ದಕ್ಷಿಣ ಕೊಡಗಿನ ಹಲವೆಡೆ  ಸಾರಿಗೆ ಬಸ್ ಸಂಚಾರ ಸ್ಥಗಿತ
ಮೈಸೂರು

ದಕ್ಷಿಣ ಕೊಡಗಿನ ಹಲವೆಡೆ  ಸಾರಿಗೆ ಬಸ್ ಸಂಚಾರ ಸ್ಥಗಿತ

June 16, 2018

ಮೈಸೂರು/ತಿತಿಮತಿ: ಒಂದು ವಾರದಿಂದ ಸುರಿ ಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆ ಹಾಗೂ ಸೇತುವೆಗಳು ಕೊಚ್ಚಿ ಹೋಗಿ ರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ದಕ್ಷಿಣ ಕೊಡಗಿನ ವಿವಿಧೆಡೆಗೆ ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ದಿಂದ ಪ್ರತಿದಿನ ವಿರಾಜಪೇಟೆ, ಗೋಣಿಕೊಪ್ಪ, ಬಾಳೆಲೆ, ಪೊನ್ನಂಪೇಟೆ, ಕುಟ್ಟ ಸೇರಿದಂತೆ ದಕ್ಷಿಣ ಕೊಡಗಿನ ವಿವಿಧೆಡೆಗೆ ಸುಮಾರು 50ರಿಂದ 60 ಬಸ್‍ಗಳು ಸಂಚರಿಸುತ್ತಿದ್ದವು. ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ತಿತಿಮತಿ, ಕುಟ್ಟ, ಗೋಣಿಕೊಪ್ಪ ಸೇರಿದಂತೆ ವಿವಿಧೆಡೆ ಗುಡ್ಡ ಕುಸಿದಿದ್ದು, ಹಲವೆಡೆ ಭಾರೀ ಗಾತ್ರದ ಮರಗಳು, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿವೆ. ಅಲ್ಲದೆ ತಿತಿಮತಿಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ವಾಹನಗಳಿಗೆ ವ್ಯವಸ್ಥೆ ಮಾಡಿದ್ದ ಪರ್ಯಾಯ ರಸ್ತೆಯೂ ಕೊಚ್ಚಿ ಹೋಗಿರುವುದರಿಂದ ಸಾರಿಗೆ ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರ ವನ್ನು ಇಲ್ಲಿ ನಿರ್ಬಂಧಿಸಲಾಗಿದೆ.

ಮೈಸೂರು-ಗೋಣಿಕೊಪ್ಪ ರಸ್ತೆಯಲ್ಲೂ ಭಾರೀ ಹಾನಿಯಾಗಿರುವುದರಿಂದ ಬೆಂಗ ಳೂರು ಹಾಗೂ ಮೈಸೂರಿನಿಂದ ಗೋಣಿಕೊಪ್ಪ ಸೇರಿದಂತೆ ವಿವಿಧೆಡೆ ತೆರಳುತ್ತಿದ್ದ ಬಸ್‍ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಸಾರಿಗೆ ಸಂಸ್ಥೆ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿ ಕಾರಿ ಹೆಚ್.ವಾಸು ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ತಿತಿಮತಿ ಬಳಿ ರಸ್ತೆ ಹಾಳಾಗಿರುವುದರಿಂದ ಬಸ್ ಸಂಚಾರ ರದ್ದುಗೊಳಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದರು. ವಿರಾಜ ಪೇಟೆಯ ಸಾರಿಗೆ ಅಧಿಕಾರಿಯೊಬ್ಬರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು, ಬೆಂಗಳೂರಿನಿಂದ ವಿರಾಜ ಪೇಟೆಗೆ ಪ್ರತಿದಿನ 60ಕ್ಕೂ ಹೆಚ್ಚು ಬಸ್‍ಗಳು ಸಂಚರಿಸುತ್ತಿದ್ದವು. ಆದರೆ ಭಾರೀ ಮಳೆ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಮರ, ವಿದ್ಯುತ್ ಕಂಬ ಬಿದ್ದಿರುವುದರಿಂದ ಸಂಚಾರಕ್ಕೆ ಅಡ ಚಣೆಯಾಗಿದೆ. ಕೆಲ ಬಸ್ ಸಂಚಾರ ಸ್ಥಗಿತ ವಾಗಿದ್ದರೆ, ಮತ್ತೆ ಕೆಲವು ಬದಲಿ ಮಾರ್ಗ ದಲ್ಲಿ ಸಂಚರಿಸುವ ಕ್ರಮ ಕೈಗೊಳ್ಳಲಾಗಿದೆ. ಣಿಕೊಪ್ಪ, ಪಾಲಿಬೆಟ್ಟ, ಘಟ್ಟಹಳ್ಳ, ಮಲ್ದಾರೆ, ಪಿರಿಯಾಪಟ್ಟಣ, ಹುಣಸೂರು ಮಾರ್ಗ ಹಾಗೂ ಗೋಣಿಕೊಪ್ಪ, ಮಾಯಾ ಮುಡಿ, ಬಾಳೆಲೆ, ಕಾರ್ಮಾಡ್, ಮೂರ್ಕಲ್ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಬಸ್‍ಗಳು ನಿರ್ಧಿಷ್ಟ ಸ್ಥಳ ತಲುಪಲು ನಿಗಧಿತ ಸಮಯಕ್ಕಿಂತ ಒಂದೂವರೆ ಗಂಟೆ ಹೆಚ್ಚುವರಿ ಅವಧಿ ತೆಗೆದುಕೊಳ್ಳುತ್ತವೆ ಎಂದು ವಿವರಿಸಿದರು.

ಇನ್ನು ಮೂರ್ನಾಲು ದಿನ: ಹಾನಿಯಾಗಿರುವ ರಸ್ತೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆಯಾದರೂ ಇಂದು ಸಹ ಮಳೆ ಬಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ತೊಡಕಾಗಿದೆ. ಸಾರಿಗೆ ಇಲಾಖೆ ದಕ್ಷಿಣ ಕೊಡಗು ಸಾಮಾನ್ಯ ಸ್ಥಿತಿಗೆ ಬರುವವರೆಗೂ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿರುವುದರಿಂದ, ಸ್ಥಳೀಯರು ಪರದಾಡುವಂತಾಗಿದೆ.

Translate »