ಯೋಗ ಪಟುಗಳಿಗೆ ಉಪಹಾರ ವ್ಯವಸ್ಥೆ:  ಡಿಸಿ ಅಭಿರಾಮ್
ಮೈಸೂರು

ಯೋಗ ಪಟುಗಳಿಗೆ ಉಪಹಾರ ವ್ಯವಸ್ಥೆ:  ಡಿಸಿ ಅಭಿರಾಮ್

June 21, 2018

ಮೈಸೂರು: ಮೈಸೂರು ರೇಸ್‍ಕೋರ್ಸ್ ಆವರಣದಲ್ಲಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನಕ್ಕಾಗಿ 70 ಬ್ಲಾಕ್‍ಗಳನ್ನು ನಿರ್ಮಿಸಿದ್ದು, ಪ್ರತಿ ಬ್ಲಾಕ್‍ನಲ್ಲಿ ಸುಮಾರು 1200 ಮಂದಿ ಯೋಗಪಟು ಗಳು ಪ್ರದರ್ಶನ ನೀಡಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ನಾಳೆ(ಜೂ.21) ಇಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂ.21ರಂದು ಬೆಳಿಗ್ಗೆ 7 ಗಂಟೆಗೆ ವಿಶ್ವ ಯೋಗ ದಿನ ಆಚರಿಸುತ್ತಿದ್ದು, ಕಳೆದ ಬಾರಿಗಿಂತ ಅಂದರೆ, ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಬರುವ ಎಲ್ಲಾ ಯೋಗಪಟುಗಳಿಗೂ ಉಪಹಾರದ ವ್ಯವಸ್ಥೆ ಮಾಡ ಲಾಗಿದೆ ಎಂದರು. ಯೋಗ ಪ್ರದರ್ಶನಕ್ಕಾಗಿ ಸುಮಾರು 70 ಬ್ಲಾಕ್‍ಗಳನ್ನು ಮಾಡಿದ್ದು, ಪ್ರತಿ ಬ್ಲಾಕ್‍ನಲ್ಲಿ 4 ಸಬ್‍ಬ್ಲಾಕ್‍ಗಳು ಇರುತ್ತವೆ. ಪ್ರತಿ ಬ್ಲಾಕ್‍ನಲ್ಲಿ 1200 ಯೋಗಪಟುಗಳು ಯೋಗ ಮಾಡಬಹುದು. ಕಳೆದ ವರ್ಷಕ್ಕಿಂತ ದೊಡ್ಡ ವೇದಿಕೆಯನ್ನು ನಿರ್ಮಿಸಿದ್ದು, ಯೋಗ ಶಿಕ್ಷಕರಿಗೆ ಪ್ರತ್ಯೇಕ ವೇದಿಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪ್ರತಿ ಬ್ಲಾಕ್‍ಗೆ 1 ಮಿನಿ ವೇದಿಕೆಯಂತೆ 70 ಮಿನಿ ವೇದಿಕೆಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಮಾಧ್ಯಮದವರು ಫೋಟೋ ಮತ್ತು ವೀಡಿಯೋ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ
6 ಅಡಿ ಎತ್ತರದ ವೇದಿಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು. ಪಿಯು, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ವೇದಿಕೆಯ ಎಡಭಾಗ, ವಿದೇ ಶಿಗರು, ವಿಕಲಚೇತನರು ಹಾಗೂ ಗಣ್ಯರಿಗೆ ವೇದಿಕೆ ಮುಂಭಾಗ ಮತ್ತು 5 ಯೋಗ ಸಂಸ್ಥೆ ಗಳಿಂದ ಆಗಮಿಸುವ ಯೋಗಪಟುಗಳಿಗೆ ಮಧ್ಯ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಜೆಎಸ್‍ಎಸ್ ಸಂಸ್ಥೆಯಿಂದ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುವ ನಿರೀಕ್ಷೆಯಿದ್ದು, ವೇದಿಕೆ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಯೋಗಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

Translate »