ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ: ನ್ಯಾ.ಜೆ.ಯೋಗೇಶ್
ಚಾಮರಾಜನಗರ

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ: ನ್ಯಾ.ಜೆ.ಯೋಗೇಶ್

August 28, 2018

ಯಳಂದೂರು:  ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 347ನೇ ಆರಾಧನಾ ಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ವಿಶೇಷ ಪೂಜೆ ವಿಭೃಂಜಣೆÉಯಿಂದ ನಡೆಯಿತು.

ಪಟ್ಟಣದ ಶ್ರೀವ್ಯಾಸರಾಜ ಮಠದಲ್ಲಿ (ಸೋಸಲೆ ಶಾಖೆ) ಸೋಮವಾರ ಶ್ರೀ ರಾಘವೇಂದ್ರಸ್ವಾಮಿ ಅವರ ಆರಾಧನ ಮಹೋತ್ಸವದಲ್ಲಿ 3 ದಿನಗಳ ಕಾಲ ವಿಶೇಷ ಪೂಜೆ, ಅಭಿಷೇಕಗಳನ್ನು ಏರ್ಪಡಿಸಲಾಗಿದ್ದು, ರಾಯರ ಮಠಕ್ಕೆ ಸಾವಿರಾರು ಸಂಖ್ಯೆ ಯಲ್ಲಿ ಭಕ್ತರು ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಿದ್ದಾರೆ. ಮಠದಿಂದ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದೆ. ಮೊದಲ ದಿನವಾದ ಸೋಮವಾರ ಬೆಳಿಗ್ಗೆ ಯಿಂದಲೇ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ತುಳಸಿ ಬೃಂದಾವನ ಮತ್ತು ಉಗ್ರ ನರಸಿಂಹಸ್ವಾಮಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನು ಶಾಸ್ತ್ರ್ಕೋತ್ತವಾಗಿ ಮಂತ್ರ ಪಠನೆಗಳ ಹೇಳುವ ಮೂಲಕ ಶ್ರೀಗಳ ಬೃಂದಾವನ ಮತ್ತು ನರಸಿಂಹÀ ಸ್ವಾಮಿ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಬಾಳೆಹಣ್ಣು, ಎಳ್ಳನೀರು ಸೇರಿದಂತೆ ವಿವಿಧ ರೀತಿಯ ಅಭಿಷೇಕಗಳನ್ನು ನಡೆಸ ಲಾಯಿತು. ಬಳಿಕ ರಾಯರಿಗೆ ಪ್ರಿಯ ವಾದ ತುಳಸಿಹಾರ ಸೇರಿದಂತೆ ವಿವಿಧ ಜಾತಿಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಈ ವೇಳೆ ಮಠದಲ್ಲಿ ಶ್ರೀ ಸತ್ಯನಾರಾ ಯಣ ಸ್ವಾಮಿ ಪೂಜೆ ನಡೆಸಲಾಯಿತು. ನಂತರ ಮಠದ ಪ್ರಾಂಗಣದಲ್ಲಿ ರಾಯರ ಬ್ರಹ್ಮರಥೋತ್ಸವ ನಡೆಯಿತು. ಮಹೋ ತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಮಠದಲ್ಲಿ ಬೆಂಗಳೂರಿನ ಸಂಗೀತ ಗಾರರಾದ ಪಟ್ಟಾಭೀರಾಮನ್ ಅವರು ಸಂಗೀತ ಕಚೇರಿ ನಡೆಸಿ ಕೊಟ್ಟರು. ಮಠ ದಿಂದ ಭಕ್ತರಿಗೆ ಅನ್ನ ಸಂರ್ತಪಣೆ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಮಠದ ಗುರುಗಳಾದ ಶ್ರೀ ಅನಂತ ಪದ್ಮನಾಭ ಮಾಧವರಾವ್, ಮಠದ ವ್ಯವಸ್ಥಾಪಕ ಸೇತು ಮಾಧವರಾವ್, ವೇದವ್ಯಾಸರಾವ್, ಶ್ರೀನಿವಾಸ್‍ಪೇಪರ್ ಸೇರಿದಂತೆ ಇತರರು ಹಾಜರಿದ್ದರು.

Translate »