ಅಡಿಗಡಿಗೆ ಸಿದ್ದರಾಮಯ್ಯ ಅಡ್ಡಗಾಲು
ಮೈಸೂರು

ಅಡಿಗಡಿಗೆ ಸಿದ್ದರಾಮಯ್ಯ ಅಡ್ಡಗಾಲು

June 19, 2018
  • ರಾಹುಲ್ ಗಾಂಧಿಗೆ ದೂರು ಸಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
  • ಅತೃಪ್ತರ ಪ್ರತಿಭಟನೆ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು ವಿವರ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಟಕವಾಗಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಗೆ ದೂರು ನೀಡಿದ್ದಾರೆ.

ದೆಹಲಿಯಲ್ಲಿಂದು ರಾಹುಲ್ ಭೇಟಿ ಮಾಡಿ, ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಲ್ಲದೆ, ಸಿದ್ದರಾಮಯ್ಯ ಪರೋಕ್ಷ ವಾಗಿ ಸರ್ಕಾರದ ವಿರುದ್ಧ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಎಳೆ ಎಳೆ ಯಾಗಿ ಬಿಡಿಸಿಟ್ಟಿದ್ದಾರೆ. ಮೈತ್ರಿ ಸರ್ಕಾರದ ಸಂಪುಟ ರಚನೆಯ ನಂತರ ಅವಕಾಶ ದೊರೆಯದ ನಿಮ್ಮ ಪಕ್ಷದ ಕೆಲವು ನಾಯ ಕರು ಬಂಡಾಯ ಏಳಲು ಸಿದ್ದರಾಮಯ್ಯ ನವರೇ ಕಾರಣ ಎಂದಿದ್ದಾರೆ. ಈ ವಿಷಯ ವನ್ನು ಹಿಂದೆಯೇ ತಮ್ಮ ಗಮನಕ್ಕೆ ತಂದಿ ದ್ದೇನೆ ಮತ್ತು ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್ ಅವರ ಗಮನಕ್ಕೂ ತಂದಿದ್ದೇನೆ.

ಬಂಡಾ ಯದ ಹಿಂದೆ ನಿಂತಿದ್ದ ಕೆಲವು ನಾಯಕರ ಹೆಸ ರನ್ನು ಪ್ರಸ್ತಾಪಿಸಿ, ಅವ ರಿಗೂ ಸಿದ್ದರಾಮಯ್ಯ ನವರಿಗೂ ನಂಟಿರುವ ಸಾಕ್ಷ್ಯಗಳನ್ನು ಬಿಡಿಸಿಟ್ಟಿ ದ್ದಾರೆ. ಒಂದೆಡೆ ನಾಯ ಕರನ್ನು ಎತ್ತಿಕಟ್ಟುವ ಜೊತೆಗೆ ಮತ್ತೊಂದೆಡೆ ಸಂಪುಟ ದಲ್ಲಿ ಅವಕಾಶ ದೊರೆಯದ ಕೆಲವು ಸಮಾಜಗಳನ್ನು ಬೀದಿಗಿಳಿಸಿ ಹೋರಾಟ ಮಾಡಿಸಿದ್ದರಲ್ಲಿ ಇವರ ಕೈವಾಡವಿದೆ ಎಂದು ನೇರವಾಗಿ ಹೇಳಿದ್ದಾರೆ. ಸಂಪುಟದಲ್ಲಿ ಸ್ಥಾನ ಖಾಲಿ ಉಳಿಸಿಕೊಂಡಿರುವ ನಿಮ್ಮ ಕೋಟಾವನ್ನು ಯಾವಾಗಲಾದರೂ ಭರ್ತಿ ಮಾಡಿ, ಈ ಸ್ಥಾನಗಳಿಗೆ ಯಾರನ್ನಾದರೂ ಮಂತ್ರಿ ಮಾಡಿ, ನನ್ನ ಅಭ್ಯಂತರವಿಲ್ಲ.

ನಿಮ್ಮ ಆಶಯದಂತೆ ಅವರು ಕಾರ್ಯನಿರ್ವಹಿಸಿ ಸರ್ಕಾರ ಮತ್ತು ಪಕ್ಷಕ್ಕೆ ಒಳ್ಳೆ ಹೆಸರು ತಂದು ಕೊಡಲಿ ಎಂದಿರುವುದಲ್ಲದೆ, ನಿಮ್ಮ ಪಕ್ಷದ ಕೆಲವು ಮುಖಂಡರಿಗೆ ಆಗುತ್ತಿರುವ ಕಿರುಕುಳಗಳ ಬಗ್ಗೆಯೂ ವಿವರಿಸಿದ್ದಾರೆ. ಸಂಪುಟ ವಿಸ್ತರಿಸಿ, ಕೆಲವು ಪ್ರಮುಖ ನಿಗಮ ಮಂಡಳಿಗಳಿಗೆ ಅತೃಪ್ತ ಶಾಸಕರನ್ನು ನೇಮಕ ಮಾಡಿದರೆ, ಸದಸ್ಯರಲ್ಲಿರುವ ಅಸಮಾಧಾನ ಹೋಗಲಾಡಿಸಬಹುದೆಂಬ ಅಭಿಪ್ರಾಯ ನನ್ನದು.

ಬಂಡಾಯ ಒಂದು ಹಂತದಲ್ಲಿ ಶಮನ ಮಾಡುವ ನಿಮ್ಮ ಪ್ರಯತ್ನ ಯಶಸ್ವಿಯಾಗುತ್ತಿದ್ದಂತೆ ಮೈತ್ರಿ ಸರ್ಕಾರದಲ್ಲಿ ಹೊಸ ಬಜೆಟ್ ಮಂಡನೆ ಮಾಡುವ ಅಗತ್ಯವಿಲ್ಲವೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದು ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುವುದರ ಜೊತೆಗೆ ಪ್ರತಿಪಕ್ಷಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಹಾರವಾಗಿ ಪರಿಣಮಿಸಿದೆ. ರೈತರ ಕೃಷಿ ಸಾಲ ಮನ್ನಾ ವಿಚಾರದಲ್ಲಿ ನಾನು ಹಿಂದೆ ಸರಿಯುವುದಿಲ್ಲ. ಸಾಲ ಮನ್ನಾಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಕ್ರೋಢೀಕರಿಸಿ, ನಿಮ್ಮ ಹೆಸರನ್ನು ಉಳಿಸುತ್ತೇನೆ.

ಈ ಸಲುವಾಗಿ ಮೈತ್ರಿ ಸರ್ಕಾರ ಹೊಸ ಬಜೆಟ್ ಮಂಡನೆ ಮಾಡಲಿದೆ ಎಂಬುದೂ ಸೇರಿದಂತೆ ಕೆಲವು ವಿಷಯಗಳನ್ನು ರಾಹುಲ್ ಗಮನಕ್ಕೆ ತಂದಿದ್ದಾರೆ. ಅವರು, ಎಲ್ಲವನ್ನೂ ಆಲಿಸಿ, ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಯಲು ತಾವು ಬೆಂಬಲವಾಗಿ ನಿಲ್ಲುವುದಾಗಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.

Translate »