ಚಾಮರಾಜನಗರ 4ನೇ ವಾರ್ಡ್‍ನಲ್ಲಿ ಗಲಾಟೆ
ಚಾಮರಾಜನಗರ

ಚಾಮರಾಜನಗರ 4ನೇ ವಾರ್ಡ್‍ನಲ್ಲಿ ಗಲಾಟೆ

September 1, 2018

ಚಾಮರಾಜನಗರ:  ಚಾಮರಾಜನಗರ ನಗರಸಭೆಯ 4ನೇ ವಾರ್ಡ್‍ನಲ್ಲಿ ಮತದಾನದ ಸಂದರ್ಭದಲ್ಲಿ ಸಣ್ಣ ಗಲಾಟೆ ನಡೆದ ಬಗ್ಗೆ ವರದಿ ಆಗಿದೆ. 4ನೇ ವಾರ್ಡ್‍ನ ವ್ಯಾಪ್ತಿಗೆ ಬರುವ ಗಾಳೀಪುರ ಬಡಾವಣೆಯಲ್ಲಿ ಇರುವ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಗಲಾಟೆ ನಡೆದು ನಾಲ್ವರು ಗಾಯಗೊಂಡಿದ್ದರು.

ಬಡಾವಣೆಯ ಸುಬೇರ್, ಆಶಿಕ್, ಅಕ್ರಂ ಪಾಷ, ಸುಹೇಬ್ ಗಾಯಗೊಂಡವ ರಾಗಿದ್ದು, ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರ ಪರ ಪ್ರಚಾರ ಮಾಡು ತ್ತಿದ್ದವರು ಹಾಗೂ ಮತ್ತೊಂದು ಪಕ್ಷದ ಕಾರ್ಯಕರ್ತರ ನಡುವೆ ಜಗಳ ನಡೆಯಿತು ಎನ್ನಲಾಗಿದೆ. ಈ ವೇಳೆ ನಾಲ್ವರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿದರು. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »