ಪಾದಯಾತ್ರೆ ಮೂಲಕ ರಾಮದಾಸ್ ಮತಯಾಚನೆ
ಮೈಸೂರು

ಪಾದಯಾತ್ರೆ ಮೂಲಕ ರಾಮದಾಸ್ ಮತಯಾಚನೆ

April 24, 2018

ಮೈಸೂರು: ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ.ರಾಮ ದಾಸ್ ಅವರು ಸೋಮವಾರ ಆಲನಹಳ್ಳಿ ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಪಾದ ಯಾತ್ರೆ ನಡೆಸಿ, ಮತಯಾಚನೆ ಮಾಡಿದರು.

ಆಲನಹಳ್ಳಿಯಿಂದ ತಮ್ಮ ಬೆಂಬಲಿಗ ರೊಂದಿಗೆ ಪಾದಯಾತ್ರೆ ಆರಂಭಿಸಿದ ಎಸ್.ಎ. ರಾಮದಾಸ್, ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮನೆ ಬಾಗಿಲಿಗೆ ಬಂದ ರಾಮದಾಸ್ ಅವರನ್ನು ಉಪಚರಿಸುವುದರೊಂದಿಗೆ ತಮ್ಮ ತಮ್ಮ ಬಡಾವಣೆಯಲ್ಲಿ ರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಈ ವೇಳೆ ಮಾತನಾಡಿದ ಎಸ್.ಎ. ರಾಮದಾಸ್, ಆಲನಹಳ್ಳಿ ಬಡಾವಣೆಯ ಕೆಲವು ಭಾಗ ನಗರ ಪಾಲಿಕೆ ವ್ಯಾಪ್ತಿಗೂ, ಮತ್ತೆ ಕೆಲವು ಭಾಗ ಪಂಚಾಯ್ತಿ ವ್ಯಾಪ್ತಿಗೂ ಸೇರಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಬೀದಿ ದೀಪ, ರಸ್ತೆ, ಚರಂಡಿ ಸಮಸ್ಯೆ ಇರುವುದಾಗಿ ಇಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ. ಇದನ್ನು ಗಮನಿಸಿ ದರೆ ಈ ಹಿಂದೆ ಇದ್ದವರು ಅಭಿವೃದ್ಧಿ ಯನ್ನು ಕಡೆಗಣ ಸಿದ್ದಾರೆ ಎಂಬುದು ತಿಳಿ ಯುತ್ತದೆ. ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿ ಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಕುರುಬಾರಹಳ್ಳಿ ಸರ್ವೇ 4 ಹಾಗೂ ಆಲನಹಳ್ಳಿ ಸರ್ವೇ ನಂ.4ರ ಪ್ರದೇಶವನ್ನು ಬಿ-ಖರಾಬು ಎಂದು ನಮೂದಿಸುವ ಮೂಲಕ ಈ ಬಡಾವಣೆಗಳ ಜನರಿಗೆ ಆತಂಕ ಸೃಷ್ಟಿಸಿ ದ್ದವರ ವಿರುದ್ಧ ಸ್ಥಳೀಯ ಮತದಾರರು ಅಸಮಾಧಾನಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮಾಡಿದ ಅಭಿ ವೃದ್ಧಿ ಕಾರ್ಯವನ್ನು ಮನಗಂಡು ಈ ಬಾರಿ ನನಗೆ ಬೆಂಬಲ ನೀಡಲಿದ್ದಾರೆ. ಪ್ರತಿ ಮನೆಗೆ ತೆರಳಿದಾಗಲೂ ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡು ಉಪಚರಿಸಿ ಪ್ರೀತಿಯಿಂದ ಕಾಣುತ್ತಿದ್ದಾರೆ. ಅವರ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾಜಿ ಉಪಮೇಯರ್ ಮಹದೇವಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »