ಬೆಂಗಳೂರು: ಮೆಟ್ರೋ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದ್ದು, ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಿದ್ದು ಈ ರೈಲಿಗೆ ಬೈಯಪ್ಪನಹಳ್ಳಿಯಿಂದ ಚಾಲನೆ ನೀಡಲಾಗಿದೆ. ಪಿಕ್ ಟೈಂನಲ್ಲಿ ಮೆಟ್ರೋ ಪ್ರಯಾಣ ದುಸ್ತರವಾಗಿತ್ತು. ಹೆಚ್ಚು ಸಂಖ್ಯೆ ಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದ ರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸ ಬೇಕಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಕ್ಕಿದ್ದು, ನೇರಳೆ ಮಾರ್ಗ ದಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ. ಬೈಯ್ಯಪ್ಪನಹಳ್ಳಿ ನಾಯಂಡಹಳ್ಳಿವರೆಗೂ ಆರು ಬೋಗಿಗಳು ಮೆಟ್ರೋ…
ನಾವು ಕಾನೂನಾತ್ಮಕವಾಗಿ ಡಿಕೆಶಿ ಜತೆಗಿದ್ದೇವೆ
June 21, 2018ಬೆಂಗಳೂರು: ನಾವು ಕಾನೂನಾತ್ಮಕವಾಗಿ ಡಿಕೆ ಶಿವಕುಮಾರ್ ಜತೆಗಿದ್ದೇವೆ. ಅವ ರೇಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಘೋಷಿತ ನಗದು ಹಾಗೂ ಸುಳ್ಳು ದಾಖಲೆ ಹೊಂದಿದ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಬೇಕು ಎಂದು ಆರ್ಥಿಕ ಅಪರಾಧ ನ್ಯಾಯಾ ಲಯ ಸಚಿವ ಡಿಕೆ ಶಿವಕುಮಾರ್‍ಗೆ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕಾನೂನು ಪ್ರಕಾರ ಹೋರಾಟ ನಡೆಸುತ್ತಿದ್ದಾರೆ. ಸುದ್ದಿ ಮಾಧ್ಯಮಗಳು ಇದನ್ನು ದೊಡ್ಡ ವಿಷಯವಾಗಿ ಬಿಂಬಿಸುವ ಅಗತ್ಯವಿಲ್ಲ. ಬಿಜೆಪಿಯವರು ಯಾರು…
ಹತ್ತು ದಿನಕ್ಕೊಮ್ಮೆ ತಮಿಳ್ನಾಡಿಗೆ ಕಾವೇರಿ ನೀರು ಕೇಂದ್ರದ ನಿರ್ಣಯಕ್ಕೆ ಸಿಎಂ ಕುಮಾರಸ್ವಾಮಿ ತೀವ್ರ ಆಕ್ಷೇಪ
June 19, 2018ಬೆಂಗಳೂರು: ರಾಜ್ಯದ ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿ ಹತ್ತು ದಿನಕ್ಕೊಮ್ಮೆ ನೀರು ಬಿಡಬೇಕೆಂಬ ಕೇಂದ್ರದ ನಿರ್ಣಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ದೆಹಲಿಯಲ್ಲಿಂದು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಕಾವೇರಿ ನಿರ್ವ ಹಣಾ ಮಂಡಳಿ ರಚಿಸಿ, ರಾಜ್ಯಕ್ಕೆ ಮತ್ತು ರೈತರಿಗೆ ಮಾರಕವಾಗುವಂತಹ ಕೆಲವು ನಿರ್ಣಯ ಕೈಗೊಂಡಿದ್ದಾರೆ. ಕಾವೇರಿ ನಿರ್ವ ಹಣಾಮಂಡಳಿಗಿರುವ ಕೆಲವು ಅಧಿಕಾರ ಮೊಟಕು ಇಲ್ಲವೇ ನಿರ್ಣಯಗಳಲ್ಲಿ…
ಅಡಿಗಡಿಗೆ ಸಿದ್ದರಾಮಯ್ಯ ಅಡ್ಡಗಾಲು
June 19, 2018ರಾಹುಲ್ ಗಾಂಧಿಗೆ ದೂರು ಸಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅತೃಪ್ತರ ಪ್ರತಿಭಟನೆ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು ವಿವರ ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಟಕವಾಗಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಗೆ ದೂರು ನೀಡಿದ್ದಾರೆ. ದೆಹಲಿಯಲ್ಲಿಂದು ರಾಹುಲ್ ಭೇಟಿ ಮಾಡಿ, ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಲ್ಲದೆ, ಸಿದ್ದರಾಮಯ್ಯ ಪರೋಕ್ಷ ವಾಗಿ ಸರ್ಕಾರದ ವಿರುದ್ಧ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು…
ಬಜೆಟ್‍ನಲ್ಲಿ ಸಾಲ ಮನ್ನಾ ಪ್ರಕಟಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಬಿಎಸ್‍ವೈ
June 19, 2018ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂಗಡ ಪತ್ರದಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ತಾವು ಮುಖ್ಯಮಂತ್ರಿ ಯಾಗಿ 24 ಗಂಟೆಯೊಳಗಾಗಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಾಗಿದ್ದು, ಎಲ್ಲಾ ನಿರ್ಧಾರಕ್ಕೂ ಕಾಂಗ್ರೆಸ್ ಅನುಮತಿ ಅಗತ್ಯ ಎಂದು ಅಪ್ಪ-ಮಕ್ಕಳು ಕಾರಣ ಹೇಳುತ್ತಿದ್ದಾರೆ. ಕಾಂಗ್ರೆಸ್ ಬೆಂಬಲ ಪಡೆಯು ವುದಕ್ಕೂ ಮುನ್ನ ಜೆಡಿಎಸ್ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಲು…
ರೈತರ ಸಾಲ ಮನ್ನಾಗೆ ಶೇ.50ರಷ್ಟು ನೆರವು ನೀಡಿ: ನೀತಿ ಆಯೋಗದ ಸಭೆಯಲ್ಲಿ ಕೇಂದ್ರಕ್ಕೆ ಸಿಎಂ ಕುಮಾರಸ್ವಾಮಿ ಮನವಿ
June 18, 2018ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ಋಣಮುಕ್ತ ರನ್ನಾಗಿಸಲು ಸಾಲ ಮನ್ನಾಗೆ ಕೇಂದ್ರ ಸರ್ಕಾರ ಶೇ.50ರಷ್ಟು ಸಹಾಯ ಧನ ಒದಗಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನಡೆದಿರುವ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಸತತ ಬರ, ಬೆಳೆ ಹಾನಿ, ಮಳೆ ಕೊರತೆ ಮತ್ತಿತರ ಕಾರಣಗಳಿಂದ ರಾಜ್ಯದ 85 ಲಕ್ಷ ರೈತರು ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಸಾಲವನ್ನು ಬಾಕಿ ಉಳಿಸಿ ಕೊಂಡಿದ್ದಾರೆ. ಸಾಲ ಕಟ್ಟಲಾಗದ…
ಪ್ರತ್ಯೇಕ ಬಜೆಟ್: ಸಿಎಂ ಪರ ನಿಂತ ಡಿಸಿಎಂ
June 18, 2018ಬೆಂಗಳೂರು: ಹೊಸ ಸರ್ಕಾರ ಬಂದಾಗ ಹೊಸದಾಗಿ ಬಜೆಟ್ ಮಂಡಿ ಸುವುದು ವಾಡಿಕೆ. ಪ್ರತಿ ಯೊಂದು ಸರ್ಕಾರಕ್ಕೆ ಹೊಸ ಕಾರ್ಯಕ್ರಮಗಳಿರುತ್ತವೆ. ಅವುಗಳನ್ನು ಬಜೆಟ್ ಮೂಲಕ ಪ್ರಕಟಿಸುವುದು ಸ್ವಾಭಾವಿಕ ವಾದ ಸಂಪ್ರದಾಯ ಎಂದು ಹೇಳಿಕೆ ನೀಡಿರುವ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಸಮಿತಿ 10 ದಿನಗಳ ಒಳಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿ ಕೊಡಲಿದೆ….
ಜೂ.21ರಿಂದ ಹೆಚ್‍ಡಿಕೆ ಬಜೆಟ್ ಪೂರ್ವಭಾವಿ ಸಭೆ
June 18, 2018ಬೆಂಗಳೂರು: ದೋಸ್ತಿ ಸಂಘರ್ಷದ ನಡುವೆಯೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸುವುದು ಖಚಿತವಾಗಿದೆ. ಈ ಸಂಬಂಧ ಮುಂಗಡ ಪತ್ರ ಸಿದ್ಧತೆಯ ಪೂರ್ವಭಾವಿ ಸಭೆಗೆ ವೇಳಾಪಟ್ಟಿ ತಯಾರಿಸಲಾಗಿದೆ. ಇಲಾಖಾವಾರು ಸಭೆಗೆ ಸಚಿವರು, ಉನ್ನತಾಧಿಕಾರಿಗಳು ಹಾಜರಾಗುವಂತೆಯೂ ಮುಖ್ಯಮಂತ್ರಿಯವರ ಕಾರ್ಯಾಲಯದಿಂದ ಸೂಚನೆ ನೀಡ ಲಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಹಾಲಿ ಆರ್ಥಿಕ ವರ್ಷದ ಬಜೆಟ್ ಮಂಡಿಸಲಾಗಿದೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಹೊಸ ಸೇರ್ಪಡೆಯಿದ್ದರೆ ಪೂರಕ ಮುಂಗಡ ಪತ್ರವನ್ನು ಎಚ್‍ಡಿಕೆ ಮಂಡಿಸಬಹುದು ಎಂಬ ಸಲಹೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದರು. ಇದು ಸಮ್ಮಿಶ್ರ…
ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ
June 18, 2018ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಾಳೆ (ಜೂ.18) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವ ರನ್ನು ಭೇಟಿ ಮಾಡಲಿದ್ದಾರೆ. ಮುಖ್ಯ ಮಂತ್ರಿಗಳ ಪ್ರಧಾನಿ ಭೇಟಿಗೆ ನಾಳೆ ಸಂಜೆ 4.30ಕ್ಕೆ ಸಮಯ ನಿಗದಿಯಾಗಿದೆ. ಈ ವೇಳೆ ರಾಜ್ಯದ ಹಲವಾರು ಯೋಜನೆ ಗಳ ಬಗ್ಗೆ ಮೋದಿ ಅವರ ಸಹಕಾರವನ್ನು ಕುಮಾರಸ್ವಾಮಿ ಕೋರಲಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಕುರಿತು ಗಡ್ಕರಿ ಅವರ ಜೊತೆ ಚರ್ಚಿಸಲಿದ್ದಾರೆ.
ಕರ್ನಾಟಕದ `ಸಾಂದರ್ಭಿಕ ಕೂಸು’ ಎನ್ನುವ ಮುಖ್ಯಮಂತ್ರಿಯವರಿಗೆ ನನ್ನ ಒಂದು ಪಿಸುಮಾತು
June 17, 2018ನಾನು ಒಂದು ಪತ್ರಿಕಾ ಆಫ್ ಸೆಟ್ ಮುದ್ರಣಾಲಯದ ಮಾಲೀಕ ನಾಗಿ ಅದಕ್ಕೆ ಸಂಬಂಧಪಟ್ಟಂತೆ ತಿಳಿದುಕೊಂಡ ತಂತ್ರಜ್ಞಾನದ ಮೊದಲ ವಿಷಯವೆಂದರೆ ‘ನೀರು ಮತ್ತು ತೈಲ ಒಂದಕ್ಕೊಂದು ಮಿಶ್ರಣವಾಗುವುದಿಲ್ಲ.’ ಮೇ 12, 2018ರ ವಿಧಾನಸಭಾ ಚುನಾವಣೆಗೆ ಮುಂಚೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ರಾಜಕೀಯ ಸಿದ್ಧಾಂತಗಳನ್ನು ಮತ್ತು ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟು ಒಬ್ಬರನ್ನೊಬ್ಬರು ಸೋಲಿಸಲು ತಂತ್ರಗಾರಿಕೆಯಲ್ಲಿ ನಿರತರಾದರು. ಅದು ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ, ಆಫ್ ಸೆಟ್ ಮುದ್ರಣದಲ್ಲಿ ಬಳಸುವ ನೀರು ಮತ್ತು ತೈಲದಿಂದ ತಯಾರಿ ಸಿದ ಬಣ್ಣ…