ಕನಿಷ್ಠ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ
ಮೈಸೂರು

ಕನಿಷ್ಠ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ

April 24, 2018

ಮೈಸೂರು: ಮೇ 12ರಂದು ನಡೆಯುವ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 130 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮ ವಿಶ್ವಾಸದಿಂದ ನುಡಿದರು.

ಮೈಸೂರಿನ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ, ವಾಸ್ತವವಾಗಿ ಉತ್ತರ ಕರ್ನಾ ಟಕದಲ್ಲಿ ಕಾಂಗ್ರೆಸ್-ಬಿಜೆಪಿ, ಹಳೇ ಮೈಸೂರು ಭಾಗದ 6-7 ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ನೇರ ಸ್ಪರ್ಧೆ ಇದೆ. ಇದರಲ್ಲಿ ಕಾಂಗ್ರೆಸ್ ಕನಿಷ್ಠ 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನನಗೆ ಚಾಮುಂಡೇಶ್ವರಿ, ವರುಣಾ ಹೇಗೋ ಹಾಗೆಯೇ ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳ ಬಗ್ಗೆ ಒಲವಿದೆ ಎಂದರು.

ಬಾದಾಮಿಯಲ್ಲಿ ಒಂದು ದಿನ ಮಾತ್ರ ಪ್ರಚಾರಕ್ಕೆ ಹೋಗುತ್ತೇನೆ. ಅಲ್ಲಿನ ಪಕ್ಷದ ನಾಯಕರುಗಳೇ ಪ್ರಚಾರ ಮಾಡಲಿ ದ್ದಾರೆ. ನಾನು ನನ್ನ ಪ್ರತಿಸ್ಪರ್ಧಿಗಳ ಬಗ್ಗೆ ಯಾವತ್ತೂ ಲೆಕ್ಕ ಹಾಕಲು ಹೋಗುವು ದಿಲ್ಲ. ಯಾರೇ ಪ್ರತಿಸ್ಪರ್ಧಿ ಇದ್ದರೂ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ವರುಣಾದಲ್ಲಿ ಡಾ.ಯತೀಂದ್ರಗೆ ವಿಜ ಯೇಂದ್ರ ಪ್ರಬಲ ಸ್ಪರ್ಧೆ ಒಡ್ಡುತ್ತಾರೆಯೇ ಎಂಬ ಪ್ರಶ್ನೆಗೆ, ಅವರು ಶಿಕಾರಿಪುರ ದಿಂದ ಬಂದು ಇಲ್ಲಿ ಪ್ರಯತ್ನ ಮಾಡುತ್ತಿ ದ್ದಾರೆ. ಮಾಡಲಿ ಬಿಡಿ, ಕಳೆದ ಬಾರಿಯೂ ಹೀಗೇ ಆಯಿತು. ಕಾ.ಪು.ಸಿದ್ದಲಿಂಗ ಸ್ವಾಮಿ ನಿಂತಿದ್ದರೂ ನಾನು 30 ಸಾವಿರ ಮತಗಳಲ್ಲಿ ಗೆಲ್ಲಲಿಲ್ಲವೇ? ಎಂದು ಮರು ಪ್ರಶ್ನೆ ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಸ್ಟಾರ್ ನಟರು ಬರುತ್ತಾರೆಯೇ ಎಂಬ ಪ್ರಶ್ನೆಗೆ, ನಟ ಸುದೀಪ್ ಮಾತ್ರ ನಿಮ್ಮೊಬ್ಬ ರಿಗೆ ಪ್ರಚಾರಕ್ಕೆ ಬರುತ್ತೇನೆಂದು ಹೇಳಿ ದ್ದರು. ನಾನೇ ಇನ್ನೂ ಅವರಿಗೆ ಏನನ್ನೂ ಹೇಳಿಲ್ಲ ಎಂದ ಅವರು, ಆಯಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು, ಆಯಾ ಭಾಗದ ಮುಖಂ ಡರೇ ಸ್ಟಾರ್ ಪ್ರಚಾರಕರು ಎಂದರು.

ಹೆಚ್‍ಡಿಕೆ ಹಾಸ್ಯಾಸ್ಪದ ಹೇಳಿಕೆ: ಬಾದಾಮಿ ಇರಲಿ, ಗೋಡಂಬಿಯೂ ಸಿಗುವುದಿಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿ ಕ್ರಿಯಿಸಿದ ಅವರು, ಕಳೆದ ಬಾರಿ ಮೊಯ್ಲಿ ವಿರುದ್ಧ ನಿಂತು ಕುಮಾರಸ್ವಾಮಿ ಸೋಲ ಲಿಲ್ಲವೇ? ಚನ್ನಪಟ್ಟಣದಲ್ಲಿ ಅವರ ಪತ್ನಿಯೇ ಸೋತಿರಲಿಲ್ಲವೇ? ಗೆಲ್ಲಕ್ಕಾಗದ ಅವರೇ ಇನ್ನೊಬ್ಬರನ್ನು ಸೋಲಿಸುತ್ತೇವೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಅವರು ವ್ಯಂಗ್ಯವಾಡಿದರು.

ಇತ್ತೀಚೆಗೆ ಬಹುಭಾಷಾ ನಟ ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್ ಕ್ಯಾಂಪೇನ್ ಶುರು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ., ಪ್ರಕಾಶ್ ರೈ ಜಾತ್ಯತೀತ ಪರವಾಗಿದ್ದು, ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದರು.

ಕಾವೇರಿ ಮ್ಯಾನೇಜ್‍ಮೆಂಟ್ ಬೋರ್ಡ್ ರಚನೆಗೆ ನಮ್ಮ ವಿರೋಧ: ಕಾವೇರಿ ವಿವಾ ದಕ್ಕೆ ಸಂಬಂಧಿಸಿದಂತೆ ಕಾವೇರಿ ಮ್ಯಾನೇಜ್ ಮೆಂಟ್ ಬೋರ್ಡ್ ರಚನೆ ಬೇಡ, ಮೇ 3ರೊಳಗೆ ಸ್ಕೀಂ ಮಾದರಿ ರಚನೆ ಮಾಡಿ ಎಂದು ಸುಪ್ರಿಂ ಕೋರ್ಟ್ ಸೂಚಿಸಿದ್ದು, ಅದಕ್ಕೆ ನಮ್ಮ ಸಹಮತವಿದೆ. ಆದರೆ, ಕಾವೇರಿ ಮ್ಯಾನೇಜ್‍ಮೆಂಟ್ ಬೋರ್ಡ್ ರಚಿಸು ವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ಅವರ ಒತ್ತಡಕ್ಕೆ ಮಣ ದು ಕಾವೇರಿ ಮ್ಯಾನೇಜ್‍ಮೆಂಟ್ ಬೋರ್ಡ್ ಮಾಡ ಬಾರದು. ಸುಪ್ರಿಂ ಹೇಳಿರುವಂತೆ ಸ್ಕೀಂ ಮಾದರಿ ರಚನೆ ಮಾಡಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

Translate »