ್ಳೇಗಾಲ ನಗರಸಭೆ ಮತದಾನಕ್ಕಾಗಿ 55 ಬ್ಯಾಲೆಟ್ ಯೂನಿಟ್ ಮತ್ತು 55 ಕಂಟ್ರೋಲ್ ಯೂನಿಟ್‍ಗಳನ್ನು ಬಳಸಲಾಗುತ್ತಿದೆ.

ಚಾಮರಾಜನಗರ ನಗರಸಭೆ ಚುನಾವಣೆ ಕರ್ತವ್ಯಕ್ಕಾಗಿ 68 ಪ್ರಿಸೈಡಿಂಗ್ ಅಧಿಕಾರಿ, 68 ಮೊದಲನೇ ಮತಗಟ್ಟೆ ಅಧಿಕಾರಿ, 136 ಮತಗಟ್ಟೆ ಅಧಿಕಾರಿಗಳನ್ನೊಳಗೊಂಡಂತೆ ಒಟ್ಟು 272 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕೊಳ್ಳೇಗಾಲ ನಗರ ಸಭೆ ಚುನಾವಣೆ ಕರ್ತವ್ಯಕ್ಕಾಗಿ 50 ಪ್ರಿಸೈಡಿಂಗ್ ಅಧಿಕಾರಿ, 50 ಮೊದಲನೇ ಮತಗಟ್ಟೆ ಅಧಿ ಕಾರಿ, 100 ಮತಗಟ್ಟೆ ಅಧಿಕಾರಿಗಳನ್ನೊಳ ಗೊಂಡಂತೆ ಒಟ್ಟು 200 ಮತಗಟ್ಟೆ ಅಧಿ ಕಾರಿಗಳನ್ನು ನೇಮಕ ಮಾಡಲಾಗಿದೆ.

ಚಾಮರಾಜನಗರ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜು ಮಸ್ಟರಿಂಗ್ ಹಾಗೂ ಡೀಮ ಸ್ಟರಿಂಗ್ ಕೇಂದ್ರವಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಎಂ.ಜಿ. ಎಸ್.ವಿ. ಜೂನಿಯರ್ ಕಾಲೇಜು ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕೇಂದ್ರವಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಾಮ ರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಓರ್ವ ಡಿ.ಎಸ್.ಪಿ, ಮೂವರು ಸಿ.ಪಿ.ಐ., ಆರು ಮಂದಿ ಪಿಎಸ್‍ಐ/ಎಎಸ್‍ಐ ಮತ್ತು ಮತಗಟ್ಟೆ ಗಳಿಗೆ 11 ಮಂದಿ ಎಎಸ್‍ಐ, 25 ಹೆಡ್ ಕಾನ್ಸ್‍ಟೇಬಲ್, 61 ಪೊಲೀಸ್ ಕಾನ್ಸ್‍ಟೇಬಲ್, 61 ಹೋಂಗಾರ್ಡ್‍ಗಳು ಕಾರ್ಯ ನಿರ್ವ ಹಿಸಲಿದ್ದಾರೆ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿ ಯಲ್ಲಿ ಒರ್ವ ಡಿಎಸ್‍ಪಿ, ಇಬ್ಬರು ಸಿಪಿಐ., ಆರು ಮಂದಿ ಪಿಎಸ್‍ಐ/ಎಎಸ್‍ಐ ಮತ್ತು ಮತಗಟ್ಟೆಗಳಿಗೆ 10 ಮಂದಿ ಎಎಸ್‍ಐ, 29 ಹೆಡ್‍ಕಾನ್ಸ್‍ಟೇಬಲ್, 45 ಪೊಲೀಸ್ ಕಾನ್ಸ್‍ಟೇಬಲ್, 45 ಹೋಂಗಾರ್ಡ್‍ಗಳು ಕಾರ್ಯ ನಿರ್ವಹಿಸಲಿದ್ದಾರೆ.
ಚಾಮರಾಜನಗರ ನಗರಸಭೆ ಚುನಾವಣೆಗೆ ನೇಮಕ ವಾಗಿರುವ ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 7 ಕೆಎಸ್‍ಆರ್‍ಟಿಸಿ ಬಸ್ ಮತ್ತು 10 ಜೀಪ್‍ಗಳ ವ್ಯವಸ್ಥೆ ಮಾಡಲಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆಗೆ ನೇಮಕ ಮಾಡಿರುವ ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 4 ಕೆಎಸ್‍ಆರ್‍ಟಿಸಿ ಬಸ್ ಮತ್ತು 10 ಜೀಪ್ ಗಳ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕಾರ್ಯವು ಸೆಪ್ಟೆಂಬರ್ 3 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗ ಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಚಾಮರಾಜನಗರ ನಗರಸಭೆಗೆ ಸಂಬಂಧಿಸಿದಂತೆ ನಗರದ ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜು ಮತ ಎಣಿಕೆ ಕೇಂದ್ರವಾ ಗಿದೆ. ಕೊಳ್ಳೇಗಾಲ ನಗರಸಭೆಗೆ ಸಂಬಂ ಧಿಸಿದಂತೆ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಎಂಜಿಎಸ್‍ವಿ ಜ್ಯೂನಿಯರ್ ಕಾಲೇಜು ಮತ ಎಣಿಕೆ ಕೇಂದ್ರವಾಗಿದೆ.

ಮತ ಎಣಿಕೆ ಕಾರ್ಯವು ತಲಾ 8 ಟೇಬಲ್ ಗಳಲ್ಲಿ ನಡೆಯಲಿದೆ. ಪ್ರತಿ ನಗರಸಭೆಗೆ 9 ಜನ ಮೇಲ್ವಿಚಾರಕರು, 9 ಜನ ಸಹಾಯಕ ರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳಿಗೆ ಮಾಸ್ಟರ್ ಟ್ರೈನರ್ಸ್ ಮೂಲಕ ಈಗಾಗಲೇ ತರಬೇತಿ ನೀಡಲಾಗಿದೆ.

ಮತ ಎಣಿಕೆ ಕಾರ್ಯವು ನಡೆಯಲಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸೆ.3 ರಂದು ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಸಿಆರ್‍ಪಿಸಿ 144ರ ಕಲಂ ರನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ.
ಮತದಾನದ ಹಿನ್ನೆಲೆಯಲ್ಲಿ ಚಾಮರಾಜ ನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆ ಮತ್ತು ಜಾತ್ರೆ ಗಳನ್ನು ಆ.31 ರಂದು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಚುನಾವಣೆಯನ್ನು ಪಾರ ದರ್ಶಕವಾಗಿ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಸಾಮಾನ್ಯ ಚುನಾ ವಣಾ ವೀಕ್ಷಕರು, ವಿಶೇಷ ಚುನಾವಣಾ ವೀಕ್ಷಕರು ಮತ್ತು ವೆಚ್ಚ ವೀಕ್ಷಕರನ್ನು ನೇಮಕ ಮಾಡಿದೆ ಎಂದು ಜಿಲ್ಲಾ ಚುನಾವಣಾ ಧಿಕಾರಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ಮಹಿಳಾ ಮತದಾರರೇ ಹೆಚ್ಚು
ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭಾ ಚುನಾವಣೆಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ವಿಶೇಷ. ಚಾಮರಾಜನಗರದಲ್ಲಿ ಪುರುಷ ಮತದಾರರಿಗಿಂತ 1544 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಹಾಗೆಯೇ ಕೊಳ್ಳೇಗಾಲದಲ್ಲಿ ಪುರುಷ ಮತದಾರರಿಗಿಂತ 525 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

ಕೊಳ್ಳೇಗಾಲ ಒಟ್ಟು 31 ವಾರ್ಡ್

 • ಚುನಾವಣೆ ನಡೆಯುತ್ತಿರುವುದು 29 ವಾರ್ಡ್.
 •  6ನೇ ವಾರ್ಡ್‍ನಿಂದ ಗಂಗಮ್ಮ ಅವಿರೋಧ ಆಯ್ಕೆ.
 •  ಅಭ್ಯರ್ಥಿ ನಿಧನದಿಂದ 9ನೇ ವಾರ್ಡ್‍ಗೆ ಚುನಾವಣೆ ಮುಂದೂಡಿಕೆ.
 •  ಒಟ್ಟು ಮತದಾರರು 44,455, ಪುರುಷ ಮತದಾರರು 21,963, ಮಹಿಳಾ ಮತದಾರರು 22,488, ಇತರೆ ಮತದಾರರು 4.
 •  ಮತಗಟ್ಟೆಗಳು 45, ಅತೀ ಸೂಕ್ಷ್ಮ 10, ಸೂಕ್ಷ್ಮ 19, ಸಾಮಾನ್ಯ 16.
 • ಕಣದಲ್ಲಿ ಇರುವ ಒಟ್ಟು ಅಭ್ಯರ್ಥಿಗಳು 101.
 • ಬಂದೋಬಸ್ತ್‍ಗೆ ಓರ್ವ ಡಿವೈಎಸ್ಪಿ, 2 ಸಿಪಿಐ, 6 ಪಿಎಸ್‍ಐ/ಎಎಸ್‍ಐ, ಮತಗಟ್ಟೆಗಳಿಗೆ 10 ಎಎಸ್‍ಐ, 29 ಹೆಚ್‍ಸಿ, 45 ಪಿಸಿ, 45 ಹೆಚ್‍ಜಿ.
 • ವಿದ್ಯುನ್ಮಾನ ಮತಯಂತ್ರ ಬಳಕೆ, 55 ಬ್ಯಾಲೆಟ್, ಕಂಟ್ರೋಲ್ ಯೂನಿಟ್.
 • ಒಟ್ಟು 200 ಮತಗಟ್ಟೆ ಅಧಿಕಾರಿಗಳು.
 •  ಅಗತ್ಯ ಇದ್ದಲ್ಲಿ ಮರು ಮತದಾನ ಸೆಪ್ಟೆಂಬರ್ 2.
 •  ಮತ ಎಣಿಕೆ ಸೆಪ್ಟೆಂಬರ್ 3, ಅಂದೇ ಫಲಿತಾಂಶ.
 • ಚಾಮರಾಜನಗರ ಒಟ್ಟು 31 ವಾರ್ಡ್
 •  ಒಟ್ಟು ಮತದಾರರು 53,763, ಪುರುಷ ಮತದಾರರು 26,106, ಮಹಿಳಾ ಮತದಾರರು 27,650, ಇತರೆ ಮತದಾರರು 7, ಸೇವಾ ಮತದಾರರು 4.
 • ಮತಗಟ್ಟೆಗಳು 61, ಅತೀ ಸೂಕ್ಷ್ಮ 11, ಸೂಕ್ಷ್ಮ 14, ಸಾಮಾನ್ಯ 36.
 • ಕಣದಲ್ಲಿ ಇರುವ ಅಭ್ಯರ್ಥಿಗಳು 132.
 • ಬಂದೋಬಸ್ತ್‍ಗೆ ಓರ್ವ ಡಿವೈಎಸ್‍ಪಿ, 3 ಸಿಪಿಐ, 6 ಪಿಎಸ್‍ಐ/ಎಎಸ್‍ಐ, ಮತಗಟ್ಟೆಗಳಿಗೆ 11 ಎಎಸ್‍ಐ, 25 ಹೆಚ್‍ಸಿ, 61 ಪಿಸಿ, 61 ಹೆಚ್‍ಜಿ.
 • ವಿದ್ಯುನ್ಮಾನ ಮತಯಂತ್ರ ಬಳಕೆ, 75 ಬ್ಯಾಲೆಟ್, ಕಂಟ್ರೋಲ್ ಯೂನಿಟ್.
 •  ಒಟ್ಟು 272 ಮತಗಟ್ಟೆ ಅಧಿಕಾರಿಗಳು.
 • ಅಗತ್ಯ ಇದ್ದಲ್ಲಿ ಮರು ಮತದಾನ ಸೆಪ್ಟೆಂಬರ್ 2.
 •  ಮತ ಎಣಿಕೆ ಸೆಪ್ಟೆಂಬರ್ 3, ಅಂದೇ ಫಲಿತಾಂಶ.

Translate »