ನಾರಾಯಣ ಗುರು ಆದರ್ಶ ಸುಧಾರಣೆ ಇಂದಿಗೂ ಅವಶ್ಯ
ಚಾಮರಾಜನಗರ

ನಾರಾಯಣ ಗುರು ಆದರ್ಶ ಸುಧಾರಣೆ ಇಂದಿಗೂ ಅವಶ್ಯ

August 28, 2018

ಚಾಮರಾಜನಗರ:  ‘ಬ್ರಹ್ಮಶ್ರೀ ನಾರಾಯಣ ಗುರು ಅವರು 19ನೇ ಶತಮಾನದಲ್ಲಿ ಆರಂಭಿಸಿದ ಸಾಮಾಜಿಕ ಸುಧಾರಣೆಗಳು ಪ್ರಸ್ತುತ ಸಂದರ್ಭಕ್ಕೂ ಅವಶ್ಯಕವಾಗಿವೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರು ಅವರು ಸಾಮಾಜಿಕ ಸಮಾನತೆಗೆ ಅನೇಕ ಸುಧಾರಣೆಗಳನ್ನು ತಂದರು. ಎಲ್ಲಾ ಜಾತಿಗಳು ಸಮಾನ ಎಂದು ಪ್ರತಿಪಾದಿಸಿ ದರು. ಅವರ ಸಮಾಜ ಮುಖಿ ಸುಧಾರಣೆ ಗಳು ಇಂದಿಗೂ ಅಗತ್ಯವಾಗಿವೆ ಎಂದು ತಿಳಿಸಿದರು.

ನಾರಾಯಣಗುರು ಅವರ ಕೊಡುಗೆ ಸಾಧನೆ, ಕೆಲಸಗಳು ಉತ್ತೇಜನ ಕಾರಿಯಾಗಿದೆ. ಅವರ ಪ್ರಭಾವದಿಂದ ಅನೇಕ ಬದಲಾವಣೆಗಳು ಆಗಿವೆ. ವಿಶೇಷವಾಗಿ ಕೇರಳ ರಾಜ್ಯದಲ್ಲಿ ಅವರು ಹಾಕಿಕೊಟ್ಟ ಅಡಿಗಲ್ಲಿನ ಮೇಲೆ ಬಹಳಷ್ಟು ಪ್ರಮುಖ ಸಾಧನೆಗಳು ಆಗಿವೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ, ನಾರಾಯಣಗುರು ಅವರ ಕಾಲದಲ್ಲಿ ಮೂಢನಂಬಿಕೆ, ಮೇಲು- ಕೀಳು ಇನ್ನಿತರ ಪರಿಸ್ಥಿತಿ ಇತ್ತು. ಅಂತಹ ಸಮಯದಲ್ಲಿ ಸುಧಾರಣೆಗೆ ಅಪಾರವಾಗಿ ಶ್ರಮಿಸಿ ಅರಿವು ಮೂಡಿಸಲು ನಾರಾಯಣ ಗುರು ಅವರು ಮುಂದಾದರು. ಸಾಮಾ ಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅರಿವು ಮೂಡಿಸುವ ಕೆಲಸ ಇಂದೂ ಸಹ ಮುಂದುವರಿಯಬೇಕಿದೆ ಎಂದರು.

ನಾರಾಯಣಗುರು ಅವರ ಚಿಂತನೆ ಹಾದಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೂ ಚಿಂತನೆ ನಡೆಸಬೇಕಿದೆ. ಹೊಸ ಸಮಾಜ ನಿರ್ಮಾಣ ಮಾಡುವಲ್ಲಿ ನಾರಾಯಣಗುರು ಅವರ ಆದರ್ಶಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ತಿಳಿಸಿದರು.

ಮುಖ್ಯ ಉಪನ್ಯಾಸ ನೀಡಿದ ಖ್ಯಾತ ಬರಹಗಾರರಾದ ಈಚನೂರು ಕುಮಾರ್ ಮಾತನಾಡಿ, ನಾರಾಯಣಗುರು ಅವರು ತೋರಿಸಿದ ಸನ್ಮಾರ್ಗ ಸಮಾಜಮುಖಿ ಕಾರ್ಯಗಳು ಇನ್ನೂ ಜೀವಂತವಾಗಿವೆ. ಆದರೆ, ಅವರು ನೀಡಿದ ಮಾರ್ಗ ದರ್ಶನವನ್ನು ಪಾಲನೆ ಮಾಡಲಾಗುತ್ತಿಲ್ಲ ಎಂದು ವಿಷಾದಿಸಿದರು.

ಕೆಳಸಮುದಾಯದ ಜನರ ಮನೆಗೆ ಹೋಗಿ ಅವರೊಂದಿಗೆ ಸಹ ಬೋಜನ ಮಾಡಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ಮಾಡಿದರು. ಮೌಢ್ಯತೆ, ಜಾತಿ ನಿರ್ಮೂಲನೆಗೆ ವಿಶೇಷವಾಗಿ ಶ್ರಮಿಸಿದರು. ಅವರು ಹಾಕಿಕೊಟ್ಟ ನೀತಿಯನ್ನು ಉಲ್ಲಂಘಿ ಸುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ, ಸಮಾಜದ ಮುಖಂಡರಾದ ವೆಂಕಟೇಶ್, ಸಂಪತ್, ರಾಜಣ್ಣ, ಪುಟ್ಟಪ್ಪ, ವರನಟ ಡಾ||ರಾಜ್‍ಕುಮಾರ್ ರವರ ಸಹೋದರಿ ನಾಗಮ್ಮ ಇತರರು ಉಪಸ್ಥಿತರಿದ್ದರು.

Translate »