Tag: janardhana reddy

ಜನಾರ್ದನ ರೆಡ್ಡಿಗೆ ಜಾಮೀನು: ಜೈಲಿನಿಂದ ಬಿಡುಗಡೆ
ಮೈಸೂರು

ಜನಾರ್ದನ ರೆಡ್ಡಿಗೆ ಜಾಮೀನು: ಜೈಲಿನಿಂದ ಬಿಡುಗಡೆ

November 15, 2018

ಬೆಂಗಳೂರು: ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದ ಡೀಲ್‍ನಲ್ಲಿ ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು ಒಂದನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಐದು ದಿನಗಳ ಜೈಲು ವಾಸದಿಂದ ಇಂದು ಸಂಜೆ ಜನಾರ್ಧನ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದರು. ನವೆಂಬರ್ 10 ರಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 1ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್ ಅವರು ನವೆಂಬರ್ 24 ರವರೆಗೂ…

ಇಂದು ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ಆದೇಶ
ಮೈಸೂರು

ಇಂದು ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ಆದೇಶ

November 14, 2018

ಬೆಂಗಳೂರು: ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಕಾಯ್ದಿರಿಸಲಾಗಿದೆ. ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾ ಲಯ ವಿಚಾರಣೆ ಮುಕ್ತಾಯ ಮಾಡಿ ನಾಳೆಗೆ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದೆ. ಹೀಗಾಗಿ ಮಂಗಳವಾರವೂ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಎಸಿಎಂಎಂ ಕೋರ್ಟ್‍ನ ನ್ಯಾಯಾಧೀಶ ಜಗದೀಶ್ ವಾದ-ಪ್ರತಿವಾದ ಆಲಿಸಿ, ನಾಳೆಗೆ ಜಾಮೀನು ಅರ್ಜಿ ಆದೇಶ ನೀಡುವುದಾಗಿ ತಿಳಿಸಿದರು. ಇದರಿಂದ ಜನಾರ್ದನ ರೆಡ್ಡಿ ಮೂರನೇ ದಿನವೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಳೆಯಬೇಕಾಗಿದೆ….

ಜನಾರ್ಧನ ರೆಡ್ಡಿಗೆ ಜೈಲು
ಮೈಸೂರು

ಜನಾರ್ಧನ ರೆಡ್ಡಿಗೆ ಜೈಲು

November 12, 2018

ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕ ರಣದಲ್ಲಿ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಬಂಧಿ ಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸ ಲಾಗಿ, ರೆಡ್ಡಿಯವರನ್ನು ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೀಡಿದ್ದ ನೋಟೀಸ್ ಹಿನ್ನೆಲೆಯಲ್ಲಿ ಜನಾರ್ಧನ್ ರೆಡ್ಡಿ, ತಮ್ಮ ವಕೀಲ ಚಂದ್ರಶೇಖರ್ ಅವ ರೊಂದಿಗೆ ಶನಿವಾರ ಸಂಜೆ ಸಿಸಿಬಿ ಕಚೇರಿಗೆ ಆಗ ಮಿಸಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ರಾತ್ರಿಯಿಡೀ ಜನಾರ್ಧನ ರೆಡ್ಡಿ…

ಸಿಸಿಬಿ ಮುಂದೆ ವಿಚಾರಣೆಗೆ ಜನಾರ್ಧನ ರೆಡ್ಡಿ ಹಾಜರು
ಕೊಡಗು

ಸಿಸಿಬಿ ಮುಂದೆ ವಿಚಾರಣೆಗೆ ಜನಾರ್ಧನ ರೆಡ್ಡಿ ಹಾಜರು

November 11, 2018

ಬೆಂಗಳೂರು: ಆಂಬಿಡೆಂಟ್ ಕಂಪನಿ ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ತಮ್ಮ ಪರ ವಕೀಲ ಚಂದ್ರಶೇಖರ್ ಅವರೊಂದಿಗೆ ನಗರದ ಸಿಸಿಬಿ ಕಚೇರಿಗೆ ಶನಿವಾರ ಸಂಜೆ 4ಕ್ಕೆ ಹಾಜರಾದರು. ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ ಅವರ ಕಚೇರಿಯಿಂದ ಹೊರಟ ರೆಡ್ಡಿ, ವಕೀಲ ಚಂದ್ರಶೇಖರ್ ಅವರ ಕಾರಿನಲ್ಲೇ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ರೆಡ್ಡಿಯವರೊಂದಿಗೆ ಅವರ ಆಪ್ತ ಅಲಿಖಾನ್ ಕೂಡ ಬಂದಿದ್ದರು. ಭಾನುವಾರ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಯಾದ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು…

ರೆಡ್ಡಿ ಶರಣಾಗತಿ?
ಮೈಸೂರು

ರೆಡ್ಡಿ ಶರಣಾಗತಿ?

November 10, 2018

ಬೆಂಗಳೂರು:  ಆಂಬಿಡೆಂಟ್ ವಂಚನೆ ಪ್ರಕರಣದ ಆರೋಪಿ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಯಾವುದೇ ಕ್ಷಣದಲ್ಲಿ ಶರಣಾಗತಿಯಾಗುವ ಸಾಧ್ಯತೆ ಇದೆ. ಬಿಜೆಪಿಯ ಹಿರಿಯ ನಾಯಕರೊಬ್ಬರು ಇಂದು ತನಿಖಾಧಿಕಾರಿಯನ್ನು ಸಂಪರ್ಕಿಸಿ, ರೆಡ್ಡಿ ಅವರನ್ನು ಶರಣಾಗತಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಅನಗತ್ಯವಾಗಿ ಅವರ ಕುಟುಂ ಬದವರಿಗೆ ತೊಂದರೆ ನೀಡಬೇಡಿ, ರೆಡ್ಡಿ ಎಲ್ಲಿದ್ದಾರೆ ಎಂಬುದನ್ನು ಹುಡುಕಿ, ಕರೆ ತರುವುದಾಗಿಯೂ ಕೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ ಜನಾರ್ದನ ರೆಡ್ಡಿ ಪರ ವಕೀಲ ಚಂದ್ರಶೇಖರ್ ಅವರು ಹೈಕೋರ್ಟ್‍ನಲ್ಲಿ 2…

ಸಿಸಿಬಿ ಮುಂದೆ ರೆಡ್ಡಿ ಡೀಲ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆಂಬಿಡೆಂಟ್ ಮಾಲೀಕ ಫರೀದ್
ಮೈಸೂರು

ಸಿಸಿಬಿ ಮುಂದೆ ರೆಡ್ಡಿ ಡೀಲ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆಂಬಿಡೆಂಟ್ ಮಾಲೀಕ ಫರೀದ್

November 9, 2018

ಬೆಂಗಳೂರು: ಆಂಬಿ ಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾ ವಣೆ ಆರೋಪ ಎದುರಿಸುತ್ತಿರುವ ಅದರ ಮಾಲೀಕ ಸೈಯದ್ ಅಹಮದ್ ಫರೀದ್ ಸಿಸಿಬಿ ಅಧಿಕಾರಿಗಳ ಮುಂದೆ ಜನಾರ್ದನ ರೆಡ್ಡಿ ಡೀಲ್ ಪ್ರಕರಣ ಕುರಿತು ಸ್ಫೋಟಕ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಸಿಸಿಬಿ ಅಧಿಕಾರಿಗಳು ಗುರುವಾರ ಬಳ್ಳಾರಿ ಸಿರಗುಪ್ಪ ರಸ್ತೆಯಲ್ಲಿರುವ ರೆಡ್ಡಿ ಹಾಗೂ ಬೆಂಗಳೂರಿನ ಆರ್‍ಟಿ ನಗರದ ಅಲಿಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಂಗ ಳೂರಿನಲ್ಲಿರುವ ಅಲಿಖಾನ್ ಮನೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ…

ವಂಚಕ ಸಂಸ್ಥೆಯೊಂದಿಗೆ ಡೀಲ್: ಗಣಿ ಧಣಿ ಜನಾರ್ಧನ ರೆಡ್ಡಿಗೆ ಬಂಧನ ಭೀತಿ
ಮೈಸೂರು

ವಂಚಕ ಸಂಸ್ಥೆಯೊಂದಿಗೆ ಡೀಲ್: ಗಣಿ ಧಣಿ ಜನಾರ್ಧನ ರೆಡ್ಡಿಗೆ ಬಂಧನ ಭೀತಿ

November 8, 2018

ಬೆಂಗಳೂರು: ಗಣಿ ಹಗರಣದಲ್ಲಿ ಸುದೀರ್ಘ ನಾಲ್ಕು ವರ್ಷಗಳ ಕಾಲ ಜೈಲು ವಾಸ ಅನುಭವಿಸಿ ಬಿಡುಗಡೆಗೊಂಡ ನಂತರ ನಿರಾಳವಾಗಿದ್ದ ಗಣಿ ಧಣಿ, ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಈಗ ಮತ್ತೊಂದು ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಆಂಬಿಡೆಂಟ್ ಕಂಪನಿಯ ಬಹುಕೋಟಿ ಚೀಟಿಂಗ್ ಕೇಸ್‍ನಲ್ಲಿ ಜಾರಿ ನಿರ್ದೇಶನಾಲಯ(ಇಡಿ) ದಾಖಲಿಸಿದ್ದ ಪ್ರಕರಣದಲ್ಲಿ ಆಂಬಿಡೆಂಟ್ ಕಂಪನಿ ಮಾಲೀಕನನ್ನು ರಕ್ಷಿಸಲು 20 ಕೋಟಿ ರೂ. ಪಡೆದ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಸಿಲುಕಿದ್ದು, ಅವರ ಬಂಧನಕ್ಕಾಗಿ ಸಿಸಿಬಿಯ ನಾಲ್ಕು ತಂಡಗಳು ಬಲೆ ಬೀಸಿವೆ….

Translate »