ಹಿರಿಯ ಸಾಹಿತಿ ಜ.ಹೋ.ನಾ ಇನ್ನಿಲ್ಲ
ಹಾಸನ

ಹಿರಿಯ ಸಾಹಿತಿ ಜ.ಹೋ.ನಾ ಇನ್ನಿಲ್ಲ

November 11, 2018

ಹಾಸನ: ರಾಜ್ಯ ಕಂಡ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಜಿಲ್ಲೆಯ ಲೇಖಕ, ಬರಹಗಾರ, ಚಿಂತಕ ಮತ್ತು ರಾಷ್ಟ್ರಕವಿ ಕುವೆಂಪು ಹಾಗೂ ಸ್ವಾಮಿ ವಿವೇಕಾನಂದರ ಅನುಯಾಯಿ ಯಾಗಿದ್ದ ಹಿರಿಯ ಸಾಹಿತಿ ಮಾರ್ಗದರ್ಶಕರು ಜ.ಹೋ. ನಾರಾಯಣ ಸ್ವಾಮಿಯವರು ಶುಕ್ರವಾರ ಮಧ್ಯಾಹ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಸೇರಿದಂತೆ ಓರ್ವ ಮಗ, ಯುವ ಸಾಹಿತಿ ತೇಜಸ್ವಿ, ಮಗಳು ಜ.ನಾ.ತೇಜಶ್ರೀ ಸೇರಿದಂತೆ ಅಪಾರ ಬಂಧು ಬಳಗ, ಸ್ನೇಹಿತರು, ಹಿತೈಷಿಗಳು ಹಾಗೂ ಅಪಾರ ಶಿಷ್ಯ ವರ್ಗದವರನ್ನು ಅಗಲಿದ್ದಾರೆ.

ಶನಿವಾರ ಬೆಳಿಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಗಲಿದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ವಿವಿಧ ಜನಪರ ಸಂಘಟನೆಗಳ ಮುಖಂಡರು, ಪದಾಧಿಕಾರಿ ಗಳು, ಸಾಹಿತಿಗಳು, ಹೋರಾಟಗಾರರು ಜ.ಹೊ. ನಾರಾಯಣ ಸ್ವಾಮಿ ಅವರ ಸಾಹಿತ್ಯ ಸೇವೆ, ಹಿರಿಯ ಸಾಹಿತಿ ಜ.ಹೊ.ನಾಗೆ ಅಂತಿಮ ನಮನ ಹಾಗೂ ವೈಚಾರಿಕ ನೆಲೆಗಟ್ಟಿನ ಬಗ್ಗೆ ಅವರ ಅಖಂಡ ನಿಲುವುಗಳನ್ನು ಸ್ಮರಿಸಿದರು. ಬಳಿಕ ಜ.ಹೋ.ನಾ ಅವರ ಪಾರ್ಥಿವ ಶರೀರವನ್ನು ಹಾಸನ ಕನ್ನಡ ಸಾಹಿತ್ಯ ಪರಿಷತ್ ಆವರಣಕ್ಕೆ ತರಲಾಯಿತಲ್ಲದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.ಕುವೆಂಪು ಹಾಗೂ ಸ್ವಾಮಿ ವಿವೇಕಾನಂದರ ಅವರ ಅನುಯಾಯಿಗಳಾಗಿದ್ದ ಜ.ಹೋ.ನ ಅವರ ಪಾರ್ಥಿವ ಶರೀರವನ್ನು ರಾಷ್ಟ್ರಕವಿ ಕುವೆಂಪು ಪ್ರತಿಮೆ ಮುಂಭಾಗ ವಿರಿಸಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ವಿವಿಧ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಸಾರ್ವ ಜನಿಕರು ಜ.ಹೊ.ನ ಅಂತಿಮ ದರ್ಶನ ಪಡೆದು ಇದೆ ವೇಳೆ ಮರುಗಿ ದರು. ನಿನ್ನೆ ರಾತ್ರಿಯಿಂದಲೇ ಜ.ಹೊ.ನಾರಾಯಣಸ್ವಾಮಿ ಅವರ ಮನೆಗೆ ಭೇಟಿ ನೀಡಿದ ಹಲವಾರು ಗಣ್ಯರು, ಸಾಹಿತಿಗಳು, ಜನ ಪ್ರತಿನಿಧಿಗಳು ಜಹೊ.ನಾರಾಯಣಸ್ವಾಮಿ ಅವರ ಅಂತಿಮ ದರ್ಶನ ಪಡೆದರು.

ಈ ಸಂದರ್ಭ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾ ಧ್ಯಕ್ಷ ರವಿನಾಕಲಗೂಡು, ಮಾಜಿ ಅಧ್ಯಕ್ಷ ಹೆಚ್.ಬಿ. ಮದನ್‍ಗೌಡ, ತಾಲೂಕು ಅಧ್ಯಕ್ಷ ಜಿ.ಓ.ಮಹಾಂತಪ್ಪ, ಸಾಹಿತಿ ಹಾಗೂ ವಿಚಾರ ವಾದಿ ಕೆ.ಎಸ್. ಭಗವಾನ್, ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಪ್ರಜೋದಯ ದಿನಪತ್ರಿಕೆ ಸಂಪಾದಕ ಜೆ.ಆರ್. ಕೆಂಚೇಗೌಡ, ಚಿಂತಕರು ಭಗವಾನ್, ಹಿರಿಯ ಜಾನಪದ ಕಲಾವಿದ ಕಟ್ಟಿಕೆರೆ ಹಿರಿಯಣ್ಣ, ಸಾಹಿತಿ ಚನ್ನೇಗೌಡ, ಅಪ್ಪಾಜಿಗೌಡ, ಶಿವಶಂಕರ್, ತಿ. ರಾಮಕೃಷ್ಣಯ್ಯ, ಸಾಹಿತಿ ಸುಶೀಲಸೋಮಶೇಖರ್, ಉಪನ್ಯಾಸಕ ಸಿ.ಚ. ಯತೀಶ್ವರ್, ಹಾಡಿಳ್ಳಿ ನಾಗರಾಜು, ಡಾ. ಪಾಲಾಕ್ಷ, ಕಲ್ಲಳ್ಳಿ ಹರೀಶ್, ಹೆತ್ತೂರು ನಾಗರಾಜು, ಕೆ.ಟಿ. ಶಿವಪ್ರಸಾದ್, ಚಂದ್ರ ಕಾಂತ್ ಪಡೆಸೂರು, ಹೆಚ್.ಕೆ. ಜವರೇಗೌಡ, ಹೆಮ್ಮಿಗೆ ಮೋಹನ್, ನಂಜುಂಡೇಗೌಡ, ಕೊಟ್ರೇಸ್ ಉಪ್ಪಾರ್ ಇತರರು ಇದ್ದರು.

Translate »