ಚುನಾವಣಾ ಬಹಿಷ್ಕಾರ ಕೈಬಿಟ್ಟ ನಿವಾಸಿಗಳು
ಚಾಮರಾಜನಗರ

ಚುನಾವಣಾ ಬಹಿಷ್ಕಾರ ಕೈಬಿಟ್ಟ ನಿವಾಸಿಗಳು

September 1, 2018

ಕೊಳ್ಳೇಗಾಲ: ರಸ್ತೆ ವ್ಯವಸ್ಥೆ ಕಲ್ಪಿಸುವ ನಿಮ್ಮ ಮನವಿಗೆ ನಾವು ಸ್ಪಂದಿಸುತ್ತೇವೆ. ನೀವೆಲ್ಲರೂ ಚುನಾವಣಾ ಬಹಿಷ್ಕಾರ ನಿರ್ಣಯ ಕೈಬಿಟ್ಟು ಪ್ರತಿಯೊಬ್ಬರು ಮತದಾನಕ್ಕೆ ಮುಂದಾಗಬೇಕು ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಪಾಂಡೆ ಹೇಳಿಕೆ ಸ್ಪಂದಿಸಿ ಇಲ್ಲಿನ ರಾಜೀವನಗರ ನಿವಾಸಿಗಳು ನಗರಸಭಾ ಚುನಾವಣಾ ಬಹಿಷ್ಕಾರ ಕೈಬಿಟ್ಟಿತು.

ಇಲ್ಲಿನ ರಾಜೀವ್ ನಗರದ(ಬಸವೇಶ್ವರನಗರ) 5ನೇ ಕ್ರಾಸ್ ನಿವಾಸಿಗಳು ಇತ್ತೀಚೆಗೆ ಚುನಾವಣಾ ಅಯೋಗಕ್ಕೆ ತಮಗೆ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿ ರಸ್ತೆ ವ್ಯವಸ್ಥೆಗೆ ಸರ್ಕಾರ ಹಾಗೂ ಚುನಾವಣಾ ಅಯೋಗ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಆ.31ರಂದು ನಡೆಯುವ ನಗರಸಭೆ ಚುನಾವಣೆ ಬಹಿಷ್ಕರಿಸುವುದಾಗಿ 12ಕ್ಕೂ ಹೆಚ್ಚು ಕುಟುಂಬ ಸದಸ್ಯರು ಪತ್ರ ಬರೆದಿದ್ದರು. ಈ ಹಿನ್ನೆಲೆ ಗುರುವಾರ ಚುನಾವಣಾಧಿಕಾರಿ ಪಾಂಡೆ, ತಹಸಿಲ್ದಾರ್ ಚಂದ್ರಮೌಳಿ, ಸಮಾಜ ಕಲ್ಯಾಣಾಧಿಕಾರಿ ಮಂಜುಳಾ, ಗ್ರಾಮ ಲೆಕ್ಕಿಗ ನಿರಂಜನ್ ಸೇರಿದಂತೆ ಹಲವು ಅಧಿಕಾರಿಗಳು ಬಸವೇಶ್ವರ ನಗರಕ್ಕೆ ಆಗಮಿಸಿ ಮತದಾನ ನಿಮ್ಮ ಹಕ್ಕು. ಈ ಹಿನ್ನೆಲೆ ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯಿಂದ ಹಿಂದುಳಿಯ ಬಾರದು. ಮತಚಲಾಯಿಸಿ. ನಿಮ್ಮ ಮನವಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆ ಅಲ್ಲಿನ ನಿವಾಸಿಗಳು ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ಮನವಿಗೆ ಸ್ಪಂದಿಸಿ ರಸ್ತೆ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗೋವಿಂದರಾಜು, ಯಶೋಧ, ಮೀನಾಕ್ಷಮ್ಮ, ಮಾಯಾವತಿ, ಮನು, ದೊಡ್ಡಮ್ಮ, ಜಯಲಕ್ಷ್ಮಿ ತಮ್ಮಯ್ಯ ಇನ್ನಿತರರು ಇದ್ದರು.

Translate »