Tag: Karnataka Elections 2018

ಸ್ಪರ್ಧೆಗೆ ಅಂಬಿ ನಕಾರ
ಮೈಸೂರು

ಸ್ಪರ್ಧೆಗೆ ಅಂಬಿ ನಕಾರ

April 24, 2018

ಬೆಂಗಳೂರು: ಚುನಾವಣಾ ಕಣಕ್ಕಿಳಿಯಲು ನಿರಾಕರಿಸಿರುವ ಚಿತ್ರ ನಟ ಅಂಬರೀಶ್ ವಿಧಾನಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಏಕಾಏಕಿ ಸಂಪುಟದಿಂದ ವಜಾ ಮಾಡಿದ್ದು, ನಂತರ ಟಿಕೆಟ್ ನೀಡುವ ಸಂಬಂಧ ಪಕ್ಷದ ನಾಯಕರು ಎತ್ತಿದ ಅಪಸ್ವರದಿಂದ ಅಂಬರೀಶ್ ತೀವ್ರ ನೊಂದಿದ್ದಾರೆ. ಅಪಮಾನ ಮಾಡಿದ ಪಕ್ಷ ಮತ್ತು ನಾಯಕರಿಂದಲೇ ಟಿಕೆಟ್ ಪಡೆದು, ಕಣಕ್ಕಿಳಿಯು ವುದು ಎಷ್ಟರ ಮಟ್ಟಿಗೆ ಸರಿ ಎಂಬ ನಿರ್ಧಾರಕ್ಕೆ ಬಂದಿ ದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿ ದ್ದರೂ, ಅಂಬರೀಷ್ ಮಂಡ್ಯ…

ಸ್ಪರ್ಧೆ ಬಯಸದ ನಟ ಜಗ್ಗೇಶ್‍ಗೆ ಯಶವಂತಪುರದ ಬಿಜೆಪಿ ಟಿಕೆಟ್
ಮೈಸೂರು

ಸ್ಪರ್ಧೆ ಬಯಸದ ನಟ ಜಗ್ಗೇಶ್‍ಗೆ ಯಶವಂತಪುರದ ಬಿಜೆಪಿ ಟಿಕೆಟ್

April 24, 2018

ಬೆಂಗಳೂರು: ಚುನಾವಣಾ ಸ್ಪರ್ಧೆ ಬಯಸದ ಚಿತ್ರನಟ ಜಗ್ಗೇಶ್‍ಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಯಶವಂತ ಪುರದಿಂದ ಕಣಕ್ಕಿಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ನಡೆಸಿದ್ದರು. ಇದಕ್ಕಾಗಿಯೇ ಯಶವಂತಪುರ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸದೆ ಮೊದಲ ಮೂರು ಪಟ್ಟಿಯಲ್ಲೂ ಹಾಗೆಯೇ ಉಳಿಸಿ ಕೊಂಡಿದ್ದರು. ಯಡಿಯೂರಪ್ಪ ಮತ್ತು ಶ್ರೀರಾಮುಲು ಹೊರತುಪಡಿಸಿ, ಬೇರೆ ಸಂಸದರಿಗೆ ಅವಕಾಶವಿಲ್ಲ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದ್ದರೂ, ರಾಜ್ಯಾಧ್ಯಕ್ಷರಿಂದ ಪ್ರಯತ್ನ ಮುಂದುವರೆದಿತ್ತು. ವರಿಷ್ಠರು ಇಂದು…

ದೇವೇಗೌಡರಿಂದ ಬೆಳೆದ ಸ್ವಾರ್ಥಿಗಳಿಂದ ನನ್ನನ್ನು ಸೋಲಿಸಲು ಕುತಂತ್ರ
ಮಂಡ್ಯ

ದೇವೇಗೌಡರಿಂದ ಬೆಳೆದ ಸ್ವಾರ್ಥಿಗಳಿಂದ ನನ್ನನ್ನು ಸೋಲಿಸಲು ಕುತಂತ್ರ

April 24, 2018

ಪಾಂಡವಪುರ: ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಬೆಳೆದ ಕೆಲ ಸ್ವಾರ್ಥಿಗಳು ಇಂದು ಅವರ ಕೈ ಕಡಿಯುವ ನಿಟ್ಟಿನಲ್ಲಿ ನನ್ನನ್ನು ಸೋಲಿಸಲು ಇನ್ನಿಲ್ಲದ ಕುತಂತ್ರ ನಡೆಸಿದ್ದಾರೆ. ಆದರೆ ಈ ಧರ್ಮ ಯುದ್ಧದಲ್ಲಿ ಪುಟ್ಟರಾಜುನನ್ನು ಉಳಿಸಿಕೊಳ್ಳುವುದು ಕ್ಷೇತ್ರದ ಮತದಾರರ ಕೈಯಲ್ಲಿದೆ ಎಂದು ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಬಾವುಕರಾಗಿ ನುಡಿದರು. ಪಟ್ಟಣದ ತಮ್ಮ ನಿವಾಸದ ಮುಂಭಾಗದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ನನ್ನ ತಂದೆ ಸಣ್ಣತಮ್ಮೇಗೌಡರು ದೈಹಿಕವಾಗಿ ಜನ್ಮ ನೀಡಿದರೆ ಹೆಚ್.ಡಿ.ದೇವೇಗೌಡರು ನನ್ನನ್ನು ಒಬ್ಬ…

ಚುನಾವಣೆ: 33 ಅಭ್ಯರ್ಥಿಗಳಿಂದ 50 ನಾಮಪತ್ರ ಸಲ್ಲಿಕೆ
ಮಂಡ್ಯ

ಚುನಾವಣೆ: 33 ಅಭ್ಯರ್ಥಿಗಳಿಂದ 50 ನಾಮಪತ್ರ ಸಲ್ಲಿಕೆ

April 24, 2018

ಮಂಡ್ಯ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಘಟಾನುಘಟಿ ನಾಯಕರು ಸೇರಿದಂತೆ ಸುಮಾರು 33 ಅಭ್ಯರ್ಥಿಗಳಿಂದ 50 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಾಂಡವಪುರದಲ್ಲಿ ಸಿ.ಎಸ್.ಪುಟ್ಟರಾಜು, ಮಂಡ್ಯದಲ್ಲಿ ಎಂ.ಶ್ರೀನಿವಾಸ್, 5 ರೂ. ಡಾ.ಎಸ್.ಸಿ.ಶಂಕರೇಗೌಡ, ಶ್ರೀರಂಗಪಟ್ಟಣದಲ್ಲಿ ಕೆ.ಎಸ್.ನಂಜುಂಡೇಗೌಡ, ಮಳವಳ್ಳಿಯಲ್ಲಿ ಪಿ.ಎಂ.ನರೇಂದ್ರಸ್ವಾಮಿ, ಡಾ. ಕೆ. ಅನ್ನದಾನಿ, ಮದ್ದೂರಿನಲ್ಲಿ ಮಧು ಜಿ.ಮದೇಗೌಡ, ಕೆ.ಆರ್.ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡ, ನಾಗಮಂಗಲದಲ್ಲಿ ಕೆ.ಸುರೇಶ್‍ಗೌಡ ಸೇರಿದಂತೆ ಘಟನಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಶ್ರೀನಿವಾಸ್, ಪಕ್ಷೇತರ…

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ; ಸಿಹೆಚ್‍ವಿ
ಕೊಡಗು

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ; ಸಿಹೆಚ್‍ವಿ

April 24, 2018

ವಿರಾಜಪೇಟೆ: ಕಾಂಗ್ರೆಸ್ ಸರಕಾರ ಐದು ವರ್ಷದ ಅವಧಿಯಲ್ಲಿ ರಾಜ್ಯದ ಜನತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಂಸದ ವಿಜಯಶಂಕರ್ ಹೇಳಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕ್ಷೇತ್ರದ ಅಭ್ಯರ್ಥಿ ಚಪ್ಪುಡಿರ ಅರುಣ್ ಮಾಚಯ್ಯ ಅವರು ನಾಮಪತ್ರ ಸಲ್ಲಿಸುವ ಮುನ್ನ ಪಟ್ಟಣದ ಸೆರಿನಿಟಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು-ಮುಖಂಡರುಗಳ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯಶಂಕರ್, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ…

ಶ್ರೀಮಂಗಲದಲ್ಲಿ ಜೆಡಿಎಸ್ ಬಹಿರಂಗ ಸಭೆ
ಕೊಡಗು

ಶ್ರೀಮಂಗಲದಲ್ಲಿ ಜೆಡಿಎಸ್ ಬಹಿರಂಗ ಸಭೆ

April 24, 2018

ಗೋಣ ಕೊಪ್ಪಲು: ಅಧಿಕಾರಕ್ಕೆ ಬಂದ 24 ಘಂಟೆಗಳಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಹೇಳಿದರು. ದಕ್ಷಿಣ ಕೊಡಗಿನ ಶ್ರೀಮಂಗಲ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಬಹಿರಂಗ ಉದ್ಘಾಟಿಸಿ ಅವರು ಮಾತನಾಡಿದರು. ಕಾಫಿ ಬೆಳೆಗಾರನ ಸಮಸ್ಯೆಗಳು ನಿರಂತರವಾಗಿದೆ. ಸುಳ್ಳಿನ ಕಂತೆಯನ್ನು ಹೊತ್ತು ಬರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಬಹಿರಂಗವಾಗಿ ಮತದಾರರು ಪ್ರಶ್ನೆಗಳನ್ನು ಕೇಳುವ ಅವಕಾಶ ಬಂದಿದೆ. ರಾಜ್ಯದಲ್ಲಿ ಕುಮಾರ ಸ್ವಾಮಿಯವರ ಸರ್ಕಾರ ಬರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಕಾಫಿ…

ಸ್ವೀಪ್: ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ
ಕೊಡಗು

ಸ್ವೀಪ್: ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ

April 24, 2018

ಮಡಿಕೇರಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಿಲ್ಲೆಯಾದ್ಯಾಂತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು. ಮತದಾನದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು, ‘ಯಾವುದೇ ರೀತಿಯ ಆಮೀಷಕ್ಕೆ ಮರುಳಾಗದಿರಿ-ವಿವೇಚನೆಯಿಂದ ಮತ ಚಲಾಯಿಸಿ, ಮತದಾನ ಮಾಡಿದವರೇ ಮಹಾಶೂರರು’ ಎಂಬ ಸಂದೇಶಗಳನ್ನು ಸಾರಲಾಗುತ್ತಿದೆ. ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ, ಶೇಕಡವಾರು ಮತದಾನವಾಗಲು ಅರ್ಹರು ಮತ ಚಲಾಯಿಸುವಂತಾಗಬೇಕು. ಮತದಾನ ನಮ್ಮ ಹಕ್ಕು, ಪ್ರಜಾಪ್ರಭುತ್ವ ಬಲಪಡಿಸಲು…

ಕನಿಷ್ಠ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ
ಮೈಸೂರು

ಕನಿಷ್ಠ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ

April 24, 2018

ಮೈಸೂರು: ಮೇ 12ರಂದು ನಡೆಯುವ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 130 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮ ವಿಶ್ವಾಸದಿಂದ ನುಡಿದರು. ಮೈಸೂರಿನ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ, ವಾಸ್ತವವಾಗಿ ಉತ್ತರ ಕರ್ನಾ ಟಕದಲ್ಲಿ ಕಾಂಗ್ರೆಸ್-ಬಿಜೆಪಿ, ಹಳೇ ಮೈಸೂರು ಭಾಗದ 6-7 ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಸ್ಪರ್ಧೆ ಇದೆ. ಇದರಲ್ಲಿ ಕಾಂಗ್ರೆಸ್ ಕನಿಷ್ಠ 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನನಗೆ ಚಾಮುಂಡೇಶ್ವರಿ, ವರುಣಾ ಹೇಗೋ…

ಇಂದು ಕೆ.ಪಿ.ಚಂದ್ರಕಲಾ ನಾಮಪತ್ರ ಸಲ್ಲಿಕೆ
ಕೊಡಗು

ಇಂದು ಕೆ.ಪಿ.ಚಂದ್ರಕಲಾ ನಾಮಪತ್ರ ಸಲ್ಲಿಕೆ

April 24, 2018

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಕೆ.ಪಿ.ಚಂದ್ರಕಲಾ ಮಡಿಕೇರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಸಭೆ ನಡೆಸಿದರು. ಮಂಗಳವಾರ ನಾಮಪತ್ರ ಸಲ್ಲಿಸುವುದು ಪಕ್ಷದ ಗೆಲುವಿಗೆ ಪೂರಕವಾಗಿ ಕಾರ್ಯಕರ್ತರು ಶ್ರಮಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಪಕ್ಷದ ಕೊಡಗು ಉಸ್ತುವಾರಿ ವೆಂಕಪ್ಪಗೌಡ, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…

ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನಪ್ಪ ಮನೆಮನೆಗೆ ತೆರಳಿ ಮತಯಾಚನೆ
ಚಾಮರಾಜನಗರ

ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನಪ್ಪ ಮನೆಮನೆಗೆ ತೆರಳಿ ಮತಯಾಚನೆ

April 24, 2018

ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಸೋಮವಾರ ಬದನಗುಪ್ಪೆ ಮತ್ತು ಹೆಗ್ಗೋಠಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬದನಗುಪ್ಪೆ ಗ್ರಾಪಂ ವ್ಯಾಪ್ತಿಯ ಬದನಗುಪ್ಪೆ, ಪಣ್ಯದಹುಂಡಿ, ಮುತ್ತಿಗೆ, ಮರೆಯಾಲ, ಮರೆಯಾಲದಹುಂಡಿ, ಮೇಲಾಜಿಪುರ, ಹೆಗ್ಗೋಠಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೆಂಡರವಾಡಿ, ಮಲ್ಲಯ್ಯನಪುರ, ಮೇಗಲಹುಂಡಿ, ಬೋಗಾರಪುರ ಗ್ರಾಪಂ ವ್ಯಾಪ್ತಿಯ ಭೋಗಾಪುರ, ಕೆಲ್ಲಂಬಳ್ಳಿ, ಕಸ್ತೂರು, ಕಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿದರು. ನಂತರ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ…

1 11 12 13 14
Translate »