Tag: Kodagu Rains

ಎಂಎಲ್‍ಸಿ ಸುನೀಲ್ ಸುಬ್ರಮಣಿಯಿಂದ ಮಾಕುಟ್ಟ ರಸ್ತೆ ಪರಿಶೀಲನೆ
ಕೊಡಗು

ಎಂಎಲ್‍ಸಿ ಸುನೀಲ್ ಸುಬ್ರಮಣಿಯಿಂದ ಮಾಕುಟ್ಟ ರಸ್ತೆ ಪರಿಶೀಲನೆ

June 17, 2018

ವಿರಾಜಪೇಟೆ:  ಕೊಡಗು- ಕೇರಳ ಅಂತರಾಜ್ಯ ಹೆದ್ದಾರಿ ಬಾರಿ ಮಳೆಯಿಂದ ಮಾಕುಟ್ಟದ ರಸ್ತೆ ಉದ್ದಕ್ಕೂ ಬರೆ ಕುಸಿದು ನುರಾರೂ ಮರಗಳು ರಸ್ತೆಗೆ ಉರುಳಿ ವಾಹನ ಗಳ ಸಂಚಾರಕ್ಕೆ ಅಡಚಣೆ ಹಾಗೂ ಅಪಾರ ನಷ್ಟ ಸಂಭವಿಸಿರುವ ಹಿನ್ನಲೆ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಕೇರಳದ ಇರಿಟಿಯ ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತು ಸದಸ್ಯರು ಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕಳೆದ 55…

ದಕ್ಷಿಣ ಕೊಡಗಿನ ಹಲವೆಡೆ  ಸಾರಿಗೆ ಬಸ್ ಸಂಚಾರ ಸ್ಥಗಿತ
ಮೈಸೂರು

ದಕ್ಷಿಣ ಕೊಡಗಿನ ಹಲವೆಡೆ  ಸಾರಿಗೆ ಬಸ್ ಸಂಚಾರ ಸ್ಥಗಿತ

June 16, 2018

ಮೈಸೂರು/ತಿತಿಮತಿ: ಒಂದು ವಾರದಿಂದ ಸುರಿ ಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆ ಹಾಗೂ ಸೇತುವೆಗಳು ಕೊಚ್ಚಿ ಹೋಗಿ ರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ದಕ್ಷಿಣ ಕೊಡಗಿನ ವಿವಿಧೆಡೆಗೆ ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ದಿಂದ ಪ್ರತಿದಿನ ವಿರಾಜಪೇಟೆ, ಗೋಣಿಕೊಪ್ಪ, ಬಾಳೆಲೆ, ಪೊನ್ನಂಪೇಟೆ, ಕುಟ್ಟ ಸೇರಿದಂತೆ ದಕ್ಷಿಣ ಕೊಡಗಿನ ವಿವಿಧೆಡೆಗೆ ಸುಮಾರು 50ರಿಂದ 60 ಬಸ್‍ಗಳು ಸಂಚರಿಸುತ್ತಿದ್ದವು. ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ತಿತಿಮತಿ, ಕುಟ್ಟ, ಗೋಣಿಕೊಪ್ಪ ಸೇರಿದಂತೆ ವಿವಿಧೆಡೆ ಗುಡ್ಡ ಕುಸಿದಿದ್ದು, ಹಲವೆಡೆ…

ತಿತಿಮತಿಯಲ್ಲಿ ಸೇತುವೆ ಕುಸಿತ : ಮೈಸೂರು-ಗೋಣಿಕೊಪ್ಪ ಹೆದ್ದಾರಿ ಬಂದ್
ಕೊಡಗು

ತಿತಿಮತಿಯಲ್ಲಿ ಸೇತುವೆ ಕುಸಿತ : ಮೈಸೂರು-ಗೋಣಿಕೊಪ್ಪ ಹೆದ್ದಾರಿ ಬಂದ್

June 15, 2018

ಗೋಣಿಕೊಪ್ಪಲು: ತಿತಿಮತಿ ಯಲ್ಲಿ ಸೇತುವೆ ಕುಸಿತದಿಂದ ಗೋಣಿಕೊಪ್ಪ – ಮೈಸೂರು ಹೆದ್ದಾರಿ ಸಂಪರ್ಕ ಕಡಿತ ಗೊಂಡು, ಬದಲಿ ಮಾರ್ಗವಾಗಿ ವಾಹ ನಗಳು ಸಂಚರಿಸುವಂತಾಗಿದೆ. ಗುರುವಾರ ಮಧ್ಯಾಹ್ನ ವೇಳೆಗೆ ಘಟನೆ ಸಂಭವಿಸಿದೆ. ಈ ಮಾರ್ಗವಾಗಿ ಸಂಚರಿ ಸಬೇಕಾದ ವಾಹನಗಳು ಗೋಣಿಕೊಪ್ಪ, ಪಾಲಿಬೆಟ್ಟ, ಘಟ್ಟದಳ್ಳ, ಮಾಲ್ದಾರೆ, ಪಿರಿಯಾ ಪಟ್ಟಣ ಮಾರ್ಗವಾಗಿ ಸಂಚರಿಸುತ್ತಿವೆ. ಮತ್ತೊಂದು ಮಾರ್ಗವಾಗಿ ಗೋಣಿಕೊಪ್ಪ, ಮಾಯಮುಡಿ, ಬಾಳೆಲೆ, ಕಾರ್ಮಾಡು, ಮೂರ್ಕಲ್, ನಾಗರಹೊಳೆ ಮಾರ್ಗ ವಾಗಿ ಹುಣಸೂರಿಗೆ ಸಂಚರಿಸುವಂತಾಗಿದೆ. ತಿತಿಮತಿ ಮುಖ್ಯ ರಸ್ತೆಯ ಬಾಳು ಮಾನಿ ತೋಡಿನಿಂದ ಬರುವ ಹೊಳೆಗೆ…

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಮತ್ತೇ ತ್ರಿವೇಣಿ ಸಂಗಮ ಜಲಾವೃತ
ಕೊಡಗು

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಮತ್ತೇ ತ್ರಿವೇಣಿ ಸಂಗಮ ಜಲಾವೃತ

June 15, 2018

ಮಡಿಕೇರಿ:  ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯ ಆರ್ಭಟ ಮುಂದುವರಿದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಗುರುವಾರ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿತು. ಭಾಗಮಂಡಲ-ಅಯ್ಯಂಗೇರಿ ರಸ್ತೆ ಮೇಲೆ 3 ಅಡಿ ನೀರು ಹರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಕೇಶ ಮುಂಡನ ಪ್ರದೇಶ ಕೂಡ ನೀರಿನಿಂದ ಆವೃತವಾಗಿದ್ದು, ಸಂಪೂರ್ಣ ಪ್ರದೇಶ ದ್ವೀಪದಂತಾಗಿದೆ.ಜೂನ್ 2ನೇ ವಾರದಲ್ಲಿ ಭಾಗಮಂಡಲ ತ್ರಿವೇಣಿ ಸಂಗಮ 2ನೇ ಬಾರಿಗೆ ಜಲಾವೃತ ವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ವಾಹನ ಸಂಚಾರ ಸಂಪೂರ್ಣ ಬಂದ್ ಆದ ಹಿನ್ನಲೆಯಲ್ಲಿ…

ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು
ಕೊಡಗು

ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು

June 14, 2018

30ಕ್ಕೂ ಹೆಚ್ಚು ಕಡೆ ಬರೆ ಕುಸಿತ ಕೇರಳಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಬರೆ ಕುಸಿತಕ್ಕೆ ಕೇರಳ ಕ್ಲೀನರ್ ಬಲಿ ಜಿಲ್ಲಾಡಳಿತದಿಂದ ಪರಿಶೀಲನೆ; ಪರಿಹಾರ ಕಾರ್ಯ ಆರಂಭ ಮಡಿಕೇರಿ: ಕಳೆದ ಒಂದು ವಾರಗಳಿಂದ ಸುರಿದ ಮಳೆಗೆ ದಕ್ಷಿಣ ಕೊಡಗು ಸಂಪೂರ್ಣ ತತ್ತರಿಸಿ ಹೋಗಿದೆ. ಮಾಕುಟ್ಟ ವಿರಾಜಪೇಟೆ ಮೂಲಕ ಕೇರಳ ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿ ಸಂಚಾರ ದುಸ್ತರ ಗೊಂಡಿದೆ.ಇದರಿಂದಾಗಿ ವಾಹನ ಮತ್ತು ಪ್ರಯಣಿಕರಿಗೆ ಸಮಸ್ಯೆಯಾಗಿ ಪರಿಣಮಿ ಸಿದೆ. ಮಂಗಳವಾರ ರಾತ್ರಿ ಸುರಿದ ಬಾರಿ…

ಕೆಸರಲ್ಲಿ ಹೂತುಕೊಂಡ ಲಾರಿ-ಬಸ್
ಕೊಡಗು

ಕೆಸರಲ್ಲಿ ಹೂತುಕೊಂಡ ಲಾರಿ-ಬಸ್

June 14, 2018

ಲಾರಿ ಹಾಗೂ ಬಸ್ ಮುಖಾಮುಖಿಯಾದ ಸಂದರ್ಭ ಏಕಕಾಲದಲ್ಲಿ ರಸ್ತೆಗೆ ಅಡ್ಡಲಾಗಿ ಟಯರ್‍ಗಳು ಕೆಸರಿನಲ್ಲಿ ಸಿಲುಕಿದ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ವಿರಾಜಪೇಟೆ ತಾಲೂಕಿನ ಬೇಗೂರು ಗ್ರಾಮದ ಬಳಿ ಮಂಗಳವಾರ ರಾತ್ರಿ ಸಂಭವಿಸಿದ್ದು, ಬುಧವಾರ ಬೆಳಿಗ್ಗೆವರೆವಿಗೂ ವಾಹನ ಸಂಚಾರ ಸ್ಥಗತಿಗೊಂಡಿತ್ತು.

ಕೊಡಗಲ್ಲಿ ಮಳೆರಾಯ ಬಿಡುವು ನೀಡಿದರೂ ಮುಂದುವರೆದ ಹಾನಿ ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಚಾರಕ್ಕೆ ಮುಕ್ತ
ಕೊಡಗು

ಕೊಡಗಲ್ಲಿ ಮಳೆರಾಯ ಬಿಡುವು ನೀಡಿದರೂ ಮುಂದುವರೆದ ಹಾನಿ ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಚಾರಕ್ಕೆ ಮುಕ್ತ

June 13, 2018

ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದರೂ ಹಾನಿ ಯಂತೂ ಮುಂದುವರೆದಿದೆ. ಸೋಮ ವಾರಪೇಟೆ ಮತ್ತು ವಿರಾಜಪೇಟೆ ತಾಲೂ ಕಿನಲ್ಲಿ ಉತ್ತಮ ಮಳೆ ಕಂಡು ಬಂದಿದೆ. ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ, ಬಾಳೆಲೆ ಮತ್ತು ಮಡಿಕೇರಿ ತಾಲೂಕಿನ ನಾಪ್ಲೋಕು, ಕಕ್ಕಬ್ಬೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಸೀಮಿತವಾಗಿ ಜೂ.12 ರಂದು ರಜೆ ಘೋಷಿಸಲಾಗಿತ್ತು. ಭಾಗಮಂಡಲ, ಚೆಟ್ಟಿಮಾನಿ, ಕೋರಂಗಾಲ ವ್ಯಾಪ್ತಿಯಲ್ಲಿ ಮಳೆಯ ರಭಸ ಕಡಿ ಮೆಯಾದ ಹಿನ್ನಲೆಯಲ್ಲಿ ತ್ರಿವೇಣಿ ಸಂಗಮ ದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಅದ ರೊಂದಿಗೆ ಭಾಗಮಂಡಲ-ಅಯ್ಯಂಗೇರಿ…

ಜಲಮಯ… ಕೊಡಗೆಲ್ಲಾ ಜಲಮಯಾ…!
ಕೊಡಗು

ಜಲಮಯ… ಕೊಡಗೆಲ್ಲಾ ಜಲಮಯಾ…!

June 12, 2018

ನಾಪೋಕ್ಲು : ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಕಾವೇರಿ ನದಿ ಹರಿಯುತ್ತಿರುವ ಚೆರಿಯ ಪರಂಬು, ಕೊಟ್ಟಮುಡಿ ಹಾಗೂ ಬೊಳಿ ಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾ ಗಿದ್ದು, ರಸ್ತೆಯ ಮೇಲೆ ಉಕ್ಕಿ ಹರಿಯು ತ್ತಿದೆ. ಚೆರಿಯಪರಂಬು, ನಾಪೋಕ್ಲು -ಮೂರ್ನಾಡು ರಸ್ತೆಯ ಬೊಳಿಬಾಣೆಯ ಲ್ಲಿಯೂ ಕಾವೇರಿ ನದಿ ಪ್ರವಾಹ ಜೋರಾ ಗಿದ್ದು, ವಾಹನಗಳು ನೀರಿನಲ್ಲಿಯೇ ಸಾಗು ತ್ತಿವೆ. ಇದೇ ರೀತಿ ಮಳೆ ಮುಂದುವರಿ ದರೆ. ನಾಪೋಕ್ಲು -ಮೂರ್ನಾಡು ರಸ್ತೆಯ ಸಂಪರ್ಕ…

ಮಳೆಯ ಅಬ್ಬರಕ್ಕೆ ಅಪಾರ ಹಾನಿ
ಕೊಡಗು

ಮಳೆಯ ಅಬ್ಬರಕ್ಕೆ ಅಪಾರ ಹಾನಿ

June 12, 2018

ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ 24ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಹಾನಿ ಮುಂದುವರಿದಿದೆ. ಮರಗಳು ವಿದ್ಯುತ್ ಕಂಬಗಳು ಮುರಿದು ಬೀಳುತ್ತಿರು ವುದರಿಂದ ಸೆಸ್ಕ್ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಅತಿಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯಲ್ಲಿ, ದುರಸ್ತಿ ಕೆಲಸ ಭರದಿಂದ ಸಾಗುತ್ತಿದ್ದರೂ, ಮಳೆ ಅರ್ಭಟ ದಿಂದ ಕೆಲಸಕ್ಕೆ ಹಿನ್ನಡೆಯಾಗಿದೆ. ಪುಷ್ಪಗಿರಿ ತಪ್ಪಲು ಗ್ರಾಮ ಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಅಲ್ಲಿ ದುರಸ್ತಿ ಕೆಲಸಕ್ಕೆ ತೆರಳಲು ಸೆಸ್ಕ್ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಗೌಡಳ್ಳಿ ಗ್ರಾಮ…

ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ
ಕೊಡಗು

ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ

June 12, 2018

ಸೋಮವಾರಪೇಟೆ: ಇಲ್ಲಿನ ಮಾರುಕಟ್ಟೆ ಪ್ರಾಂಗಣದಲ್ಲಿ ಮಳೆ ನೀರು ಸಂಗ್ರಹವಾದ ಕಾರಣ ಸಂತೆ ದಿನವಾದ ಸೋಮವಾರ ವ್ಯಾಪಾರಸ್ಥರು, ಗ್ರಾಹಕರು ಸಮಸ್ಯೆ ಎದುರಿಸಿದರು. ಮೇಲ್ಚಾವಣಿ ಯಿಂದ ನೀರು ಸೋರುತ್ತಿರು ವುದರಿಂದ ಕೆಲ ವ್ಯಾಪಾರಸ್ಥರು ಪ್ಲಾಸ್ಟಿಕ್ ಹೊದಿಕೆಗಳನ್ನು ಕಟ್ಟಿಕೊಂಡು ದಿನಸಿ ಸಾಮಾಗ್ರಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದರು. ತರಕಾರಿ ಮಾರುವವರು ನೀರಿನಲ್ಲಿ ಗುಡ್ಡೆ ಹಾಕಿ ಮಾರಾಟ ಮಾಡಿದರು. ಪ್ರಾಂಗಣ ಪೂರ್ತಿ ಮಳೆ ನೀರಿನಿಂದ ಆವೃತವಾದಂತೆ, ಮಹಿಳೆಯರು, ಮಕ್ಕಳು ಮಾರುಕಟ್ಟೆ ಪ್ರವೇಶಿಸಲು ಭಯ ಪಟ್ಟರು. ಗ್ರಾಮೀಣ ಭಾಗದಿಂದ ಬಂದ ರೈತರು ನೀರಿ ನೊಳಗೆ ನಡೆದಾಡಿ,…

1 2 3 4 5
Translate »