ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಕಾಲೂರು ಗ್ರಾಮದ ಪ್ರಕೃತಿ ವಿಕೋಪ ಸಂತ್ರಸ್ತರಿಗಾಗಿ ಆಯೋಜಿಸಿರುವ ‘ಯಶಸ್ವಿ’ ಹೆಸರಿನ ಕೌಶಲ್ಯ ತರಬೇತಿ ಕೇಂದ್ರದಡಿಯ ಹೊಲಿಗೆ ತರಬೇತಿಯ ಎರಡನೇ ಘಟಕದ ಉದ್ಟಾಟನೆ ಮತ್ತು ಕಾಲೂರು ಗ್ರಾಮದ ಸಂತ್ರಸ್ಥ ಮಹಿಳೆಯರು ತಯಾರಿಸಿದ ‘ಕೂರ್ಗ್ ಪ್ಲೇವರ್ಸ್’ ಹೆಸರಿನ ವಿವಿಧ ಮಸಾಲೆ ಪದಾರ್ಥಗಳ ಲೋಕಾರ್ಪಣೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹೆಸರಾಂತ ಲೇಖಕಿ ಡಾ.ವೈದೇಹಿ ನೆರವೇರಿಸಲಿದ್ದಾರೆ.
ನ.11 ರಂದು ಭಾನುವಾರ ಬೆಳಗ್ಗೆ 10.30 ಗಂಟೆಗೆ ಕಾಲೂ ರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಾಂiರ್ದರ್ಶಿ ಬಾಲಾಜಿ ಕಶ್ಯಪ್, ಹಿರಿಯ ಸಾಹಿತಿ ನಾಗೇಶ್ ಕಾಲೂರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಜೆಕ್ಟ್ ಕೂರ್ಗ್ ಪ್ರಕಟಣೆ ತಿಳಿಸಿದೆ.
ಸಂತ್ರಸ್ತ ಮಹಿಳೆಯರೇ ಸೂಕ್ತ ತರಬೇತಿ ಪಡೆದು ತಯಾರಿಸಿದ ವಿವಿಧ ಮಸಾಲೆ ಪದಾರ್ಥಗಳನ್ನು ಕೂರ್ಗ್ ಪ್ಲೇವರ್ಸ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ. ಅಂತೆಯೇ ವಿವಿಧ ದಾನಿಗಳು ನೀಡಿದ ಹೊಲಿಗೆ ಯಂತ್ರಗಳನ್ನು ಬಳಸಿ ಕಾಲೂರಿನ ಸಂತ್ರಸ್ಥ ಮಹಿಳೆಯರಿಗೆ ನೀಡಲಾಗುತ್ತಿರುವ ಹೊಲಿಗೆ ತರಬೇತಿಗೆ ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಹೊಲಿಗೆ ತರಬೇತಿಯ ಎರಡನೇ ಘಟಕವನ್ನೂ ಪ್ರಾರಂಭಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.