ತಿತಿಮತಿಯಲ್ಲಿ ಸೇತುವೆ ಕುಸಿತ : ಮೈಸೂರು-ಗೋಣಿಕೊಪ್ಪ ಹೆದ್ದಾರಿ ಬಂದ್
ಕೊಡಗು

ತಿತಿಮತಿಯಲ್ಲಿ ಸೇತುವೆ ಕುಸಿತ : ಮೈಸೂರು-ಗೋಣಿಕೊಪ್ಪ ಹೆದ್ದಾರಿ ಬಂದ್

June 15, 2018

ಗೋಣಿಕೊಪ್ಪಲು: ತಿತಿಮತಿ ಯಲ್ಲಿ ಸೇತುವೆ ಕುಸಿತದಿಂದ ಗೋಣಿಕೊಪ್ಪ – ಮೈಸೂರು ಹೆದ್ದಾರಿ ಸಂಪರ್ಕ ಕಡಿತ ಗೊಂಡು, ಬದಲಿ ಮಾರ್ಗವಾಗಿ ವಾಹ ನಗಳು ಸಂಚರಿಸುವಂತಾಗಿದೆ.

ಗುರುವಾರ ಮಧ್ಯಾಹ್ನ ವೇಳೆಗೆ ಘಟನೆ ಸಂಭವಿಸಿದೆ. ಈ ಮಾರ್ಗವಾಗಿ ಸಂಚರಿ ಸಬೇಕಾದ ವಾಹನಗಳು ಗೋಣಿಕೊಪ್ಪ, ಪಾಲಿಬೆಟ್ಟ, ಘಟ್ಟದಳ್ಳ, ಮಾಲ್ದಾರೆ, ಪಿರಿಯಾ ಪಟ್ಟಣ ಮಾರ್ಗವಾಗಿ ಸಂಚರಿಸುತ್ತಿವೆ. ಮತ್ತೊಂದು ಮಾರ್ಗವಾಗಿ ಗೋಣಿಕೊಪ್ಪ, ಮಾಯಮುಡಿ, ಬಾಳೆಲೆ, ಕಾರ್ಮಾಡು, ಮೂರ್ಕಲ್, ನಾಗರಹೊಳೆ ಮಾರ್ಗ ವಾಗಿ ಹುಣಸೂರಿಗೆ ಸಂಚರಿಸುವಂತಾಗಿದೆ.

ತಿತಿಮತಿ ಮುಖ್ಯ ರಸ್ತೆಯ ಬಾಳು ಮಾನಿ ತೋಡಿನಿಂದ ಬರುವ ಹೊಳೆಗೆ ಲೋಕೋಪಯೋಗಿ ಇಲಾಖೆ ಮೂಲಕ ನೂತನ ಸೇತುವೆ ಕಾಮಗಾರಿ ನಡೆಯು ತ್ತಿದೆ. ಇದರಿಂದಾಗಿ ಸೇತುವೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾ ಗಿತ್ತು. ಬುಧವಾರ ಸುರಿದ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾ ಗಿತ್ತು. ನೀರು ಸರಾಗವಾಗಿ ಹರಿಯದೆ ತಾತ್ಕಾಲಿಕ ಸೇತುವೆಯನ್ನು ಕೊಚ್ಚಿಕೊಂಡು ಸಾಗಿದೆ. ಇದರಿಂದಾಗಿ ವಾಹನಗಳ ಸಂಚ ರಿಸಲು ಆಗುತ್ತಿಲ್ಲ. ಲೋಕೋಪಯೋಗಿ ಇಲಾಖೆ, ಸ್ಥಳೀಯ ಪೊಲೀಸರು ವಾಹನ ಗಳು ಓಡಾಡದಂತೆ ಬ್ಯಾರಿಕೇಡ್ ಹಾಕುವ ಮೂಲಕ ಕ್ರಮಕೈಗೊಂಡಿದ್ದಾರೆ.

ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾ ರಿಯಾಗಿರುವುದರಿಂದ ದಿನಂಪ್ರತಿ ಸಾವಿ ರಾರು ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿದೆ. ಮಳೆಯೊಂದಿಗೆ ನೀರಿನ ಪ್ರಮಾಣ ಕಡಿಮೆಯಾದರೆ ಕಲ್ಲು, ಮಣ್ಣು ಹಾಕಿ ಮತ್ತೆ ರಸ್ತೆಯಲ್ಲಿ ಸಂಚರಿಸಲು ಅವಕಾಶ ಸಿಗಲಿದೆ. ಮಳೆಗಾಲಕ್ಕೂ ಮುನ್ನ ಕುಸಿಯುವ ಆತಂಕವನ್ನು ತಿತಿಮತಿ ಗ್ರಾಮ ಪಂಚಾಯ್ತಿ ಸದಸ್ಯ ಎನ್.ಎನ್. ಅನೂಪ್ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ನಾಲ್ಕೇರಿ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದ್ದು, ಹರಿಹರ, ನಾಲ್ಕೇ ರಿಯಲ್ಲಿ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಕುರ್ಚಿ ಗ್ರಾಮದಲ್ಲಿ 7 ಇಂಚು ಮಳೆ ಸುರಿದಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದು, 3 ದಿನಗಳಿಂದ ವಿದ್ಯುತ್ ಸಂಪರ್ಕ ಕಳೆದುಕೊಂಡಿದೆ. ಕುಟ್ಟ- ಬಾಡಗ ಗ್ರಾಮದಲ್ಲಿ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ರಾತ್ರಿಯಿಂದ ಕಾಣಿಸಿ ಕೊಂಡಿದೆ. ಜನರು ಮನೆಯಿಂದ ಹೊರ ಬಾರಲಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ 7 ದಿನಗಳಿಂದ ವಿದ್ಯುತ್ ಇಲ್ಲದೆ ತೊಂದರೆಯಲ್ಲಿದೆ. ಬಿರುನಾಣಿಗೆ ಕಳೆದ 24 ಗಂಟೆಯಿಂದ 3.45 ಇಂಚು ಮಳೆ ಸುರಿದಿದೆ. ವಿದ್ಯುತ್ ಕಡಿತಗೊಂಡಿದೆ.

Translate »