ಸ್ಪರ್ಧೆಗೆ ಅಂಬಿ ನಕಾರ
ಮೈಸೂರು

ಸ್ಪರ್ಧೆಗೆ ಅಂಬಿ ನಕಾರ

April 24, 2018

ಬೆಂಗಳೂರು: ಚುನಾವಣಾ ಕಣಕ್ಕಿಳಿಯಲು ನಿರಾಕರಿಸಿರುವ ಚಿತ್ರ ನಟ ಅಂಬರೀಶ್ ವಿಧಾನಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಏಕಾಏಕಿ ಸಂಪುಟದಿಂದ ವಜಾ ಮಾಡಿದ್ದು, ನಂತರ ಟಿಕೆಟ್ ನೀಡುವ ಸಂಬಂಧ ಪಕ್ಷದ ನಾಯಕರು ಎತ್ತಿದ ಅಪಸ್ವರದಿಂದ ಅಂಬರೀಶ್ ತೀವ್ರ ನೊಂದಿದ್ದಾರೆ. ಅಪಮಾನ ಮಾಡಿದ ಪಕ್ಷ ಮತ್ತು ನಾಯಕರಿಂದಲೇ ಟಿಕೆಟ್ ಪಡೆದು, ಕಣಕ್ಕಿಳಿಯು ವುದು ಎಷ್ಟರ ಮಟ್ಟಿಗೆ ಸರಿ ಎಂಬ ನಿರ್ಧಾರಕ್ಕೆ ಬಂದಿ ದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿ ದ್ದರೂ, ಅಂಬರೀಷ್ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ಪಕ್ಷದ ಬಿ ಫಾರಂ ಪಡೆಯದ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ನೀಡಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಅಂಬ ರೀಶ್ ಹೆಸರನ್ನು ಮೊದಲ ಪಟ್ಟಿಯಲ್ಲೇ ವರಿಷ್ಠರು ಪ್ರಕಟಿಸಿದ್ದರೂ, ಬಿ ಫಾರಂ ಪಡೆಯುವ ಗೋಜಿಗೆ ಅವರು ಮುಂದಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮೂಲಕ ಅವರ ನಡೆಯ ಬಗ್ಗೆ ತಿಳಿದುಕೊಳ್ಳುವ ಮತ್ತು ಅವರ ಮನವೊಲಿಸುವ ಪ್ರಯತ್ನ ಸಫಲವಾಗಲಿಲ್ಲ.

ಕಣಕ್ಕಿಳಿಯುವ ಬಗ್ಗೆ ಯಾವುದೇ ಮಾಹಿತಿ ನೀಡದೇ ಅಂಬರೀಶ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ನಾಳೆ ಕಡೇ ದಿನವಾಗಿದ್ದರಿಂದ ಇಂದು ಕೊನೆ ಪ್ರಯತ್ನ ವರಿಷ್ಠರಿಂದಲೇ ಅವರ ಮನವೊಲಿಸುವ ಪ್ರಯತ್ನ ನಡೆಯಿತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಸುಶೀಲ್‍ಕುಮಾರ್ ಶಿಂಧೆ ಅಂಬರೀಶ್ ಅವರನ್ನು ಸಂಪರ್ಕಿಸಿ, ಮನವೊಲಿ ಸುವ ಪ್ರಯತ್ನವೂ ವಿಫಲವಾಯಿತು.

ಈ ಮಧ್ಯೆ ಇಂದು ಕೆಪಿಸಿಸಿ ಅಧ್ಯಕ್ಷ ಡಾ. ಪರ ಮೇಶ್ವರ್ ಅವರು ಅಂಬರೀಶ್ ಸಂಪರ್ಕಿಸಿ ಸ್ಪರ್ಧಿಸು ವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಅಂಬರೀಶ್ ಸೋಲುತ್ತೇನೆ ಎಂದು ಹೇಳುತ್ತಿರುವಾಗ ನಾನೇಕೆ ಸ್ಪರ್ಧಿಸಲಿ ಎಂದು ಪ್ರಶ್ನಿಸಿದ್ದಾರೆ.

Translate »