ಪಿಎಸ್‍ಐ ದೀಪಕ್‍ಗೆ ಮುಖ್ಯಮಂತ್ರಿ ಪದಕ
ಚಾಮರಾಜನಗರ

ಪಿಎಸ್‍ಐ ದೀಪಕ್‍ಗೆ ಮುಖ್ಯಮಂತ್ರಿ ಪದಕ

August 27, 2018

ಚಾಮರಾಜನಗರ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಕೊಡ ಮಾಡುವ ‘ಮುಖ್ಯಮಂತ್ರಿ ಪದಕ’ಕ್ಕೆ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಎಲ್.ದೀಪಕ್ ಭಾಜನರಾಗಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ದೀಪಕ್ ಅವರು ಸಲ್ಲಿ ಸುತ್ತಿರುವ ಉತ್ತಮ ಸೇವೆಯನ್ನು ಪರಿ ಗಣಿಸಿ ಈ ಪದಕ ನೀಡಲಾಗಿದೆ. ಪ್ರಸ್ತುತ ಚಾಮರಾಜನಗರದ ಸಂಚಾರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್, ಚಾಮ ರಾಜನಗರದಲ್ಲಿ ಸಂಚಾರಿ ನಿಯಮಗಳನ್ನು ಜಾರಿಗೊಳಿಸಲು ಅಪಾರವಾಗಿ ಶ್ರಮಿಸುತ್ತಿ ದ್ದಾರೆ. ಇದಲ್ಲದೇ ಫುಟ್‍ಪಾತ್ ತೆರವು ಕಾರ್ಯಾಚರಣೆಯಲ್ಲೂ ಸಹ ಇವರ ಪಾತ್ರ ಬಹಳ ಪ್ರಮುಖವಾಗಿತ್ತು. ಇವರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಮುಖ್ಯ ಮಂತ್ರಿ ಪದಕ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಪದಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 122 ಅಧಿಕಾರಿ ಮತ್ತು ಸಿಬ್ಬಂದಿಗೆ ದೊರೆತಿದೆ. ಇದರಲ್ಲಿ ಎಲ್.ದೀಪಕ್ ಸಹ ಒಬ್ಬರಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಇವರೊಬ್ಬರು ಮಾತ್ರ ಪ್ರಶಸ್ತಿಗೆ ಆಯ್ಕೆ ಆಗಿರುವುದು ವಿಶೇಷವಾಗಿದೆ.

2007ರಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾದ ದೀಪಕ್ ತರಬೇತಿ ಮುಗಿಸಿ 2010ರಿಂದ ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಮಾಪುರ, ಚಾಮ ರಾಜನಗರ ಟೌನ್, ಗೋಣಿಕೊಪ್ಪ, ರಾಮಸಮುದ್ರ, ಸಂತೇಮರಹಳ್ಳಿಯಲ್ಲಿ ದೀಪಕ್ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಜಿಲ್ಲಾ ಕೇಂದ್ರವಾದ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಹಳ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಾ ಸಾರ್ವಜನಿಕರ ಪ್ರೀತಿ-ಪಾತ್ರಕ್ಕೆ ಪಾತ್ರರಾಗಿದ್ದಾರೆ.

ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿಯಾದ ತಂದೆ ಲಕ್ಷ್ಮಣ್, ತಾಯಿ ಮಂಜುಳ ಅವರ ಪುತ್ರರಾದ ದೀಪಕ್ ಅವರಿಗೆ ಶುಭಾಶಯ ಕೋರುವವರು ಮೊ.9964401919 ಸಂಪರ್ಕಿಸಬಹುದು.

Translate »