ಚಾಮುಂಡೇಶ್ವರಿ, ವರುಣಾ ಮಾದರಿ ಕ್ಷೇತ್ರ ಮಾಡುವೆ: ಸಿಎಂ
ಮೈಸೂರು

ಚಾಮುಂಡೇಶ್ವರಿ, ವರುಣಾ ಮಾದರಿ ಕ್ಷೇತ್ರ ಮಾಡುವೆ: ಸಿಎಂ

April 24, 2018

ಮೈಸೂರು, ಏ.23(ಎಂಟಿವೈ)- ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡುಗೆ ನೀಡಿರುವ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದ್ದು, ಅದನ್ನು ಬದಲಿಸು ವುದಾಗಿ ಹೇಳಿಕೆ ನೀಡುವವರಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರದ ಹೊಸ ಹೋಟೆ, ಆಲತ್ತೂರು, ಹದಿನಾರು, ಹದಿ ನಾರು ಮೊಳೆ, ಕೆಂಪಿಸಿದ್ದನಹುಂಡಿ, ತಾಂಡವಪುರ, ಹಳ್ಳಿದಿಡ್ಡಿ, ಗೊದ್ದನಪುರ, ರಾಂಪುರಗಳಲ್ಲಿ ಸೋಮವಾರ ರೋಡ್ ಶೋ ಹಾಗೂ ಪಾದಯಾತ್ರೆ ನಡೆಸಿ, ಮತ ಯಾಚನೆ ಮಾಡಿ ಮಾತನಾಡಿದ ಅವರು, ಈ ಚುನಾವಣೆ ಕೋಮುವಾದಿ ಪಕ್ಷ ಮತ್ತು ಬಡವರ ಪಕ್ಷ ಕಾಂಗ್ರೆಸ್ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ರಾಜ್ಯದಲ್ಲಿ ನನ್ನ ನೇತೃತ್ವದ ಸರ್ಕಾರ ಕಳೆದ 5 ವರ್ಷ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಎಲ್ಲಾ ಸಮುದಾಯದ ಹಿತ ಕಾಪಾಡುವ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗಿದೆ. ಆದರೆ ಈ ಹಿಂದೆ ಅಧಿಕಾರದಲ್ಲಿದ್ದವರು ಭ್ರಷ್ಟಾಚಾರ, ಹಗರಣ ದಲ್ಲಿ ತೊಡಗಿ ಸಂಪತ್ತನ್ನು ಲೂಟಿ ಮಾಡಿ ಜೈಲಿಗೆ ಹೋದವರು ಮತ್ತೆ ಅಧಿಕಾರಕ್ಕೆ ಬರಬಾರದು. ಸಂವಿಧಾನ ಬದಲಿಸಲು ಹುನ್ನಾರ ನಡೆಸುವವರಿಗೆ ತಕ್ಕಪಾಠ ಕಲಿಸಬೇಕು. ಸಂವಿಧಾನ ಬದಲಿಸುವ ಮಾತನ್ನು ಯಾರೂ ಸಹಿಸುವುದಿಲ್ಲ. ಇಂತಹ ಮಾತುಗಳಿಂದಲೇ ಶೋಷಿತರನ್ನು ಯಾವ ಮನಸ್ಥಿತಿಯಲ್ಲಿ ಕಾಣುತ್ತಾರೆ ಎನ್ನುವು ದನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸ ಬೇಕೆಂದು ಅವರು ಕೋರಿದರು.

ಚಾಮುಂಡೇಶ್ವರಿ ಕ್ಷೇತ್ರ ಮತ್ತು ವರುಣಾ ಕ್ಷೇತ್ರ ನನಗೆ ರಾಜಕೀಯ ಶಕ್ತಿ ಕೊಟ್ಟಂತಹ ಕ್ಷೇತ್ರಗಳಾಗಿವೆ. ಈ ಎರಡು ಕ್ಷೇತ್ರಗಳನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ ಮಾಡು ವುದು ನನ್ನ ಉದ್ದೇಶವಾಗಿದೆ. ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮತ್ತು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ದ್ದೇವೆ. ಇನ್ನಷ್ಟು ಮಾಡಬೇಕಾದ ಕೆಲಸ ಗಳಿವೆ. ಬಿಜೆಪಿ ಸರ್ಕಾರವಿದ್ದಾಗ 5 ವರ್ಷದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಖರ್ಚು ಮಾಡಿದ ಹಣ 22 ಸಾವಿರ ಕೋಟಿ ರೂ ಆಗಿದೆ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷದಲ್ಲಿ 89 ಸಾವಿರ ಕೋಟಿ ರೂ ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಏಳಿಗೆಗಾಗಿ ವೆಚ್ಚ ಮಾಡಲಾಗಿದೆ. ಇದರಿಂದ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿ ಸುವ ಬಡಾವಣೆಗಳ, ಗ್ರಾಮಗಳ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿ ಮಾರ್ಪಡಿಸ ಲಾಗಿವೆ. ಆರ್ಥಿಕವಾಗಿ ಸಬಲರಾಗಲು ಗುತ್ತಿಗೆಯಲ್ಲಿ 1 ಕೋಟಿವರೆಗೆ ಮೀಸಲಾತಿ ಕೊಟ್ಟಿದ್ದೇವೆ. ಹಸಿವು ಮುಕ್ತ, ಗುಡಿಸಲು ಮುಕ್ತ, ಬಯಲು ಶೌಚಮುಕ್ತ, ಶುದ್ಧ ನೀರು, ಕೆರೆ ತುಂಬಿಸುವ ಯೋಜನೆ, ನೀರಾವರಿ ಯೋಜನೆಗಳು, ಸಾಲ ಮನ್ನಾ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಶಾಲಾ ಮಕ್ಕಳಿಗೆ ಉಚಿತ ಬಸ್‍ಬಸ್ ನೀಡಿದ್ದೇವೆ ಎಂದರು.

ಹಿಂದುಳಿದ ವರ್ಗಗಳಲ್ಲಿ ಒಂದಾಗಿ ರುವ ಉಪ್ಪಾರ ಜನಾಂಗದ ಅಭಿವೃದ್ಧಿಗಾಗಿ ಉಪ್ಪಾರ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಭಗೀರಥ ಜಯಂತಿ ಮಾಡಿದ್ದೇವೆ. ಪುಟ್ಟ ರಂಗಶೆಟ್ಟಿಯವರನ್ನು ಶಾಸಕರನ್ನಾಗಿ ಮಾಡಿ ದ್ದೇವೆ ಮತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಪುಟ್ಟರಂಗಶೆಟ್ಟಿ ಮಂತ್ರಿ ಯಾಗುವ ಸಾಧ್ಯತೆ ಇದೆ ಎಂದರು.

ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿ ಗಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಡ ಲಾಗಿದೆ. ವಾಲ್ಮೀಕಿ ಜಯಂತಿ ಆಚರಿಸ ಲಾಗುತ್ತಿದೆ. ವಿಧಾನಸೌಧದ ಆವರಣದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಾಗಿದೆ. ಶಿಕಾರಿ ಪುರದಿಂದ ಬಂದವರಿಗೆ ಆಗಲೆ ಸೋಲಿನ ಭೀತಿ ಪ್ರಾರಂಭವಾಗಿದ್ದು, ಹೇಳದೆ ಕೇಳದೆ ರಾತ್ರೋರಾತ್ರಿ ನಾಪತ್ತೆಯಾಗಿ ಹೋಗು ತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಡಾ.ಯತೀಂದ್ರ ಅವರನ್ನು ಹೆಚ್ಚು ಮತಗಳ ಅಂತರದಿಂದ ಆರಿಸಿ ವಿಧಾನಸೌಧಕ್ಕೆ ಕಳಿಸ ಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವರುಣಾ ಕ್ಷೇತ್ರದ ಅಭ್ಯರ್ಥಿ ಡಾ.ಯತೀಂದ್ರ, ಮುಖಂಡರಾದ ಎಸ್.ಸಿ.ಬಸವರಾಜು, ಬಿ.ಎಂ.ರಾಮು, ಹೊಸಕೋಟೆ ಕುಮಾರ್, ಬಸವಣ್ಣ, ಧರ್ಮೇಂದ್ರರಾಜು, ಗೋವಿಂದರಾಜು, ಮಾಲೇಗೌಡ, ಕುಪ್ಪರವಳ್ಳಿ ಬಸವರಾಜು, ಬುಲೆಟ್‍ಮಹಾದೇವ, ರಂಗಸ್ವಾಮಿ, ಬಾಬು ಮರಳೂರು ಮಹೇಶ ಇನ್ನಿತ ರರು ಉಪಸ್ಥಿತರಿದ್ದರು.
ಫೋಟೋ -ಸಿಎಂ

Translate »