ಸಿಸಿಬಿ ಮುಂದೆ ರೆಡ್ಡಿ ಡೀಲ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆಂಬಿಡೆಂಟ್ ಮಾಲೀಕ ಫರೀದ್
ಮೈಸೂರು

ಸಿಸಿಬಿ ಮುಂದೆ ರೆಡ್ಡಿ ಡೀಲ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆಂಬಿಡೆಂಟ್ ಮಾಲೀಕ ಫರೀದ್

November 9, 2018

ಬೆಂಗಳೂರು: ಆಂಬಿ ಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾ ವಣೆ ಆರೋಪ ಎದುರಿಸುತ್ತಿರುವ ಅದರ ಮಾಲೀಕ ಸೈಯದ್ ಅಹಮದ್ ಫರೀದ್ ಸಿಸಿಬಿ ಅಧಿಕಾರಿಗಳ ಮುಂದೆ ಜನಾರ್ದನ ರೆಡ್ಡಿ ಡೀಲ್ ಪ್ರಕರಣ ಕುರಿತು ಸ್ಫೋಟಕ ಸತ್ಯಗಳನ್ನು ತೆರೆದಿಟ್ಟಿದ್ದಾರೆ.

ಸಿಸಿಬಿ ಅಧಿಕಾರಿಗಳು ಗುರುವಾರ ಬಳ್ಳಾರಿ ಸಿರಗುಪ್ಪ ರಸ್ತೆಯಲ್ಲಿರುವ ರೆಡ್ಡಿ ಹಾಗೂ ಬೆಂಗಳೂರಿನ ಆರ್‍ಟಿ ನಗರದ ಅಲಿಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಂಗ ಳೂರಿನಲ್ಲಿರುವ ಅಲಿಖಾನ್ ಮನೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ 5 ಸಜೀವ ಗುಂಡುಗಳ ಬಗ್ಗೆ ಮನೆಯವರು ದಾಖಲೆ ನೀಡಿದ್ದಾರೆ ಎಂದು ವರದಿ ವಿವರಿ ಸಿದೆ. 57 ಕೆಜಿ ಚಿನ್ನದ ಗಟ್ಟಿಗಾಗಿ ರೆಡ್ಡಿ ಮನೆಯ ಗೋಡೆ ಬೀರು, ಕಪಾಟುಗಳ ಶೋಧ ಕಾರ್ಯಾ ಚರಣೆ ನಡೆಸುತ್ತಿದ್ದಾರೆ. ಈ ವೇಳೆ ಮತ್ತೆ ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.

ಶೋಧದ ವೇಳೆ ಸಿಸಿಬಿಗೆ ಸಿಕ್ಕಿರುವ ಪತ್ರಗಳ ಆಧಾರದ ಮೇಲೆ 57 ಕೆಜಿ ಚಿನ್ನದ ಗಟ್ಟಿ ಎಲ್ಲಿದೆ ಎಂಬ ಮಾಹಿತಿಯ ಸುಳಿವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಬಂಧನ ಭೀತಿಗೊಳ ಗಾಗಿದ್ದ ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಬುಧವಾರ ಮಧ್ಯಂತರ ಜಾಮೀನು ಪಡೆದಿದ್ದರೂ ಕೂಡ ನಾಪತ್ತೆಯಾಗಿದ್ದಾನೆ. ಹೂಡಿಕೆದಾರರಿಗೆ 600 ಕೋಟಿ ರೂಪಾಯಿ ವಂಚಿಸಿರುವ ಫರೀದ್ ಬೆಂಗಳೂರಿನಲ್ಲಿ ಮಾತ್ರವಲ್ಲ ದುಬೈನಲ್ಲೂ ಕೆಲವು ತಿಂಗಳ ಹಿಂದೆ ಕಂಪನಿ ಸ್ಥಾಪಿಸುವ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿರುವ ಬಗ್ಗೆ ಮಾಹಿತಿ ನೀಡಿರುವು ದಾಗಿ ವರದಿ ತಿಳಿಸಿದೆ. ಈ ಮಧ್ಯೆ ಗಣಿಧಣಿ ವಕೀಲ ಚಂದ್ರಶೇಖರ್ ಮಾಧ್ಯಮದ ವರೊಟ್ಟಿಗೆ ಮಾತನಾಡಿ ಜನಾರ್ದನ ರೆಡ್ಡಿ ಎಲ್ಲಿಯೂ ಪರಾರಿಯಾಗಿಲ್ಲ, ಅವರನ್ನು ಬಂಧಿಸಲಾಗುವುದು ಎಂಬ ಭೀತಿಯನ್ನು ಸಿಸಿಬಿ ಅಧಿಕಾರಿಗಳು ಸೃಷ್ಟಿಸಿದ್ದಾರೆ.

ದ್ವೇಷ ರಾಜಕಾರಣ ಮಾಡುತ್ತಿಲ್ಲ

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರನ್ನು ಆಂಬಿ ಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿ ಯಾಗಿಸಿರುವ ವಿಚಾರದಲ್ಲಿ ಯಾವುದೇ ರೀತಿಯ ದ್ವೇಷ ರಾಜಕಾರಣ ಅಥವಾ ಅಧಿಕಾರ ದುರ್ಬಳಕೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿ ದ್ದಾರೆ. ಈ ಸಂಬಂಧ ಸುದ್ದಿಗಾರರಿಗೆ ಪ್ರತಿ ಕ್ರಿಯಿಸಿದ ಅವರು, ಬೆಂಗಳೂರು ವಲಯದಲ್ಲಿ ಯಾವುದೋ ಒಂದು ಕಂಪನಿ ಹಲವಾರು ಅಲ್ಪಸಂಖ್ಯಾತರ ಸಣ್ಣ ಕುಟುಂಬ ಗಳನ್ನು ವಂಚಿಸಿ ಬೀದಿಗೆ ತಂದು ನಿಲ್ಲಿಸಿದೆ. ಈ ಕುರಿತು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಆದ ಕಾರಣ ಕಂಪನಿಯ ಹಿನ್ನೆಲೆ, ಅದರ ಆರ್ಥಿಕ ವಹಿವಾಟು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಕುರಿತು ತನಿಖೆ ನಡೆಯುತ್ತಿದೆ. ಈ ವಿಷಯದಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ. ಪ್ರಕರಣ ತನಿಖೆಯ ಹಂತದಲ್ಲಿ ಇರುವ ಕಾರಣ ಇದರ ಬಗ್ಗೆ ನಾನು ಹೆಚ್ಚೇನೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.

Translate »