ಸ್ಪರ್ಧೆ ಬಯಸದ ನಟ ಜಗ್ಗೇಶ್‍ಗೆ ಯಶವಂತಪುರದ ಬಿಜೆಪಿ ಟಿಕೆಟ್
ಮೈಸೂರು

ಸ್ಪರ್ಧೆ ಬಯಸದ ನಟ ಜಗ್ಗೇಶ್‍ಗೆ ಯಶವಂತಪುರದ ಬಿಜೆಪಿ ಟಿಕೆಟ್

April 24, 2018

ಬೆಂಗಳೂರು: ಚುನಾವಣಾ ಸ್ಪರ್ಧೆ ಬಯಸದ ಚಿತ್ರನಟ ಜಗ್ಗೇಶ್‍ಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ.

ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಯಶವಂತ ಪುರದಿಂದ ಕಣಕ್ಕಿಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ನಡೆಸಿದ್ದರು. ಇದಕ್ಕಾಗಿಯೇ ಯಶವಂತಪುರ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸದೆ ಮೊದಲ ಮೂರು ಪಟ್ಟಿಯಲ್ಲೂ ಹಾಗೆಯೇ ಉಳಿಸಿ ಕೊಂಡಿದ್ದರು. ಯಡಿಯೂರಪ್ಪ ಮತ್ತು ಶ್ರೀರಾಮುಲು ಹೊರತುಪಡಿಸಿ, ಬೇರೆ ಸಂಸದರಿಗೆ ಅವಕಾಶವಿಲ್ಲ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದ್ದರೂ, ರಾಜ್ಯಾಧ್ಯಕ್ಷರಿಂದ ಪ್ರಯತ್ನ ಮುಂದುವರೆದಿತ್ತು. ವರಿಷ್ಠರು ಇಂದು ಬಿಡುಗಡೆ ಮಾಡಿದ ಪಟ್ಟಿ ಯಡಿಯೂರಪ್ಪನವರಿಗೆ ಸ್ವಲ್ಪ ಇರಿಸುಮುರಿಸು ಉಂಟು ಮಾಡಿದಂತಿದೆ. ಒಂದೆಡೆ ವರುಣಾದಲ್ಲಿ ಪುತ್ರನಿಗೆ ಟಿಕೆಟ್ ನಿರಾಕರಿಸಿದೆ, ಯಶವಂತಪುರ ಕ್ಷೇತ್ರದಿಂದ ನಟ ಜಗ್ಗೇಶ್‍ಗೆ ಅವ ಕಾಶ ಮಾಡಿಕೊಟ್ಟಿದೆ. ಖಾಲಿ ಉಳಿದ ಹನ್ನೊಂದು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿಯು ತ್ತಿರುವ ಬಾದಾಮಿ, ಮೈಸೂರಿನ ವರುಣಾ ಸೇರಿದಂತೆ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಯಾವುದೇ ಸಂದರ್ಭದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಕುಟುಂಬ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಇಂದು ಪ್ರಕಟಿಸಿರುವ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಕಾರ್ಯಕರ್ತರು ಎನ್ನುವುದಕ್ಕಿಂತ ಬೃಹತ್ ಉದ್ದಿಮೆದಾರರಾಗಿದ್ದಾರೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ನೀಡದೇ ರಿಯಲ್‍ಎಸ್ಟೇಟ್ ಉದ್ಯಮಿ ಲಲೇಶ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.

Translate »