ಇಂದಿನಿಂದ ಸುತ್ತೂರು ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಲಿಂಗಧಾರಣೆ
ಹಾಸನ

ಇಂದಿನಿಂದ ಸುತ್ತೂರು ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಲಿಂಗಧಾರಣೆ

November 9, 2018

ರಾಮನಾಥಪುರ: ನವೆಂಬರ್ 9 ರಿಂದ ಡಿಸೆಂಬರ್ 2 ರವರೆಗೆ 12 ದಿನಗಳ ಕಾಲ ಅರಕಲಗೂಡು, ಸೋಮವಾರ ಪೇಟೆ, ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲಿಂಗಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುತ್ತೂರು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಮುಖ್ಯ ಸ್ಥರು ಶ್ರೀ ಸೋಮಶೇಖರ ಸ್ವಾಮೀಜಿ ತಿಳಿಸಿದರು.

ರಾಮನಾಥಪುರ ಹೋಬಳಿ ಕೋಟ ವಾಳು, ಗೊಬಳಿಕಾವಲು ಮುಂತಾದ ಗ್ರಾಮ ಗಳಿಗೆ ಭೇಟಿ ನೀಡಿದ ನಂತರ ರಾಮನಾಥ ಪುರದಲ್ಲಿ ಮಾತನಾಡಿದ ಅವರು, ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಭೇಟಿ ನೀಡಿ, ಈಗಾಗಲೇ ಸುಮಾರು 67 ಸಾವಿರ ವೀರಶೈವ ವಟುಗಳಿಗೆ ಲಿಂಗ ಧಾರಣೆ ಮಾಡಲಾಗಿದೆ. ಅದರಂತೆ ನಾವು ಧಾರ್ಮಿಕ ದತ್ತಿ ವತಿಯಿಂದ ಕರಡಿಗೆ, ಲಿಂಗು, ರುದ್ರಾಕ್ಷಿ, ಶಿವದಾರ, ವಸ್ತ್ರಗಳನ್ನು ನೀಡಿ ಸಮಾಜದ ಅಸಕ್ತ ವೀರಶೈವ ವಟು ಗಳಿಗೆ ಲಿಂಗದೀಕ್ಷಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕೆಸವತ್ತೂರು ಮಠ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ತೊರೆನೂರು ಮಠ ಶ್ರೀ ಮಲ್ಲೇಶ ಸ್ವಾಮೀಜಿ, ಬೆಟ್ಟದಪುರ ಮಠ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ದಿಂಡಗಾಡು ಮಠ ಶ್ರೀ ಅಪ್ಪಾಜಿ ಸ್ವಾಮೀಜಿ, ಹಾಡ್ಯ ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ ಮುಂತಾ ದವರು ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿ ಸುವರು ಎಂದು ತಿಳಿಸಿದರು.

ಲಿಂಗದೀಕ್ಷಾ ಕಾರ್ಯಕ್ರಮವು ನವೆಂ ಬರ್ 9 ರಂದು ಶುಕ್ರವಾರ ಬೆಳಿಗ್ಗೆ ಕೋಟ ವಾಳು ಗ್ರಾಮದಲ್ಲಿ, ಸಂಜೆ 6 ಗಂಟೆಗೆ ಗೊಬ್ಬಳಿ ಕಾವಲು, 12ರಂದು ಸಂಜೆ ಸಿಗೋಡು, 14ರಂದು ತೊರೆನೂರು, 16ರಂದು ಮಣ ಜೂರು, 19ರಂದು ಹೆಬ್ಬಾಲೆ, 22ರಂದು ಹುಲುಸೆ, 24ರಂದು ದಿಂಡಗಾಡು, 26ರಂದು ಅವರ್ತಿ, 28ರಂದು ಚಿಕ್ಕಹೊಸೂರು ಮತ್ತು ದೊಡ್ಡಹೊಸೂರು, 30ರಂದು ಕೊಣ ಸೂರಿನ ಬಸವನಗರ ಮತ್ತು ಡಿಸೆಂಬರ್ 3ರಂದು ಕುಶಾಲನಗರದ ಮುಳಸೋಗೆ ಗ್ರಾಮದಲ್ಲಿ ನಡೆಯಲಿದೆ ಎಂದು ಶ್ರೀ ಸೋಮಶೇಖರ ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ಅರಕಲಗೂಡು ತಾಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಸಂಚಾಲಕ ಪಂಚಾಕ್ಷರಿ, ಗ್ರಾಮದ ಮುಖಂಡ ಸಿದ್ದಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

Translate »