Tag: Hassan

ಜಗತ್ತಿನ ಶ್ರೇಷ್ಠ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ: ಪ್ರೀತಮ್ ಜೆ.ಗೌಡ
ಹಾಸನ

ಜಗತ್ತಿನ ಶ್ರೇಷ್ಠ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ: ಪ್ರೀತಮ್ ಜೆ.ಗೌಡ

July 27, 2018

ಹಾಸನ:  ‘ರಾಷ್ಟ್ರಪತಿಯಾಗಿ ಸಂಶೋಧನೆ ಮಾಡಿ ದಂತಹ ಜಗತ್ತಿನ ಶ್ರೇಷ್ಠ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ’ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಹೇಳಿದರು. ನಗರದ ಸಾಲಗಾಮೆ ರಸ್ತೆಯಲ್ಲಿರುವ ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಸಭಾಂಗಣದಲ್ಲಿ ಮಾನವ ಹಕ್ಕುಗಳ ವೇದಿಕೆಯಿಂದ ಗುರು ವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಾಂ ಅವರು ಮಕ್ಕಳಿಗೆ ಪ್ರೇರಣೆ ಯಾಗಿದ್ದರು. ಸಾಮಾನ್ಯ ಕುಟುಂಬದಿಂದ ಬಂದಂತಹ ಅವರು ಪರಮಾಣು ಶಕ್ತಿಯಲ್ಲಿ ಸಂಶೋಧನೆ ನಡೆಸಿ ಯಶಸ್ವಿಯಾಗಿ…

ವ್ಯರ್ಥವಾದ ಸಭೆ ಸಮಯ: ಅಧ್ಯಕ್ಷರ ಕಚೇರಿ, ಲಿಫ್ಟ್ ಅಳವಡಿಕೆಯದ್ದೇ ಚರ್ಚೆ
ಹಾಸನ

ವ್ಯರ್ಥವಾದ ಸಭೆ ಸಮಯ: ಅಧ್ಯಕ್ಷರ ಕಚೇರಿ, ಲಿಫ್ಟ್ ಅಳವಡಿಕೆಯದ್ದೇ ಚರ್ಚೆ

July 26, 2018

ಹಾಸನ:  ಜಿಪಂ ಹೊಯ್ಸಳ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಕೊಠಡಿ ನಿರ್ಮಾಣ, ಹೊಸ ಲಿಫ್ಟ್ ಅಳವಡಿಕೆ ವಿಚಾರ ಚರ್ಚೆಗೆ ಗ್ರಾಸವಾಗಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗದೇ ಹೆಚ್ಚಿನ ಸಮಯ ವ್ಯರ್ಥವಾಯಿತು. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಯಲ್ಲಿ ಮೊದಲು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜು ಅವರ ಕಚೇರಿ ನಿರ್ಮಾಣಕ್ಕೆ 10 ಲಕ್ಷ ರೂ.ಗಳನ್ನು ಸಭೆಯಲ್ಲಿ ಯಾವ ಸದಸ್ಯರ ಅನುಮೋದನೆ ಪಡೆಯದೇ ನಿರ್ವಹಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಈ ಬಗ್ಗೆ ಹಲವು ಸದಸ್ಯರೊಂದಿಗೆ ಧ್ವನಿಗೂಡಿಸಿದ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್…

ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ನೀಡುವ ಬಗ್ಗೆ ಚರ್ಚೆ: ಸಚಿವ ಎನ್.ಮಹೇಶ್
ಹಾಸನ

ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ನೀಡುವ ಬಗ್ಗೆ ಚರ್ಚೆ: ಸಚಿವ ಎನ್.ಮಹೇಶ್

July 26, 2018

ಹಾಸನ: ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವವರಿಗೆ ವಿಸ್ತರಿಸುವ ಬಗ್ಗೆ ಚರ್ಚಿಸಲಾಗುತ್ತಿದ್ದು, ಈಗಾಗಲೇ ಮುಖ್ಯಮಂತ್ರಿ ಅವರು ವರದಿಯನ್ನು ಕೇಳಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಹಾಸನಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರಿ ಶಾಲಾ ಕಾಲೇಜು ಮಕ್ಕಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ನೀಡುವ ಕುರಿತು ಮುಖ್ಯಮಂತ್ರಿಗಳು ವರದಿ ಕೇಳಿದ್ದಾರೆ….

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
ಹಾಸನ

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ

July 25, 2018

ಹಾಸನ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಮಾವಣೆಗೊಂಡು ಘೋಷಣೆ ಕೂಗಿದರು. ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ವಿಧಾನ ಸಭಾ ಚುನಾವಣೆ ವೇಳೆಯಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ವಿತರಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು….

ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಕರ್ನಾಟಕ ವೀರಕನ್ನಡಿಗರ ಸೇನೆ ಪ್ರತಿಭಟನೆ
ಹಾಸನ

ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಕರ್ನಾಟಕ ವೀರಕನ್ನಡಿಗರ ಸೇನೆ ಪ್ರತಿಭಟನೆ

July 25, 2018

ಹಾಸನ:  ನಗರದ ತಣ್ಣೀರುಹಳ್ಳದ ಪೋಸ್ಟ್‍ಮ್ಯಾನ್ ನಡೆ ಖಂಡಿಸಿ ಹಳೆಬಸ್‍ನಿಲ್ದಾಣ ಬಳಿಯ ಮುಖ್ಯ ಅಂಚೆ ಕಚೇರಿ ಎದುರು ಕರ್ನಾಟಕ ವೀರಕನ್ನಡಿಗರ ಸೇನೆಯಿಂದ ಪ್ರತಿಭಟಿಸಲಾಯಿತು. ತಣ್ಣೀರುಹಳ್ಳದ ಅಂಚೆ ಕಚೇರಿ ಪೋಸ್ಟ್‍ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿರುವ ಮೋಹನ್ ಎಂಬಾತ ವಿಧವಾ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ದಂತಹ ಸರ್ಕಾರದಿಂದ ಬರುವ ಇತರೆ ಯೋಜನೆಯ ಹಣ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸದೆ ಫಲಾನುಭವಿಗಳು ತೊಂದರೆ ಅನುಭವಿ ಸುವಂತಾಗಿದೆ ಎಂದು ದೂರಿದರು. ಸರ್ಕಾರ ನೀಡುತ್ತಿರುವ ಪಿಂಚಿಣಿ ಹಣವನ್ನೇ ಫಲಾನು ಭವಿಗಳು ನಂಬಿ ಜೀವನ ನಡೆಸುತ್ತಿದ್ದು,…

ಹಾಸನದಲ್ಲಿ 7 ಅಂತಸ್ತಿನ ಅಕ್ರಮ ಕಟ್ಟಡ ತೆರವಿಗೆ ಡಿಸಿ ಸೂಚನೆ
ಹಾಸನ

ಹಾಸನದಲ್ಲಿ 7 ಅಂತಸ್ತಿನ ಅಕ್ರಮ ಕಟ್ಟಡ ತೆರವಿಗೆ ಡಿಸಿ ಸೂಚನೆ

July 24, 2018

ಹಾಸನ:  ನಗರ ಹೃದಯ ಭಾಗದ ಎನ್‍ಡಿಆರ್‍ಕೆ ಆಸ್ಪತ್ರೆ ಸಮೀಪ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಬೃಹತ್ ವಾಣಿಜ್ಯ ಕಟ್ಟಡ ತೆರವುಗೊಳಿಸಿ, ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ದೇಶಿಸಿದ್ದು, ಅದರಂತೆ ನಗರಸಭೆ ಆಯುಕ್ತ ಪರಮೇಶ್ ಅವರಿಂದು ಆದೇಶ ಹೊರಡಿಸಿದ್ದಾರೆ. ನಗರದ ವಾರ್ಡ್ ನಂ.1ರ ಆಸ್ತಿ ಸಂಖ್ಯೆ 104ರಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡ(9859 ಚ.ಅಡಿ) ಎನ್.ಲೀಲಾಕುಮಾರ್ ಎಂಬುವವರಿಗೆ ಸೇರಿದ್ದು, ನಗರಸಭೆಯ ನಿಯಮಗಳ ಉಲ್ಲಂಘನೆ ಹಾಗೂ ಸ್ಥಳ ಒತ್ತುವರಿ ಮಾಡಿರುವ ಕುರಿತು ಸಾರ್ವಜನಿಕರು ದೂರಿದ್ದರು. ಮಾಹಿತಿ ಆಧರಿಸಿ ಜಿಲ್ಲಾಧಿಕಾರಿ…

ಹಾಸನ-ಬೇಲೂರು-ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಕಾಮಗಾರಿ ಅನುಷ್ಠಾನ
ಹಾಸನ

ಹಾಸನ-ಬೇಲೂರು-ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಕಾಮಗಾರಿ ಅನುಷ್ಠಾನ

July 21, 2018

ಹಾಸನ:  ಹಾಸನ-ಬೇಲೂರು- ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಶೇ. 50:50 ಅನುಪಾತದಲ್ಲಿ ಕೇಂದ್ರದ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳ ಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕೇಂದ್ರದ ಅನುದಾನ ಸಹಭಾಗಿತ್ವದಲ್ಲಿ ಹಲವು ಕಾಮ ಗಾರಿಗಳನ್ನು ಕೈಗೊಳ್ಳಲಿದ್ದು, ಹಾಸನ ದಿಂದ ಹೆಚ್ಚು ರೈಲುಗಳ ಸಂಚಾರಕ್ಕೆ ಮನವಿ ಮಾಡಲಾಗಿದೆ. ರೈಲ್ವೆ ಸಚಿವರು ಸಕಾ ರಾತ್ಮಕವಾಗಿ ಸ್ಪಂದಿಸಿದ್ದಾರೆ. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ 60 ಕೋಟಿ ರೂ.ವೆಚ್ಚದ 6…

ಅತಿವೃಷ್ಠಿ ಹಾನಿ ಸ್ಪಷ್ಟ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ
ಹಾಸನ

ಅತಿವೃಷ್ಠಿ ಹಾನಿ ಸ್ಪಷ್ಟ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2018

ಹಾಸನ: ಜಿಲ್ಲೆಯಲ್ಲಿ ಅತಿವೃಷ್ಠಿ ಯಿಂದ ಉಂಟಾಗಿರುವ ಜನ ಜಾನುವಾರು ಹಾಗೂ ವೈಯಕ್ತಿಕ ಮತ್ತು ಸಾರ್ವಜನಿಕ ಆಸ್ತಿಗಳ ಹಾನಿಗೆ ಪ್ರಕೃತಿ ವಿಕೋಪ ನಿಧಿ ಯಿಂದ ಪರಿಹಾರ ನೀಡಬಹುದಾಗಿದ್ದು, ಎಲ್ಲವನ್ನು ಸ್ಪಷ್ಟವಾಗಿ ಅಂದಾಜಿಸಿ ಕೂಡಲೇ ವರದಿ ನೀಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿಂದು ತಹಶೀಲ್ದಾರು ಹಾಗೂ ಪಪಂ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಲವು ರೀತಿಯ…

ಜಿಪಂ ಉಪಾಧ್ಯಕ್ಷರಾಗಿ ಸುಪ್ರದೀಪ್ ಯಜಮಾನ ಅವಿರೋಧ ಆಯ್ಕೆ
ಹಾಸನ

ಜಿಪಂ ಉಪಾಧ್ಯಕ್ಷರಾಗಿ ಸುಪ್ರದೀಪ್ ಯಜಮಾನ ಅವಿರೋಧ ಆಯ್ಕೆ

July 21, 2018

ಹಾಸನ:  ಜಿಲ್ಲಾ ಪಂಚಾಯ್ತಿ ನೂತನ ಉಪಾಧ್ಯಕ್ಷರಾಗಿ ಸಕಲೇಶಪುರ ತಾಲೂಕಿನ ಹಾನುಬಾಳು ಕ್ಷೇತ್ರದ ಸುಪ್ರದೀಪ್ ಯಜಮಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ಅವರು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‍ನ ಸುಪ್ರದೀಪ್ ಯಜಮಾನ ಆಯ್ಕೆಯಾದರು. ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಜೆಡಿಎಸ್‍ನ ಸುಪ್ರದೀಪ್ ಯಜಮಾನ ಅವರು ಮೂರು ನಾಮ ಪುತ್ರ ಸಲ್ಲಿಸಿ ದರು. ಕಾಂಗ್ರೆಸ್‍ನ ಶ್ರೇಯಸ್ ಪಟೇಲ್ ಹಾಗೂ ಎಸ್.ಡಿ.ರೇವಣ್ಣ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದರು….

ಬಸ್‍ಪಾಸ್: ರಾಜ್ಯ ಸರ್ಕಾರದ ವಿರುದ್ಧ ಪ್ರತ್ಯೇಕ ಪ್ರತಿಭಟನೆ
ಹಾಸನ

ಬಸ್‍ಪಾಸ್: ರಾಜ್ಯ ಸರ್ಕಾರದ ವಿರುದ್ಧ ಪ್ರತ್ಯೇಕ ಪ್ರತಿಭಟನೆ

July 20, 2018

ಹಾಸನ: ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಎಬಿವಿಪಿ ಹಾಗೂ ಎನ್‍ಎಸ್‍ಯುಐ ಸಂಘಟನೆಗಳು ಪ್ರತ್ಯೇಕ ಪ್ರತಿಭಟನೆ ನಡೆಸಿದವು. ಎಬಿವಿಪಿ: ನಗರದ ಹೇಮಾವತಿ ಪ್ರತಿಮೆಯ ಮುಂಭಾಗ ಸಮಾವೇಶಗೊಂಡ ಎಬಿವಿಪಿ ಕಾರ್ಯಕರ್ತರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಯವರೆಗೆ ಮೆರವಣಿಗೆ ನಡೆಸಿ ಉಚಿತ ಬಸ್ ಪಾಸ್ ವಿತರಿಸುವಂತೆ ಘೋಷಣೆ ಕೂಗಿದರು. ಪ್ರಸಕ್ತ ಸಾಲಿನಿಂದ ಎಸ್‍ಸಿ, ಎಸ್‍ಟಿ ಸೇರಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಿಸುವುದಾಗಿ ಕÀಳೆದ…

1 88 89 90 91 92 103
Translate »