ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಶಾಂತಿಯುತ ಮತದಾನ ಚಾಮರಾಜನಗರ ಶೇ. 72.03, ಕೊಳ್ಳೇಗಾಲ ಶೇ. 73.71
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಶಾಂತಿಯುತ ಮತದಾನ ಚಾಮರಾಜನಗರ ಶೇ. 72.03, ಕೊಳ್ಳೇಗಾಲ ಶೇ. 73.71

September 1, 2018

ಚಾಮರಾಜನಗರ:  ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ 62 ಸದಸ್ಯ ಸ್ಥಾನಗಳ ಪೈಕಿ 60 ಸ್ಥಾನಕ್ಕೆ ಶುಕ್ರವಾರ ಬಹುತೇಕ ಶಾಂತಿ ಯುತ ಮತದಾನ ನಡೆಯಿತು. ಚಾಮರಾಜನಗರ ನಗರಸಭೆಯ ವ್ಯಾಪ್ತಿ ಯಲ್ಲಿ 4 ಸೇವಾ ಮತದಾರರು ಸೇರಿ ಒಟ್ಟು 53,714 ಮತದಾರರು ಇದ್ದರು. ಇವರಲ್ಲಿ 38,692 ಮತದಾರರು ಮತದಾನ ಮಾಡಿ ದರು. ಶೇ72.03ರಷ್ಟು ಮತದಾನ ನಡೆಯಿತು. ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ 41,892 ಮತದಾರರು ಮತದಾನಕ್ಕೆ ಅರ್ಹರಾಗಿದ್ದರು. ಈ ಪೈಕಿ 30,871 ಮತ ದಾರರು ಹಕ್ಕು ಚಲಾಯಿಸಿದರು. ಶೇ.73.71ರಷ್ಟು ಮತದಾನ ನಡೆಯಿತು.

ಚಾಮರಾಜನಗರ ನಗರಸಭೆಯು 31 ಸದಸ್ಯರ ಬಲ ಹೊಂದಿದೆ. ಆಯ್ಕೆ ಬಯಸಿ 132 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೊಳ್ಳೇ ಗಾಲ ನಗರಸಭೆಯೂ ಸಹ 31 ಸದಸ್ಯರ ಬಲ ಹೊಂದಿತ್ತು. ಈ ಪೈಕಿ 6ನೇ ವಾರ್ಡ್ ನಿಂದ ಬಿಎಸ್‍ಪಿ ಅಭ್ಯರ್ಥಿ ಗಂಗಮ್ಮ ಅವಿ ರೋಧವಾಗಿ ಆಯ್ಕೆಯಾಗಿದ್ದರು. 9ನೇ ವಾರ್ಡ್‍ನಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ರಮೇಶ್ ಅಪಘಾತದಲ್ಲಿ ಮೃತರಾಗಿದ್ದರು. ಹೀಗಾಗಿ ವಾರ್ಡ್‍ನ ಮತ ದಾನವನ್ನು ಮುಂದೂಡಲಾಗಿತ್ತು. ಉಳಿದ 29 ವಾರ್ಡ್‍ಗೆ ಆಯ್ಕೆ ಬಯಸಿ 101 ಅಭ್ಯರ್ಥಿ ಗಳು ಸ್ಪರ್ಧಿಸಿದ್ದರು. ಈ ಎಲ್ಲಾ ಅಭ್ಯರ್ಥಿ ಗಳ ರಾಜಕೀಯ ಭವಿಷ್ಯವನ್ನು ಮತದಾ ರರು ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರ ಪಡಿಸಿದ್ದಾರೆ. ಮತ ಎಣಿಕಾ ಕಾರ್ಯವು ಸೆಪ್ಟೆಂಬರ್ 3ರಂದು ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಹಾಗೂ ರಾಜಕೀಯ ಪಕ್ಷಗಳ ಬಂಡವಾಳ ಅಂದು ಬಯಲಾಗಿದೆ.

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 61 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಕೊಳ್ಳೇಗಾಲ ವ್ಯಾಪ್ತಿಯಲ್ಲಿ 45 ಮತ ಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಎಲ್ಲಾ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಸಲಾಯಿತು. ನಂತರ ಬೆಳಿಗ್ಗೆ 7 ಗಂಟೆಗೆ ಮತದಾನವನ್ನು ಆರಂಭಿಸಲಾಯಿತು. ಅಭ್ಯರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರು ಬೆಳಿಗ್ಗೆಯೇ ಮತದಾನ ಮಾಡುವ ಮೂಲಕ ಗೆಲುವಿಗಾಗಿ ಪ್ರಾರ್ಥಿಸಿದರು.

ಮತದಾನ ಬೆಳಿಗ್ಗೆಯಿಂದಲೇ ಬಿರುಸಿ ನಿಂದ ಸಾಗಿತ್ತು. ಬಹುತೇಕ ಮತಗಟ್ಟೆ ಗಳಲ್ಲಿ ಮತದಾರರು ಹಕ್ಕು ಚಲಾಯಿಸಲು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. 9 ಗಂಟೆ ವೇಳೆಗೆ ಚಾ.ನಗರದಲ್ಲಿ ಶೇ.10.25, ಕೊಳ್ಳೇಗಾಲದಲ್ಲಿ ಶೇ.10.68ರಷ್ಟು ಮತದಾನ ನಡೆಯಿತು. ನಂತರ ಬಿರುಸು ಗೊಂಡ ಮತದಾನ 11 ಗಂಟೆ ವೇಳೆಗೆ ಚಾ.ನಗರದಲ್ಲಿ ಶೇ.25.62, ಕೊಳ್ಳೇಗಾಲ ದಲ್ಲಿ ಶೇ.20.11, ಮಧ್ಯಾಹ್ನ 1 ಗಂಟೆ ವೇಳೆಗೆ ಚಾ.ನಗರದಲ್ಲಿ ಶೇ.43.79 ರಷ್ಟು, ಕೊಳ್ಳೇಗಾಲದಲ್ಲಿ ಶೇ.40.58ರಷ್ಟು ಮತ ದಾನ ನಡೆಯಿತು. ತದನಂತರ ಮತ್ತಷ್ಟು ಬಿರುಸುಗೊಂಡ ಮತದಾನವು 3 ಗಂಟೆ ವೇಳೆಗೆ ಚಾಮರಾಜನಗರದಲ್ಲಿ ಶೇ.57.41 ರಷ್ಟು, ಕೊಳ್ಳೇಗಾಲದಲ್ಲಿ ಶೇ.55.71ರಷ್ಟು ಮತದಾನ ನಡೆಯಿತು. ನಂತರ ಬಿಸಿಲು ಸರಿದು ತಂಪಾದ ವಾತಾವರಣ ಸೃಷ್ಟಿ ಆಗುತ್ತಿದ್ದಂತೆಯೇ ಮತದಾನದಲ್ಲಿ ಪಾಲ್ಗೊ ಳ್ಳುವವರ ಉತ್ಸಾಹ ಮತ್ತಷ್ಟು ಹೆಚ್ಚಿತು. ಕೆಲವು ವಾರ್ಡ್‍ಗಳಲ್ಲಿ ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಯಿತು. 5 ಗಂಟೆಯ ವೇಳೆಯೊಳಗೆ ಮತಗಟ್ಟೆಗೆ ಆಗಮಿಸಿದ ಎಲ್ಲಾ ಮತದಾರರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು.

ಅಭ್ಯರ್ಥಿಗಳು, ಮುಖಂಡರ ಮನವಿ: ಮತ ಗಟ್ಟೆಯ ಅನತಿ ದೂರದಲ್ಲಿ ನಿಂತಿದ್ದ ಅಭ್ಯರ್ಥಿಗಳು, ಅವರ ಸ್ನೇಹಿತರು, ವಾರ್ಡ್‍ನ ಮುಂಚೂಣಿ ಮುಖಂಡರು, ರಾಜಕಾರಣಿ ಗಳು ಮತದಾನ ಮಾಡಲು ಆಗಮಿಸು ತ್ತಿದ್ದ ಮತದಾರರಿಗೆ ಕೈ ಮುಗಿದು ಮತ ಯಾಚಿಸುತ್ತಿದ್ದ ದೃಶ್ಯ ಎಲ್ಲಾ ಮತಗಟ್ಟೆ ಗಳಲ್ಲಿ ಕಂಡು ಬಂತು. ಬೈಕ್, ಆಟೋ, ಕಾರು, ಟಾಟಾ ಸುಮೋಗಳಲ್ಲಿ ಮತದಾರ ರನ್ನು ಮತಗಟ್ಟೆಗೆ ಕರೆದುಕೊಂಡು ಬರು ತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ವೃದ್ಧರು, ವಿಕಲಚೇತನರಿಗೆ ನೆರವು: ವೃದ್ಧರು ಹಾಗೂ ವಿಕಲಚೇತನರು ಕುಟುಂಬ ದವರು ಹಾಗೂ ಸಂಬಂಧಿಕರ ಸಹಾಯ ದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಿ ದರು. ನಡೆಯಲು ಆಗದ ವೃದ್ಧರನ್ನು ಎತ್ತಿ ಕೊಂಡು ಬಂದು ಮತದಾನ ಮಾಡಿಸು ತ್ತಿದ್ದ ದೃಶ್ಯವೂ ಸಹ ಕಂಡು ಬಂತು.

ಜನ ಜಂಗುಳಿ: ನಗರಸಭೆ ಚುನಾ ವಣೆ ಸ್ಥಳೀಯ ಮಟ್ಟದ್ದಾಗಿದ್ದರಿಂದ ವಾರ್ಡ್ ನಲ್ಲಿ ಗೆಲುವಿಗಾಗಿ ಪ್ರಮುಖ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಮತ ದಾನದ ದಿನವಾದ ಇಂದು ಮತಗಟ್ಟೆ ಬಳಿ ಜನಜಂಗು ಳಿಯೇ ಕಂಡು ಬಂತು. ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯ ಕರ್ತರ ಗುಂಪು ಕಂಡು ಬಂತು.
ಬಿಗಿ ಬಂದೋಬಸ್ತ್: ಎಲ್ಲಾ ಮತಗಟ್ಟೆ ಗಳಿಗೆ ಬಿಗಿ ಬಂದೋಬಸ್ತ್ ಆಯೋಜಿಸ ಲಾಗಿತ್ತು. ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಬಂದೋಬಸ್ತ್ ಆಯೋಜಿಸಲಾಗಿತ್ತು. ಪೊಲೀಸ್ ವಾಹನ ಗಸ್ತು ತಿರುಗುತ್ತಿತ್ತು.

ಶೇಕಡವಾರು ಮತದಾನದ ವಿವರ
ಚಾಮರಾಜನಗರ, ಆ.31- ಜಿಲ್ಲೆಯ ಚಾಮರಾಜನಗರ ನಗರಸಭೆ ಚುನಾವಣೆಗೆ ಇಂದು ಶೇ.72.03ರಷ್ಟು ಮತದಾನವಾಗಿದೆ. ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಶೇ.73.71 ರಷ್ಟು ಮತದಾನವಾಗಿದೆ.

ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ 26,066 ಪುರುಷರು, 27,641 ಮಹಿಳೆಯರು, ಇತರೆ 7 ಮಂದಿ ಸೇರಿದಂತೆ ಒಟ್ಟು 53,714 ಮತದಾರರು ಇದ್ದಾರೆ. ಈ ಪೈಕಿ 19,156 ಪುರುಷರು 19,536 ಮಹಿಳೆಯರು ಸೇರಿದಂತೆ ಒಟ್ಟಾರೆ 38,692 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.73.49 ರಷ್ಟು ಪುರುಷರು, ಶೇ.70.68ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ.

ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ 20,676 ಪುರುಷರು, 21,212 ಮಹಿಳೆಯರು, ಇತರೆ 4 ಮಂದಿ ಸೇರಿದಂತೆ ಒಟ್ಟು 41,892 ಮತದಾರರು ಇದ್ದಾರೆ. ಈ ಪೈಕಿ 15,461 ಪುರುಷರು 15,416 ಮಹಿಳೆಯರು ಸೇರಿದಂತೆ ಒಟ್ಟಾರೆ 30,877 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ.74.78 ರಷ್ಟು ಪುರುಷರು, ಶೇ.72.68ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ.

Translate »