ಬೇಲೂರು: ಯಾವುದೇ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರ ರಜೆ ಘೋಷಣೆ ಮಾಡಬಾರದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.ಪಟ್ಟಣದ ನೆಹರು ನಗರದಲ್ಲಿರುವ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ನೌಕರರಿಗೆ ರಜೆಗಳು ಹೆಚ್ಚಾಗಿದೆ. ಇದರ ಮಧ್ಯೆ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವ ಸಂದರ್ಭ ದಲ್ಲಿ ರಜೆ ನೀಡಿದರೆ ಜನರ ಕೆಲಸಗಳು ಕುಂಠಿತ ಗೊಳ್ಳುತ್ತದೆ. ಹಬ್ಬ ಹರಿದಿನ ಜಯಂತಿಗಳ ಸರ್ಕಾರಿ ರಜೆ ಕಳೆದು ಕೇವಲ ನೂರ ಎಂಭತ್ತು ದಿವಸ ಮಾತ್ರ ನೌಕರರು ಕೆಲಸ ಮಾಡು ವಂತಾಗಿದೆ. ಇದರಿಂದ ಶಾಲಾ ಮಕ್ಕಳ ವಿದ್ಯಾ ಭ್ಯಾಸದಲ್ಲಿ ಹಾಗೂ ಸಾರ್ವಜನಿಕ ಕೆಲಸ ಗಳಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಯಿಂದ ನಡೆಸುವ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗ ಬೇಕು. ಆದರೆ ಬಹುತೇಕ ಸರ್ಕಾರಿ ಕಾರ್ಯ ಕ್ರಮಗಳಿಗೆ ಅಧಿಕಾರಿಗಳು ಗೈರು ಹಾಜ ರಾಗುತ್ತಿದ್ದಾರೆ. ಇನ್ನು ಮುಂದೆ ಅಧಿಕಾರಿ ಗಳು ಸರ್ಕಾರಿ ಕಾರ್ಯಕ್ರಮಗಳಿಗೆ ಕಡ್ಡಾ ಯವಾಗಿ ಹಾಜರಾಗಬೇಕು . ಇಲ್ಲದಿದ್ದರೆ ರಾಷ್ಟ್ರೀಯ ಹಬ್ಬಗಳಿಗೆ ಅಗೌರವ ಸಲ್ಲಿಸಿ ದಂತಾಗುತ್ತೆ. ಎಲ್ಲ ಜಯಂತಿಗಳಿಗೂ ಅಧಿಕಾರಿಗಳು ಕಡ್ಡಾಯವಾಗಿ ಬರಬೇಕು ಎಂದು ಸೂಚಿಸುವಂತೆ ತಾಪಂ ಸಿಓಗೆ ತಾಕೀತು ಮಾಡಿದರು.
ಟಿಪ್ಪು ಸುಲ್ತಾನ್ ಒಬ್ಬ ಉತ್ತಮ ಆಡಳಿತ ಗಾರರಾಗಿದ್ದು ಕಂದಾಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರುವ ಮೂಲಕ ಹೊಸ ಯೋಜನೆಗಳಿಗೆ ನಾಂದಿ ಹಾಡಿ ದರು ಅಲ್ಲದೆ ರೈತ ಪರ ಉತ್ತಮ ಆಡ ಳಿತ ನೀಡಿದ್ದ ಅವರು ಅಂದಿನ ಕಾಲದಲ್ಲೇ ಜಮೀ ನ್ದಾರಿ ಪದ್ಧತಿಯನ್ನು ರದ್ದುಗೊಳಿಸಿ ಉಳು ವವನಿಗೇ ಭೂಮಿ ಎನ್ನುವ ಪ್ರಪ್ರಥಮ ವಾದ ಕಾನೂನನ್ನು ತಂದು ಜೀತಗಾರಿಕೆ ಯಿಂದ ಮುಕ್ತಿ ನೀಡಿದ್ದರು. ಇನ್ನು ಟಿಪ್ಪು ಸುಲ್ತಾನ್ ಕನ್ನಡ ಭಾಷೆ ನುಡಿಗೆ ಮತ್ತು ಹಿಂದೂ ಧರ್ಮಕ್ಕೇ ಟಿಪ್ಪುಸುಲ್ತಾನ ತನ್ನದೇ ಆದ ಕಾಣಿಕೆಯನ್ನು ನೀಡಿದ್ದಾರೆ ಎಂದರು.
ಮುಸಲ್ಮಾನ ಬಾಂಧವರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಹಾಗೂ ಮುಸಲ್ಮಾ ನರು ಕೇವಲ ಟಿಪ್ಪು ಜಯಂತಿಗೆ ಬರುವುದು ಮುಖ್ಯವಲ್ಲ ಪ್ರತಿಯೊಬ್ಬ ಮಹಾಪುರುಷರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಈ ದೇಶದಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಿ ಎಂದರು.
ನಂತರ ಜಿಪಂ ಸದಸ್ಯ ಸೈಯದ್ ತೌಫಿಕ್ ಮಾತನಾಡಿ, 2015ರಲ್ಲಿ ಟಿಪ್ಪು ಜಯಂತಿ ಯನ್ನು ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದ ಅವರು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಟಿಪ್ಪು ಜಯಂತಿ ಯನ್ನು ಆಚರಣೆ ಮಾಡಿದ್ದರು. ಆದರೆ ಈಗ ಅವರೇ ವಿರೋಧ ಮಾಡುತ್ತಿ ರುವುದು ವಿಪರ್ಯಾಸ ಎಂದರು.
ಈ ವೇಳೆ ವೀರ ಕನ್ನಡಿಗ ಟಿಪ್ಪು ಸಂಘದಿಂದ ಮೌಲ್ವಿ ಸೈಯದ್ ಅಹ್ಮದ್ ಷರೀಫ್ ವೃತ್ತ ನಿರೀಕ್ಷಕ ಲೋಕೇಶ್ ಪತ್ರ ಕರ್ತರ ಸಂಘದ ಅಧ್ಯಕ್ಷ ಡಿ.ಬಿ ಮೋಹನ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಭಾರತಿ ಸದಸ್ಯರಾದ ಶಾಂತಕುಮಾರ್, ಜುಬೇರ್, ತಾಪಂ ಅಧ್ಯಕ್ಷ ರಂಗೇಗೌಡ, ಸದಸ್ಯರಾದ ಸಂಗೀತ, ಹರೀಶ್ ವೀರ ಕನ್ನಡಿಗ ಟಿಪ್ಪು ಸಂಘದ ಅಧ್ಯಕ್ಷ ನೂರ್ ಅಹಮದ್, ಮುಖ್ಯ ಭಾಷಣಕಾರ ತಮ್ಮಣ್ಣಗೌಡ ಇತರರಿದ್ದರು.