ನಾವು ಕಾನೂನಾತ್ಮಕವಾಗಿ ಡಿಕೆಶಿ ಜತೆಗಿದ್ದೇವೆ
ಮೈಸೂರು

ನಾವು ಕಾನೂನಾತ್ಮಕವಾಗಿ ಡಿಕೆಶಿ ಜತೆಗಿದ್ದೇವೆ

June 21, 2018

ಬೆಂಗಳೂರು: ನಾವು ಕಾನೂನಾತ್ಮಕವಾಗಿ ಡಿಕೆ ಶಿವಕುಮಾರ್ ಜತೆಗಿದ್ದೇವೆ. ಅವ ರೇಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಘೋಷಿತ ನಗದು ಹಾಗೂ ಸುಳ್ಳು ದಾಖಲೆ ಹೊಂದಿದ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಬೇಕು ಎಂದು ಆರ್ಥಿಕ ಅಪರಾಧ ನ್ಯಾಯಾ ಲಯ ಸಚಿವ ಡಿಕೆ ಶಿವಕುಮಾರ್‍ಗೆ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಕಾನೂನು ಪ್ರಕಾರ ಹೋರಾಟ ನಡೆಸುತ್ತಿದ್ದಾರೆ. ಸುದ್ದಿ ಮಾಧ್ಯಮಗಳು ಇದನ್ನು ದೊಡ್ಡ ವಿಷಯವಾಗಿ ಬಿಂಬಿಸುವ ಅಗತ್ಯವಿಲ್ಲ. ಬಿಜೆಪಿಯವರು ಯಾರು ಎಷ್ಟು ಬಾರಿ ರಾಜೀನಾಮೆ ಸಲ್ಲಿಸಿದ್ದಾರೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ಡಾರೆ.

ಡಿಕೆಶಿ ಕಾನೂನು ಪ್ರಕಾರ ನಡೆದಿ ದ್ದಾರೆ: ರಾಜ್ಯದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತನಾಡಿ, ಡಿ.ಕೆ. ಶಿವಕುಮಾರ್ ಕಾನೂನು ಪ್ರಕಾರ ಆದಾಯ ತೆರಿಗೆ ಇಲಾಖೆಗೆ ದಾಖಲೆ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರನ್ನೇ ಗುರುತಿಸಿ ಐಟಿ ದಾಳಿ ನಡೆಸುವ ಕೇಂದ್ರ ಸರ್ಕಾರದ ನಡೆ ಸಂಬಂಧ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಐಟಿ ಇಲಾಖೆಯನ್ನು ಕೇಂದ್ರ ದುರುಪ ಯೋಗ ಪಡಿಸಿಕೊಳ್ಳುತ್ತಿದೆ ಎಂದರು.

Translate »