ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಅಖಾಡಕ್ಕಿಳಿದ ಕಾಂಗ್ರೆಸ್, ಬಿಜೆಪಿ ನಾಯಕರು
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಅಖಾಡಕ್ಕಿಳಿದ ಕಾಂಗ್ರೆಸ್, ಬಿಜೆಪಿ ನಾಯಕರು

August 27, 2018

ಚಾಮರಾಜನಗರ:  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಯ ಸದಸ್ಯ ಸ್ಥಾನಕ್ಕೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಚಾರದ ಕಾವು ಮತ್ತಷ್ಟು ಬಿರುಸುಗೊಂಡಿದೆ.

ಇದು ನಗರಸಭೆಯ ಚುನಾವಣಾ ಪ್ರಚಾರ… ಪ್ರಚಾರದ ವಿಚಾರ ಏನೆಂದರೆ, ಇದೇ ತಿಂಗಳ 31ರಂದು ನಡೆಯಲಿರುವ ನಗರ ಸಭಾ ಚುನಾವಣೆ…. ವಾರ್ಡ್‍ನಿಂದ…. ಪಕ್ಷದಿಂದ (ಪಕ್ಷೇತರ) ಸ್ಪರ್ಧಿಸಿರುವ …….ಅಭ್ಯರ್ಥಿಗೆ ತಮ್ಮ ಅತ್ಯಮೂಲ್ಯವಾದ ಮತಗಳನ್ನು ನೀಡಿ ಅವರನ್ನ ಜಯ ಶೀಲರನ್ನಾಗಿ ಮಾಡಿ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ವಿನಂತಿ ಎಂಬ ಧ್ವನಿವರ್ಧಕದ ಕೂಗು ಎಲ್ಲಾ ವಾರ್ಡ್‍ಗಳಲ್ಲಿ ಕೇಳಿ ಬರುತ್ತಿದೆ. ಧ್ವನಿವ ರ್ಧಕ ಕಟ್ಟಿರುವ ವಾಹನ ಒಂದೇ ವಾರ್ಡ್ ನಲ್ಲಿ ಸುತ್ತುತ್ತಿರುವುದರಿಂದ ಪದೇ ಪದೇ ಆಗಮಿಸುತ್ತಿದೆ. ಇದರಿಂದ ನಾಗರಿಕರಿಗೆ ಕಿರಿಕಿರಿ ಆಗುತ್ತಿರುವುದು ಸುಳ್ಳಲ್ಲ.

ಧ್ವನಿವರ್ಧಕದ ಆರ್ಭಟ ಒಂದೆಡೆ ಆದರೆ ಅಭ್ಯರ್ಥಿಗಳು ತಮ್ಮ ಪ್ರಚಾರವನ್ನು ಮತ್ತಷ್ಟು ಬಿರುಸುಗೊಳಿಸಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ಹಾಗೂ ಹಿತೈಷಿ ಗಳನ್ನು ಕರೆದುಕೊಂಡು ತಮ್ಮ ವ್ಯಾಪ್ತಿಯ ವಾರ್ಡ್‍ನ ಮನೆ ಮನೆಗೆ ತೆರಳಿ ಮತಯಾಚಿ ಸುತ್ತಿರುವುದು ಜೋರಾಗಿದೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎನ್ನದೆ ರಾಜಕಾರಣಿಗಳ ಗುಂಪು ಪದೇ ಪದೇ ಮನೆ ಬಾಗಿಲಿಗೆ ಆಗಮಿಸುತ್ತಿರುವುದು ಪ್ರಜ್ಞಾವಂತ ನಾಗ ರಿಕರಲ್ಲಿ ಇರಿಸು-ಮುರಿಸು ತರಿಸಿದೆ.

ಬೀದಿಗಿಳಿದ ನಾಯಕರು: ಜಿಲ್ಲಾ ಕೇಂದ್ರ ವಾದ ಚಾಮರಾಜನಗರದಲ್ಲಿ ಇದುವರೆ ವಿಗೆ ಅಭ್ಯರ್ಥಿಗಳು ಹಾಗೂ ಅವರ ಹಿತೈಷಿ ಗಳು ಮಾತ್ರ ಪ್ರಚಾರದಲ್ಲಿ ನಿರತ ರಾಗಿದ್ದರು. ಇಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ವಿವಿಧ ವಾರ್ಡ್ ಗಳಿಗೆ ತೆರಳಿ ಮತಯಾಚಿಸುವ ಮೂಲಕ ಅಖಾಡಕ್ಕೆ ಇಳಿದರು. ಇವರಿಗೆ ಚುನಾ ವಣಾ ಉಸ್ತುವಾರಿ ಹೊತ್ತಿರುವ ಪುಷ್ಟ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಅಧ್ಯಕ್ಷ ಮುನ್ನ, ಚೂಡಾ ಮಾಜಿ ಅಧ್ಯಕ್ಷ ಸೈಯದ್ ರಫಿ, ಮುಖಂಡರಾದ ಪುರುಷೋತ್ತಮ್ ಇತರರು ಸಾಥ್ ನೀಡಿದರು.

ಬಿಜೆಪಿ ನಾಯಕರೂ ಸಹ ಪ್ರಚಾರದಲ್ಲಿ ನಾವೇನೂ ಕಡಿಮೆ ಇಲ್ಲ ಎಂಬಂತೆ ಬೀದಿಗಿಳಿದು ಪ್ರಚಾರ ಆರಂಭಿಸಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯರೂ ಸಹ ಪಕ್ಷದ ಜಿಲ್ಲಾ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಶಾಸಕ ಸಿ.ಎಸ್.ನಿರಂಜ ನ್‍ಕುಮಾರ್, ಮಾಜಿ ಶಾಸಕ ಸಿ.ಗುರು ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರ, ಜಿ.ನಾಗಶ್ರೀ ಪ್ರತಾಪ್, ಎಸ್.ಮಹದೇವಯ್ಯ, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ನೂರೊಂದು ಶೆಟ್ಟಿ, ಸಿ.ಎಸ್.ಮಹದೇವ ನಾಯ್ಕ, ಸುಂದರ್‍ರಾಜು, ಕುಲಗಾಣ ಶಾಂತಮೂರ್ತಿ, ನಾಗೆಂದ್ರಸ್ವಾಮಿ ಇತ ರರು ಪ್ರಚಾರದಲ್ಲಿ ಭಾಗಿಯಾಗಿದ್ದರು.

ಜೆಡಿಎಸ್, ಎಸ್‍ಡಿಪಿಐ, ಬಿಎಸ್‍ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳೂ ಸಹ ಪ್ರಚಾರ ದಲ್ಲಿ ನಿರತರಾಗಿರುವುದು ಕಂಡು ಬಂತು.
ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪಕ್ಷದ ಉಸ್ತುವಾರಿ ಮಂಜುನಾಥ್, ಜಿಲ್ಲಾ ಅಧ್ಯಕ್ಷ ಎನ್.ಕಾಮರಾಜ್, ಮಾಜಿ ಅಧ್ಯಕ್ಷ ಜೆ.ಶಿವಮೂರ್ತಿ, ತಾಲೂಕು ಅಧ್ಯಕ್ಷ ಆಲೂರು ಮಲ್ಲು, ಸಿ.ಕೆ.ರಂಗರಾಮು, ಮಹೇಶ್ ಗೌಡ, ಚಿನ್ನಸ್ವಾಮಿ, ಜಿ.ಎಂ. ಶಂಕರ್, ನಯೀಮ್, ಉಷಾ ಇತರರು ವಿವಿಧ ವಾರ್ಡ್‍ಗಳಿಗೆ ತೆರಳಿ ಮತಯಾಚಿಸಿದರು.

ಎಸ್‍ಡಿಪಿಐ ಅಭ್ಯರ್ಥಿಗಳ ಪರವಾಗಿ ಆ ಪಕ್ಷದ ಮುಖಂಡ ಮಹಮ್ಮದ್ ಅಯೀಮ್ ವಿವಿಧ ವಾರ್ಡ್‍ಗಳಲ್ಲಿ ಮತಯಾಚಿಸಿ ದರು. ಇವರಿಗೆ ಶಿವಣ್ಣ, ಮುಜಾಮಿಲ್ ಇತರರು ಸಾಥ್ ನೀಡಿದರು.

ಬಿಎಸ್‍ಪಿ ಅಭ್ಯರ್ಥಿಗಳೂ ಸಹ ತಮ್ಮ ವಾರ್ಡ್‍ನ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಇನ್ನೂ ಪಕ್ಷೇ ತರ ಅಭ್ಯರ್ಥಿಗಳು ತಮ್ಮ ಶಕ್ತಾನುಸಾರ ಪ್ರಚಾರದಲ್ಲಿ ನಿರತರಾಗಿದ್ದಾರೆ.

Translate »