ಜನಾರ್ಧನ ರೆಡ್ಡಿಗೆ ಜೈಲು
ಮೈಸೂರು

ಜನಾರ್ಧನ ರೆಡ್ಡಿಗೆ ಜೈಲು

November 12, 2018

ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕ ರಣದಲ್ಲಿ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಬಂಧಿ ಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸ ಲಾಗಿ, ರೆಡ್ಡಿಯವರನ್ನು ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೀಡಿದ್ದ ನೋಟೀಸ್ ಹಿನ್ನೆಲೆಯಲ್ಲಿ ಜನಾರ್ಧನ್ ರೆಡ್ಡಿ, ತಮ್ಮ ವಕೀಲ ಚಂದ್ರಶೇಖರ್ ಅವ ರೊಂದಿಗೆ ಶನಿವಾರ ಸಂಜೆ ಸಿಸಿಬಿ ಕಚೇರಿಗೆ ಆಗ ಮಿಸಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

ರಾತ್ರಿಯಿಡೀ ಜನಾರ್ಧನ ರೆಡ್ಡಿ ಅವರನ್ನು ವಿಚಾ ರಣೆಗೊಳಪಡಿಸಿದ ಸಿಸಿಬಿ ಅಧಿಕಾರಿಗಳು, ಈ ವೇಳೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಂಬಿ ಡೆಂಟ್ ಸಂಸ್ಥೆಯ ಮಾಲೀಕ ಫರೀದ್‍ನನ್ನೂ ಕೂಡ ವಿಚಾರಣೆಗೆ ಕರೆತಂದು ಹಲವಾರು ಮಹತ್ವದ ಮಾಹಿತಿ ಗಳನ್ನು ಪಡೆದರು. ಜೊತೆಗೆ ನಿರೀಕ್ಷಣಾ ಜಾಮೀನಿ ನಲ್ಲಿರುವ ಜನಾರ್ಧನ ರೆಡ್ಡಿ ಆಪ್ತ ಆಲಿಖಾನ್ ನನ್ನೂ ಕೂಡ ವಿಚಾರಣೆಗೊಳಪಡಿಸಿದ್ದರು.

ಶನಿವಾರ ರಾತ್ರಿ ಜನಾರ್ಧನ ರೆಡ್ಡಿ ಸಿಸಿಬಿ ಕಚೇರಿ ಯಲ್ಲೇ ಕಳೆದರು. ಇಂದು ಬೆಳಿಗ್ಗೆ 10 ಗಂಟೆ ವೇಳೆಯಲ್ಲಿ ಜನಾರ್ಧನ ರೆಡ್ಡಿಯವರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಅವರು ಅಧಿಕೃತವಾಗಿ ಪ್ರಕಟಿಸಿದರು. ಆನಂತರ ರೆಡ್ಡಿಯವ ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದ ನಂತರ ಸಂಜೆ ಬೆಂಗಳೂರು 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗ ದೀಶ್ ಅವರ ನಿವಾಸದಲ್ಲಿ ಹಾಜರುಪಡಿಸಿದರು. ಈ ವೇಳೆ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ರೆಡ್ಡಿಯವರನ್ನು ನೀಡಬೇಕೆಂದೂ ಅರ್ಜಿ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ನ್ಯಾಯಾಧೀಶರು ಆದೇಶ ನೀಡಿದರು. ಇದೇ ವೇಳೆ ಜನಾರ್ಧನ ರೆಡ್ಡಿ ಪರ ವಕೀಲ ಚಂದ್ರಶೇಖರ್ ಅವರು ಜಾಮೀನು ಅರ್ಜಿ ಸಲ್ಲಿಸಿ ದರು. ಈ ಅರ್ಜಿಯನ್ನು ದಾಖಲಿಸಿಕೊಂಡ ನ್ಯಾಯಾ ಧೀಶರು ನಾಳೆ (ನ.12) ನ್ಯಾಯಾಲಯದ ಹಾಲ್‍ನಲ್ಲಿ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ಆನಂತರ ಪೊಲೀಸರು ಜನಾರ್ಧನ ರೆಡ್ಡಿಯವ ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದು ಬಿಟ್ಟುಬಂದರು.
ಹಿನ್ನೆಲೆ: ಬೆಂಗಳೂರಿನ ಆಂಬಿಡೆಂಟ್ ಸಂಸ್ಥೆಯು ಶೇ.30ರಿಂದ 40ರಷ್ಟು ಬಡ್ಡಿ ನೀಡುವುದಾಗಿ ಆಮಿಷ ವೊಡ್ಡಿ ಸುಮಾರು 15 ಸಾವಿರ ಗ್ರಾಹಕರಿಂದ ಸುಮಾರು 600 ಕೋಟಿ ರೂ. ಸಂಗ್ರಹಿಸಿ ಕೈಎತ್ತಿತ್ತು. ಈ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಸೇರಿದಂತೆ ಬೆಂಗ ಳೂರಿನ ಐದು ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಇವುಗಳನ್ನೆಲ್ಲಾ ಒಟ್ಟುಗೂಡಿಸಿ ಸಿಸಿಬಿ ತನಿಖೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ವಹಿಸಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಈ ಪ್ರಕರಣದಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಮಾಹಿತಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಪರಿಶೀಲನೆ ನಡೆಸಿ ಆಂಬಿಡೆಂಟ್ ಕಂಪನಿಯ ವ್ಯವಹಾರವನ್ನು ಸ್ಥಗಿತಗೊಳಿಸಿದ್ದರು. ಇ.ಡಿ. ಪ್ರಕರಣದಿಂದ ಪಾರಾಗಲು ಆಂಬಿಡೆಂಟ್ ಕಂಪನಿಯ ಮಾಲೀಕ ಫರೀದ್, ತನ್ನ ಆಪ್ತ ಬೃಜೇಶ್ ರೆಡ್ಡಿ ಮೂಲಕ ಜನಾರ್ಧನ ರೆಡ್ಡಿ ಅವರನ್ನು ಸಂಪರ್ಕಿಸಿದರು. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ತನ್ನ ಆಪ್ತ ಆಲೀ ಖಾನ್ ಜೊತೆಗೂಡಿ ಫರೀದ್ ಜೊತೆ ಮಾತುಕತೆ ನಡೆಸಿದ್ದ ರೆಡ್ಡಿ, ಇ.ಡಿ. ಪ್ರಕರಣದಿಂದ ಪಾರು ಮಾಡಲು 20 ಕೋಟಿ ಕೇಳಿದ್ದರು ಎನ್ನಲಾಗಿದ್ದು, ಅದರಂತೆ ಫರೀದ್, ತನ್ನ ಕಂಪನಿ ಬ್ಯಾಂಕ್ ಖಾತೆಯಿಂದ ಬೆಂಗಳೂರಿನ ರಮೇಶ್ ಕೊಠಾರಿಯಾ ಮಾಲೀಕತ್ವದ ಅಂಬಿಕಾ ಸೇಲ್ಸ್ ಕಾರ್ಪೊರೇಷನ್‍ಗೆ 18 ಕೋಟಿ ರೂ. ವರ್ಗಾವಣೆ ಮಾಡಿದ್ದರು. ರಮೇಶ್ ಕೊಠಾರಿಯಾ ಅವರು ಆ ಹಣವನ್ನು ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜುವೆಲರಿ ಮಾಲೀಕ ರಮೇಶ್ ಸತ್ರಾಲಾಲ್ ಅವರ ಖಾತೆಗೆ ವರ್ಗಾವಣೆ ಮಾಡಿದರು. ಈ ಮೊತ್ತಕ್ಕೆ 57 ಕೆ.ಜಿ. ಚಿನ್ನವನ್ನು ಜನಾರ್ಧನ ರೆಡ್ಡಿ ಆಪ್ತ ಆಲೀಖಾನ್ ಅವರು ಜನಾರ್ಧನ ರೆಡ್ಡಿ ಮಾಲೀಕತ್ವದ ಎನಾಮಲ್ ಕಂಪನಿ ಹೆಸರಿನಲ್ಲಿ ಖರೀದಿಸಿದ್ದರು ಎಂಬುದು ಸಿಸಿಬಿ ಪೊಲೀಸರ ಆರೋಪ.

ಇಂದು ಜಾಮೀನು ಅರ್ಜಿ ವಿಚಾರಣೆ
ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನ ಕ್ಕೊಳಗಾಗಿ ಜೈಲು ಸೇರಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಜಾಮೀನು ಅರ್ಜಿ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ನಾಳೆ (ನ.12) ವಿಚಾ ರಣೆಗೆ ಬರಲಿದೆ. ಇಂದು ಸಂಜೆ ನ್ಯಾಯಾ ಧೀಶರ ನಿವಾಸದಲ್ಲಿ ಸಿಸಿಬಿ ಪೊಲೀಸರು ರೆಡ್ಡಿ ಅವರನ್ನು ಹಾಜರುಪಡಿಸಿದಾಗಲೇ ಅವರ ಪರ ವಕೀಲ ಚಂದ್ರಶೇಖರ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಿಚಾರಣೆಯನ್ನು ನಾಳೆ ನ್ಯಾಯಾಲಯದ ಹಾಲ್‍ನಲ್ಲಿ ನಡೆಸು ವುದಾಗಿ ನ್ಯಾಯಾಧೀಶರು ತಿಳಿಸಿದರು. ಈ ಸಂಬಂಧ ಸುದ್ದಿಗಾರರ ಜೊತೆ ಮಾತ ನಾಡಿದ ರೆಡ್ಡಿ ಪರ ವಕೀಲ ಚಂದ್ರಶೇಖರ್, ನಾಳೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಿಗೆಲ್ಲಾ ಜಾಮೀನು ದೊರೆತಿರುವುದರಿಂದ ರೆಡ್ಡಿ ಅವರಿಗೂ ಕೂಡ ಜಾಮೀನು ದೊರೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Translate »