ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಸಂದೇಶ್ ಸ್ವಾಮಿ, ಪ್ರೊ.ಕೆ.ಎಸ್.ರಂಗಪ್ಪ, ಎಲ್.ನಾಗೇಂದ್ರ, ಹರೀಶ್‍ಗೌಡ ನಾಮಪತ್ರ ಸಲ್ಲಿಕೆ
ಮೈಸೂರು

ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಸಂದೇಶ್ ಸ್ವಾಮಿ, ಪ್ರೊ.ಕೆ.ಎಸ್.ರಂಗಪ್ಪ, ಎಲ್.ನಾಗೇಂದ್ರ, ಹರೀಶ್‍ಗೌಡ ನಾಮಪತ್ರ ಸಲ್ಲಿಕೆ

April 24, 2018

ಮೈಸೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಂತೆ ಮೈಸೂರಿನಲ್ಲಿಂದು ನಾಮಪತ್ರ ಸಲ್ಲಿಸಿದವರಲ್ಲಿ ನರಸಿಂಹ ರಾಜ ಕ್ಷೇತ್ರದಿಂದ ಕಾಂಗ್ರೆಸ್‍ನ ಸಚಿವ ತನ್ವೀರ್‍ಸೇಠ್, ಬಿಜೆಪಿಯ ಸಂದೇಶ್ ಸ್ವಾಮಿ, ಕೃಷ್ಣರಾಜ ಕ್ಷೇತ್ರದಿಂದ ಕಾಂಗ್ರೆಸ್‍ನ ಶಾಸಕ ಎಂ.ಕೆ. ಸೋಮಶೇಖರ್, ಚಾಮರಾಜ ಕ್ಷೇತ್ರದಿಂದ ಜೆಡಿಎಸ್‍ನ ಪ್ರೊ.ಕೆ.ಎಸ್.ರಂಗಪ್ಪ, ಬಿಜೆಪಿಯ ಎಲ್.ನಾಗೇಂದ್ರ ಪ್ರಮುಖರು.

ಈ ಎಲ್ಲ ಪ್ರಮುಖರು ನಾಮಪತ್ರ ಸಲ್ಲಿಸಲು ಭಾರೀ ಮೆರವಣಿಗೆಯಲ್ಲಿ ಸಾಗಿದ ಹಾದಿಯಲ್ಲಿ ಮೈಸೂರಿನ ಹಲವೆಡೆ ಟ್ರಾಫಿಕ್ ಜಾಮ್ ಆಗಿತ್ತು. ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರ ಚುನಾವಣಾಧಿಕಾರಿ ಗಳ ಕಚೇರಿಗೆ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಅಹಿತ ಕರ ಘಟನೆಗಳಿಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಚಿವ ತನ್ವೀರ್‍ಸೇಠ್ ನಾಮಪತ್ರ: ನರ ಸಿಂಹರಾಜ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ತನ್ವೀರ್‍ಸೇಠ್ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿರುವ ಚುನಾವಣಾ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಆರ್.ಜೆ.ಕಾಂತ ರಾಜು ಅವರಿಗೆ ತಮ್ಮ ಉಮೇದುವಾರಿಕೆ ಯನ್ನು (4 ಪ್ರತಿಗಳಲ್ಲಿ) ಸಲ್ಲಿಸಿದರು.

ಮಾಜಿ ಮೇಯರ್ ಅಯೂಬ್‍ಖಾನ್, ಮುಖಂಡರಾದ ಅರ್ಜುನ್‍ಕುಮಾರ್, ಉದಯಕುಮಾರ್, ಜಿ.ಎನ್.ಮಂಜು ನಾಥ್ ಅವರೊಂದಿಗಿದ್ದರು. ಮಧ್ಯಾಹ್ನ 2.10ಕ್ಕೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ತನ್ವೀರ್‍ಸೇಠ್, ತಮ್ಮ ತಂದೆ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ಮಾರಮ್ಮನಗುಡಿ, ಗಣಪತಿ ದೇವಸ್ಥಾನಗಳಲ್ಲಿ ನಮಸ್ಕರಿಸಿ, ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇ ಶ್ವರಿ ದರ್ಶನ ಪಡೆದರು. ಅಲ್ಲಿಂದ ನೇರ ವಾಗಿ ಎಸ್‍ಪಿ ವೃತ್ತದ ಬಳಿ ಜಮಾಯಿ ಸಿದ್ದ ಸಹಸ್ರಾರು ಕಾರ್ಯಕರ್ತರೊಂದಿಗೆ ಭಾಗವಹಿಸಿ, ಅಲ್ಲಿಂದ ನೇರವಾಗಿ ಪಾದಯಾತ್ರೆ ಮೂಲಕ ಚುನಾವಣಾ ಕಚೇರಿಗೆ ಧಾವಿಸಿ, ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಸಂದೇಶ್ ಸ್ವಾಮಿ ಬೃಹತ್ ಮೆರವಣಿಗೆ: ಬಿಜೆಪಿ ಅಭ್ಯರ್ಥಿ ಎಸ್.ಸತೀಶ್ (ಸಂದೇಶ್ ಸ್ವಾಮಿ) ಕ್ಯಾತಮಾರನಹಳ್ಳಿಯ ಹುಲಿ ಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಹಸ್ರಾರು ಬೆಂಬಲಿಗರೊಂದಿಗೆ ಗಾಯತ್ರಿ ಪುರಂ ಮೂಲಕ ಎಸ್‍ಪಿ ಕಚೇರಿವರೆಗೆ ಮೆರವಣ ಗೆ ನಡೆಸಿದರು. ಬಿಜೆಪಿ ಹಾಗೂ ಅಭ್ಯರ್ಥಿ ಪರ ಘೋಷಣೆ ಕೂಗುತ್ತಿದ್ದರು. ಎಸ್‍ಪಿ ಕಚೇರಿ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರಿಂದ ಜನರು ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿರುವ ಚುನಾವಣಾ ಕಚೇರಿವರೆಗೆ ಬರಲಾಗಿರಲಿಲ್ಲ. ಹೀಗಾಗಿ ಅಭ್ಯರ್ಥಿ ಸಂದೇಶ್ ಸ್ವಾಮಿ ತಮ್ಮ ಸೂಚಕ ರೊಂದಿಗೆ ಮಧ್ಯಾಹ್ನ 12.25ರ ವೇಳೆಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ತ್ರಿಪ್ರತಿಯಲ್ಲಿ ತಮ್ಮ ಉಮೇದುವಾರಿಕೆ ಯನ್ನು ಚುನಾವಣಾಧಿಕಾರಿ ಆರ್.ಜೆ. ಕಾಂತರಾಜು ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂದೇಶ್ ಸ್ವಾಮಿ ಅವರೊಂದಿಗೆ ಸಂಸದ ಪ್ರತಾಪ್‍ಸಿಂಹ, ಮಾಜಿ ಎಂಎಲ್‍ಸಿ ತೋಂಟದಾರ್ಯ, ಮಾಜಿ ಮೇಯರ್ ರತ್ನಾ ಲಕ್ಷ್ಮಣ್, ಎನ್‍ಆರ್ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸು. ಮುರಳಿ ಹಾಜರಿದ್ದರು.

ಎಲ್.ನಾಗೇಂದ್ರ: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿದ ಎಲ್. ನಾಗೇಂದ್ರ, ಬಿಜೆಪಿ ಪಕ್ಷದ ನೂರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಬಿಜೆಪಿ ಬಾವುಟ ಕಾರ್ಯಕರ್ತರ ಕೈಗಳಲ್ಲಿ ರಾರಾಜಿಸಿದವು. ರಾಮವಿಲಾಸ ರಸ್ತೆ ಮೂಲಕ ಸಯ್ಯಾಜಿರಾವ್ ರಸ್ತೆ ತಲುಪಿ ಮೆರವಣ ಗೆ ಅಂತ್ಯಗೊಂಡಿತು.

ಮೆರವಣಿಗೆ ಗೆಯುದ್ದಕ್ಕೂ ತಮಟೆ ಹಾಗೂ ನಗಾರಿಯ ಸದ್ದು ಕೇಳಿಸಿತು. ಬಹುತೇಕ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಸಾಗಿದರೆ, ಕೆಲವರು ಬೈಕ್ ಹಾಗೂ ಆಟೋರಿಕ್ಷಾಗಳಲ್ಲಿ ಮೆರವಣಿಗೆಯೊಂದಿಗೆ ಸಾಗಿದರು. ಬಳಿಕ ಮಹಾನಗರ ಪಾಲಿಕೆ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿರುವ ಚಾಮರಾಜ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ವಿಧಾನಪರಿಷತ್ ಮಾಜಿ ಸದಸ್ಯರಾದ ಡಿ.ಮಾದೇಗೌಡ, ತೋಂಟದಾರ್ಯ, ಸಂಸದ ಪ್ರತಾಪ್‍ಸಿಂಹ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಅವರೊಂದಿಗೆ ತೆರಳಿ (1 ಸೆಟ್) ತಮ್ಮ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಕೆ.ಹೆಚ್.ಜಗದೀಶ್ ಹಾಗೂ ಸಹಾಯಕ ಚುನಾವಣಾಧಿಕಾರಿ ತಿಪ್ಪೇಸ್ವಾಮಿ ಅವರು ನಾಮಪತ್ರ ಸ್ವೀಕರಿಸಿದರು.

ಬಿಜೆಪಿ ಒಗ್ಗಟ್ಟಿನ ಮಂತ್ರ: ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್‍ಗೆ ಪ್ರಬಲ ಆಕಾಂಕ್ಷಿಗಳಾಗಿದ್ದ ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಒಗ್ಗಟಿನ ಮಂತ್ರ ಜಪಿಸಿದರು.

ಗುಂಪು ಚದುರಿಸಿದ ಪೊಲೀಸರು: ಎಲ್.ನಾಗೇಂದ್ರ ಅವರು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಲವು ಕಾರ್ಯಕರ್ತರು ಗುಂಪುಗೂಡುವುದು ನಿಷೇಧವಿದ್ದರೂ ಪಾಲಿಕೆ ಮುಖ್ಯ ಗೇಟ್‍ನಲ್ಲಿ ಜಮಾಯಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಅವರನ್ನು ಚದುರಿಸಿದರು.

ಪ್ರೊ.ಕೆ.ಎಸ್.ರಂಗಪ್ಪ: ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ (3 ಸೆಟ್ ಒಳಗೊಂಡಂತೆ) ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಸಾವಿರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಪ್ರೊ.ಕೆ.ಎಸ್.ರಂಗಪ್ಪ ಅದ್ಧೂರಿ ಮೆರವಣಿಗೆ ನಡೆಸಿದರು.

ದಿವಾನ್ಸ್ ರಸ್ತೆಯಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರೊ.ಕೆ.ಎಸ್.ರಂಗಪ್ಪ, ತೆರೆದ ವಾಹನದಲ್ಲಿ ಪಕ್ಷದ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಮಾಜಿ ಮೇಯರ್‍ಗಳಾದ ಎಂ.ಜೆ.ರವಿಕುಮಾರ್, ಆರ್.ಲಿಂಗಪ್ಪ ಸೇರಿದಂತೆ ಇನ್ನಿತರ ಮುಖಂಡರೊಂದಿಗೆ ರೋಡ್ ಶೋ ನಡೆಸಿ ಪಾಲಿಕೆ ಆವರಣ ತಲುಪಿದರು. ಈ ವೇಳೆ ಮಾರ್ಗ ಮಧ್ಯೆ ಕೃಷ್ಣವಿಲಾಸ ರಸ್ತೆಯಲ್ಲಿರುವ ಇಮಾಮ್ ಶಾ ದರ್ಗಾಕ್ಕೆ ತೆರಳಿದ ರಂಗಪ್ಪನವರು ಅಲ್ಲಿ ಪ್ರಾರ್ಥನೆ ಸಲ್ಲಿಸಿ ಮತ್ತೆ ಮೆರವಣಿಗೆ ಮುಂದುವರೆಸಿದರು. ಬಳಿಕ ರಾಮವಿಲಾಸ ರಸ್ತೆ ಮೂಲಕ ಸಯ್ಯಾಜಿರಾವ್ ರಸ್ತೆ ತಲುಪಿ ಮೆರವಣಿಗೆ ಅಂತ್ಯಗೊಂಡಿತು.
ನಂತರ ಪ್ರೊ.ಕೆ.ಎಸ್.ರಂಗಪ್ಪ ಅವರು ಪತ್ನಿ ಪೂಣ ್ಮಾ ರಂಗಪ್ಪ, ಬೀಗರಾದ ಡಾ.ಅನುಸೂಯ ಮಂಜುನಾಥ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ ಅವರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕೆ.ಹೆಚ್.ಜಗದೀಶ್ ಅವರಿಗೆ (3 ಪ್ರತಿಗಳಲ್ಲಿ) ನಾಮಪತ್ರ ಸಲ್ಲಿಸಿದರು.

ಆಕರ್ಷಿಸಿದ ಎತ್ತಿನ ಗಾಡಿ: ರಂಗಪ್ಪ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಎತ್ತಿನ ಗಾಡಿಗಳು ಸಾಗುವ ಮೂಲಕ ಗಮನ ಸೆಳೆದವು. ಹಸಿರು ಪೇಟ ಧರಿಸಿ, ಜೆಡಿಎಸ್ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರು ಎತ್ತಿನ ಗಾಡಿಯಲ್ಲಿ ಸಾಗಿ ಪಕ್ಷದ ಪರ ಘೋಷಣೆ ಕೂಗುತ್ತಿದ್ದರು.

ಎಂಕೆಎಸ್ ಬೃಹತ್ ಮೆರವಣಿಗೆ: ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಂ.ಕೆ.ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಾಲಿಕೆಯ ನೆಲ ಅಂತಸ್ತಿನಲ್ಲಿರುವ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಲ್ಲಿ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಸೋಮಶೇಖರ್, ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಅಶೋಕಪುರಂನ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ವಿದ್ಯಾರಣ್ಯಪುರಂನ ಚಾಮುಂಡಿವನಂನಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.
ಭೂತಾಳೆ ಮೈದಾನ, ನಂಜುಮಳಿಗೆ, ಮಧ್ವಾಚಾರ್ ರಸ್ತೆ ಮೂಲಕ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ ತಲುಪಿ ಅಲ್ಲಿ ಪೂಜೆ ಸಲ್ಲಿಸಿ, ಅಗ್ರಹಾರ ವೃತ್ತದ ಮೂಲಕ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಚುನಾವಣಾ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಈ ವೇಳೆ ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಸದಸ್ಯ ಸುನಿಲ್‍ಕುಮಾರ್, ಕಾಂಗ್ರೆಸ್‍ನ ಮಾಜಿ ನಗರಾಧ್ಯಕ್ಷ ಟಿ.ಎಸ್.ರವಿಶಂಕರ್ ಉಪಸ್ಥಿತರಿದ್ದರು.

Translate »