ಬೇಲೂರು: ಯಾವುದೇ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರ ರಜೆ ಘೋಷಣೆ ಮಾಡಬಾರದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.ಪಟ್ಟಣದ ನೆಹರು ನಗರದಲ್ಲಿರುವ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ನೌಕರರಿಗೆ ರಜೆಗಳು ಹೆಚ್ಚಾಗಿದೆ. ಇದರ ಮಧ್ಯೆ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವ ಸಂದರ್ಭ ದಲ್ಲಿ ರಜೆ ನೀಡಿದರೆ ಜನರ ಕೆಲಸಗಳು ಕುಂಠಿತ ಗೊಳ್ಳುತ್ತದೆ. ಹಬ್ಬ ಹರಿದಿನ…
ಹಿರಿಯ ಸಾಹಿತಿ ಜ.ಹೋ.ನಾ ಇನ್ನಿಲ್ಲ
November 11, 2018ಹಾಸನ: ರಾಜ್ಯ ಕಂಡ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಜಿಲ್ಲೆಯ ಲೇಖಕ, ಬರಹಗಾರ, ಚಿಂತಕ ಮತ್ತು ರಾಷ್ಟ್ರಕವಿ ಕುವೆಂಪು ಹಾಗೂ ಸ್ವಾಮಿ ವಿವೇಕಾನಂದರ ಅನುಯಾಯಿ ಯಾಗಿದ್ದ ಹಿರಿಯ ಸಾಹಿತಿ ಮಾರ್ಗದರ್ಶಕರು ಜ.ಹೋ. ನಾರಾಯಣ ಸ್ವಾಮಿಯವರು ಶುಕ್ರವಾರ ಮಧ್ಯಾಹ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಸೇರಿದಂತೆ ಓರ್ವ ಮಗ, ಯುವ ಸಾಹಿತಿ ತೇಜಸ್ವಿ, ಮಗಳು ಜ.ನಾ.ತೇಜಶ್ರೀ ಸೇರಿದಂತೆ ಅಪಾರ ಬಂಧು ಬಳಗ, ಸ್ನೇಹಿತರು, ಹಿತೈಷಿಗಳು ಹಾಗೂ ಅಪಾರ ಶಿಷ್ಯ ವರ್ಗದವರನ್ನು ಅಗಲಿದ್ದಾರೆ. ಶನಿವಾರ ಬೆಳಿಗ್ಗೆ ಜಿಲ್ಲಾ ಕನ್ನಡ…
ಹುತಾತ್ಮ ವೀರ ಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ
November 11, 2018ಅರಸೀಕೆರೆ: ರಕ್ತದಾನ ಇನ್ನಿತರೇ ದಾನಗಳಿಗಿಂತ ಶ್ರೇಷ್ಠವಾದದ್ದು.ಇಂತಹ ಮಹಾನ್ ಕಾರ್ಯದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಕೊರತೆ ಇದ್ದು ರಕ್ತದಾನ ಮಾಡುವವರಿಗಿಂತ ರಕ್ತ ಪಡೆಯುವವರೇ ಹೆಚ್ಚಿದ್ದಾರೆ ಎಂದು ಫಿಸಿಯೋ ಥೆರಪಿ ತಜ್ಞ ಡಾ.ಮಧು ಹೇಳಿದರು. ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮ ರಾದ ವೀರ ಯೋಧರ ಸ್ಮಾರಣಾರ್ಥ ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ರಕ್ತನಿಧಿ ಕೇಂದ್ರ,ಹೆಚ್.ಡಿ.ಎಫ್.ಸಿ ಬ್ಯಾಂಕ್, ಐ ವಿಲ್ ಹೆಲ್ಪ್ ಸಂಸ್ಥೆ ಮತ್ತು ದುರ್ಜಾ ಗಣ ಪತಿ ಗೆಳೆಯರ ಬಳಗ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ…
ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ತೆರೆ
November 10, 2018ಹಾಸನ: ಈ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ಶುಕ್ರವಾರ ಮದ್ಯಾಹ್ನ 1-17 ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ದೇವಾಲಯಕ್ಕೆ ಬೀಗ ಹಾಕುವ ಮೂಲಕ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು. ಕಳೆದ ವರ್ಷದಷ್ಟು ಈ ಬಾರಿ ಹೆಚ್ಚಿನ ಭಕ್ತರ ಸಂಖ್ಯೆ ಬಾರದಿದ್ದರೂ ದಿನದ 22 ಗಂಟೆಗಳ ಕಾಲ ಭಕ್ತಾಧಿ ಗಳಿಗೆ ದೇವಿ ದರ್ಶನದ ಭಾಗ್ಯ ನೀಡಲಾಗಿತ್ತು. ಕೊನೆಯ ದಿವಸ ಸಂಪ್ರ ದಾಯದಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಉಪ ವಿಭಾಗಾ ಧಿಕಾರಿ ಹೆಚ್.ಎಲ್. ನಾಗರಾಜು, ತಹಸೀಲ್ದಾರ್…
ಹಾಸನಾಂಬೆ ದೇವಾಲಯದ ಹುಂಡಿ ಸೇರಿ 2.48 ಕೋಟಿ ಆದಾಯ
November 10, 2018ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಅದಿ ದೇವತೆ ಹಾಸನಾಂಬೆ ದರ್ಶನ ಈ ವರ್ಷ ಮುಗಿದಿದ್ದು, ಭಕ್ತರಿಂದ ಸಂಗ್ರಹವಾದ ಮತ್ತು 1 ಸಾವಿರ ರೂ ಮತ್ತು 300 ರೂಗಳ ವಿಶೇಷ ದರ್ಶನದ ಟಿಕೆಟ್‍ನಿಂದ ಸಂಗ್ರಹವಾದ ಹಣವನ್ನು ದೇವಾಲಯದ ಆವರಣದಲ್ಲಿ ಸ್ಕೌಟ್ ಅಂಡ್ ಗೈಡ್ಸ್, ಕಂದಾಯ ಅಧಿಕಾರಿಗಳು ಸೇರಿದಂತೆ ಇತರರು ಶುಕ್ರವಾರ ಬೆಳಗಿನಿಂದಲೇ ಏಣಿಕೆ ಕಾರ್ಯ ನಡೆಸಿದ್ದು, ಹುಂಡಿಯಲ್ಲಿ 89,67,331 ರೂ. ಸಂಗ್ರಹವಾಗಿದೆ. ಹುಂಡಿ ಹಣದ ಜೊತೆಗೆ ಟಿಕೆಟ್ ಲಾಡು, ಸೀರೆ ಮಾರಾಟದಿಂದ 1,58,61,440 ರೂ. ಸೇರಿದಂತೆ ದೇವಾ ಲಯಕ್ಕೆ…
ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ
November 10, 2018ಅರಸೀಕೆರೆ: ಇತಿಹಾಸ ಪ್ರಸಿದ್ದವಾದ ನಗರದ ಶ್ರೀ ಪ್ರಸನ್ನ ಗಣಪತಿ 77 ನೇ ವರ್ಷದ ವಿಸರ್ಜನಾ ಮಹೋ ತ್ಸವ ಮೆರವಣಿಗೆಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಇವರು ಈಡುಗಾಯಿ ಸೇವೆ ಸಲ್ಲಿಸುವುದರ ಮೂಲಕ ಇವರು ಶುಕ್ರವಾರ ಸಂಜೆ ಚಾಲನೆ ನೀಡಿದರು. ನಗರದ ಗಾಂಧಿ ಮೈದಾನದಲ್ಲಿರುವ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ದಿನವಾದ ಶುಕ್ರವಾರದಂದು ಮಹಾ ಮಂಗಳಾರತಿ ನಂತರ ಆಸ್ಥಾನ ಮಂಟಪದಿಂದ ವಾಚನಾಲಯ ರಸ್ತೆಗೆ ಬರಮಾಡಿಕೊಳ್ಳಲಾಯಿತು.ಈ ಸಂದರ್ಭ ದಲ್ಲಿ ಪುಷ್ಪಲಂಕೃತವಾದ ವಾಹನದಲ್ಲಿ ಶೃಂಗರಿಸಿದ ಗಣಪತಿ ಮೆರವಣಿಗೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಸಿರು…
ಇಂದಿನಿಂದ ಸುತ್ತೂರು ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಲಿಂಗಧಾರಣೆ
November 9, 2018ರಾಮನಾಥಪುರ: ನವೆಂಬರ್ 9 ರಿಂದ ಡಿಸೆಂಬರ್ 2 ರವರೆಗೆ 12 ದಿನಗಳ ಕಾಲ ಅರಕಲಗೂಡು, ಸೋಮವಾರ ಪೇಟೆ, ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಿಂಗಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುತ್ತೂರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಮುಖ್ಯ ಸ್ಥರು ಶ್ರೀ ಸೋಮಶೇಖರ ಸ್ವಾಮೀಜಿ ತಿಳಿಸಿದರು. ರಾಮನಾಥಪುರ ಹೋಬಳಿ ಕೋಟ ವಾಳು, ಗೊಬಳಿಕಾವಲು ಮುಂತಾದ ಗ್ರಾಮ ಗಳಿಗೆ ಭೇಟಿ ನೀಡಿದ ನಂತರ ರಾಮನಾಥ ಪುರದಲ್ಲಿ ಮಾತನಾಡಿದ ಅವರು, ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಹಾಸನ,…
ಗಂಡನ ಕಿರುಕುಳಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಗೃಹಿಣಿ ಆತ್ಮಹತ್ಯೆ
November 8, 2018ಚನ್ನರಾಯಪಟ್ಟಣ: ಗಂಡನ ಕಿರುಕುಳ ತಾಳಲಾರದೆ ಗೃಹಿಣಿಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ದಿಂಡಗನೂರು ಗ್ರಾಮದ ರಮೇಶ್ ಎಂಬವರ ಪತ್ನಿ ರಾಧಾ(31) ಅವರೇ ತಮ್ಮ ಮಕ್ಕಳಾದ ಭರತ್(4) ಮತ್ತು ಕಾಂತರಾಜು(6) ಎಂಬವರೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿ ಯುತ್ತಿದ್ದಂತೆ ಚನ್ನರಾಯಪಟ್ಟಣ ಪಟ್ಟಣ ಠಾಣೆ ಪೊಲೀಸರು ಅಗ್ನಿ ಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಶೋಧ ಕಾರ್ಯ ಕೈಗೊಂಡಿದ್ದು, ರಾಧಾ ಅವರ ಮೃತದೇಹ ಪತ್ತೆಯಾಗಿದ್ದು, ಇಬ್ಬರು…
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರದಾನ
November 5, 2018ಶ್ರವಣಬೆಳಗೊಳ: ಯಾವುದೇ ವಿವಾದಗಳಿಗೆ ಒಳಗಾಗದೇ ಸುಮಾರು 48 ವರ್ಷಗಳ ಕಾಲ ಸಮಾಜಕ್ಕೆ ಹಲ ವಾರು ಕೊಡುಗೆಗಳನ್ನು ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನೀಡಿ ದ್ದಾರೆ. ಅಹಿಂಸೆ, ತ್ಯಾಗ ಹಾಗೂ ಶಾಂತಿ ಯಿಂದ ಜೈನ ಪರಂಪರೆಯನ್ನು ಬೆಳಗಿದ ಇವರಿಗೆ ಪ್ರಶಸ್ತಿ ದೊರೆತಿರುವುದು ನಮ್ಮ ಹೆಮ್ಮೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ “ಶ್ರೀ ಭಗವಾನ್…
ಸಚಿವೆ ಜಯಮಾಲಾ, ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಾಸನಾಂಬೆ ದರ್ಶನ
November 5, 2018ಹಾಸನ: ಹಾಸನಾಂಬೆ ದೇವಿಯನ್ನು ನೋಡಬೇಕು ಎಂಬುದು ನನ್ನ ಬಹು ದಿನದ ಕನಸು, ವರ್ಷಕ್ಕೊಮ್ಮೆ ಬಾಗಿಲು ತೆರೆಯುತ್ತದೆ ಎಂದು ಕೇಳಲಾಗಿತ್ತು. ಈಗ ಮೊಟ್ಟ ಮೊದಲ ಬಾರಿಗೆ ಹಾಸನಾಂಬೆ ದೇವಿ ದರ್ಶನ ಮಾಡಿದ್ದೇನೆ. ತಾಯಿಯನ್ನು ತುಂಬಾ ಹತ್ತಿರದಲ್ಲಿ ನೋಡುವ ಭಾಗ್ಯ ದೊರಕಿರುವುದು ನನ್ನ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ತಿಳಿಸಿದರು. ಹಾಸನಾಂಬೆ ದರ್ಶನ ಪಡೆದ ನಂತರ ದೇವಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಜಯಂತಿ ಮಾಡಲು ಸರಕಾರದ ಆದೇಶವಿದ್ದಾಗ…