ನಾಳೆ ಟಿಪ್ಪು ಜಯಂತಿ: ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
ಹಾಸನ

ನಾಳೆ ಟಿಪ್ಪು ಜಯಂತಿ: ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

November 9, 2018

ಬೇಲೂರು: ಟಿಪ್ಪು ಜಯಂತಿ ಯನ್ನು ಜಯಂತಿಯನ್ನಾಗಿ ಪರಿಗಣಿಸ ಬೇಕೇ ಹೊರತು, ರಾಜಕೀಯವಾಗಿ, ಧಾರ್ಮಿಕವಾಗಿ ಬಳಸಿ ಕೊಳ್ಳಬಾರದೆಂದು ಸಿಪಿಐ ಲೋಕೇಶ್ ಸಂಘಟನೆ ಪ್ರಮುಖ ರಲ್ಲಿ ಮನವಿ ಮಾಡಿದರು.

ಟಿಪ್ಪು ಜಯಂತಿ ಅಂಗವಾಗಿ ಕರೆಯ ಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಜಯಂತಿಯನ್ನು 3 ವರ್ಷದಿಂದ ಆಚರಿ ಸಲಾಗುತ್ತಿದೆ. ಕಳೆದ 2 ವರ್ಷದಿಂದ ಸರ್ಕಾರವೇ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ. ಜಯಂತಿಯನ್ನು ತಡೆ ಯುವ, ಗೊಂದಲ ಸೃಷ್ಠಿಸುವ ಕೆಲಸವನ್ನು ಯಾರೂ ಮಾಡಬಾರದು. ಜಯಂತಿ ಯನ್ನು ತಹಸೀಲ್ದಾರ್ ಕಚೇರಿಯಲ್ಲಷ್ಟೇ ಆಚರಿಸಲಾಗುತ್ತದೆ. ಜಯಂತಿ ಆಚರ ಣೆಯು ಇತರ ಸಂಘಟನೆಗಳಿಂದ ಇರು ವುದಿಲ್ಲ. ಬೈಕ್‍ರ್ಯಾಲಿ, ಮೆರವಣಿಗೆ, ಸಭೆ, ಡಿಜೆ ಧ್ವನಿವರ್ಧಕ ಬಳಕೆಯಿಲ್ಲ. ಎಲ್ಲಾ ಸಮುದಾಯದ ಮುಖಂಡರು ಜಯಂತಿ ಆಚರಣೆ ವಿಚಾರದಲ್ಲಿ ಸೌಹಾದರ್Àಯು ತವಾಗಿರಬೇಕು. ವದಂತಿಗಳಿಗೆ ಕಿವಿಗೊಡ ಬಾರದು. ಭಗವದ್ಗೀತೆ, ಬೈಬಲ್, ಕುರಾನ್ ಗಳ ಬಗ್ಗೆ ಯಾರು ತಿಳಿದಿಲ್ಲವೊ ಅಂತ ಹವರು ಗೊಂದಲ ಸೃಷ್ಟಿಸುತ್ತಾರೆ. ಈಗಾಗಲೇ ತಾಲೂಕು ಆಡಳಿತ ಶಾಸಕರ ಅಧ್ಯಕ್ಷತೆ ಯಲ್ಲಿ ಪೂರ್ವಭಾವಿ ಸಭೆ ಕರೆದು ಜಯಂತಿ ಆಚರಣೆ ಹೇಗೆ ಮಾಡಬೇಕೆಂಬ ಬಗ್ಗೆ ತೀರ್ಮಾನಿಸಿದೆ ಎಂದರು.

ಬಿಜೆಪಿ ತಾಲೂಕು ಕಾರ್ಯದರ್ಶಿ ದರ್ಶನ್ ಮಾತನಾಡಿ, ಬೇಲೂರಿನಲ್ಲಿ ಎಲ್ಲಾ ಧರ್ಮ ದವರು ಸ್ನೇಹದಿಂದ್ದಾರೆ. ಟಿಪ್ಪು ಜಯಂತಿ ವೇಳೆ ಹೊರಗಡೆಯಿಂದ ಬಂದು ಗೊಂದಲ ಸೃಷ್ಠಿಸುವ ಸಾಧ್ಯತೆಯಿದೆ. ಇಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದರು.
ವೀರ ಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ನೂರ್‍ಅಹ್ಮದ್ ಮಾತನಾಡಿ, ಟಿಪ್ಪು ಜಯಂತಿ ಮಾಡಿ ಎಂದು ನಾವು ಮನವಿ ಮಾಡಿರಲಿಲ್ಲ. ಸರ್ಕಾರವೇ ಜಯಂತಿ ಆಚರಿಸುತ್ತಿದೆ. ಅದಕ್ಕೆ ನಾವು ಹೊಣೆಯಲ್ಲ. ನಾವು ಟಿಪ್ಪು ಹೆಸರಿನಲ್ಲಿ ಸಂಘಟನೆ ಮಾಡಿರುವುದು ದೀನ ದಲಿತರ, ಬಡವರ, ನೊಂದವರ ಪರವಾಗಿ ಹೋರಾಡಲು ಹೊರತು, ಟಿಪ್ಪು ಜಯಂತಿ ಆಚರಿಸಲು ಅಲ್ಲ ಎಂದರು.
ಬಿಜೆಪಿ ಹಿಂದುಳಿದ ವರ್ಗದ ಕಾರ್ಯ ದರ್ಶಿ ಚೇತನ್ ಮಾತನಾಡಿ, ಟಿಪ್ಪು ಜಯಂತಿಗೆ ವಿರೋಧವಿದೆ. ವಿರೋಧದ ನಡುವೆಯೂ ಆಚರಣೆ ಮಾಡುತ್ತಿ ರುವುದರಿಂದ ರಾಜ್ಯದಾದ್ಯಂತ ನವಂಬರ್ 9 ರಂದು ಬಿಜೆಪಿಯಿಂದ ಪ್ರತಿಭಟಿಸಲು ಕರೆ ನೀಡಿದ್ದಾರೆ. ಅದರಂತೆ ಇಲ್ಲಿಯೂ ಪ್ರತಿಭಟನೆ ಮಾಡುತ್ತೇವೆ ಎಂದರು.ಈ ಸಂದರ್ಭ ಪಿಎಸ್‍ಐ ಜಗದೀಶ್, ಮುಖಂಡರಾದ ಜಮಾಲುದ್ದೀನ್, ಲೋಕೇಶ್, ಜಾಕೀರ್‍ಪಾಷ, ಶೇಖರ್, ತೀರ್ಥ ಇನ್ನಿತರರಿದ್ದರು.

Translate »