ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ
ಕೊಡಗು

ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ

June 12, 2018

ಸೋಮವಾರಪೇಟೆ: ಇಲ್ಲಿನ ಮಾರುಕಟ್ಟೆ ಪ್ರಾಂಗಣದಲ್ಲಿ ಮಳೆ ನೀರು ಸಂಗ್ರಹವಾದ ಕಾರಣ ಸಂತೆ ದಿನವಾದ ಸೋಮವಾರ ವ್ಯಾಪಾರಸ್ಥರು, ಗ್ರಾಹಕರು ಸಮಸ್ಯೆ ಎದುರಿಸಿದರು. ಮೇಲ್ಚಾವಣಿ ಯಿಂದ ನೀರು ಸೋರುತ್ತಿರು ವುದರಿಂದ ಕೆಲ ವ್ಯಾಪಾರಸ್ಥರು ಪ್ಲಾಸ್ಟಿಕ್ ಹೊದಿಕೆಗಳನ್ನು ಕಟ್ಟಿಕೊಂಡು ದಿನಸಿ ಸಾಮಾಗ್ರಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದರು. ತರಕಾರಿ ಮಾರುವವರು ನೀರಿನಲ್ಲಿ ಗುಡ್ಡೆ ಹಾಕಿ ಮಾರಾಟ ಮಾಡಿದರು.

ಪ್ರಾಂಗಣ ಪೂರ್ತಿ ಮಳೆ ನೀರಿನಿಂದ ಆವೃತವಾದಂತೆ, ಮಹಿಳೆಯರು, ಮಕ್ಕಳು ಮಾರುಕಟ್ಟೆ ಪ್ರವೇಶಿಸಲು ಭಯ ಪಟ್ಟರು. ಗ್ರಾಮೀಣ ಭಾಗದಿಂದ ಬಂದ ರೈತರು ನೀರಿ ನೊಳಗೆ ನಡೆದಾಡಿ, ವಾರಕ್ಕೆ ಬೇಕಾದ ಸಾಮಾನುಗಳನ್ನು ಖರೀದಿ ಮಾಡಿದರು. ವ್ಯಾಪಾರಸ್ಥರು ಪಟ್ಟಣ ಪಂಚಾ ಯಿತಿ ವಿರುದ್ಧ ಹಿಡಿ ಶಾಪ ಹಾಕಿದರು. ಜಿಲ್ಲೆಯ ಮಟ್ಟಿಗೆ ಅತಿ ದೊಡ್ಡ ಸಂತೆ ಎಂದೆ ಕರೆಸಿಕೊಳ್ಳುವ ಪಟ್ಟಣದ ಸೋಮವಾರ ಸಂತೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ರಾಜ್ಯ ಸರ್ಕಾರದ ನಗರೋತ್ಥಾನ ಯೋಜನೆ ಯಲ್ಲಿ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲಾಯಿತು.

ಆದರೆ ಅವೈಜ್ಞಾನಿಕ ಕಾಮಗಾರಿಯಿಂದ, ಉದ್ಘಾಟನೆ ಗೊಂಡ ಮೊದಲ ವರ್ಷದಲ್ಲೇ ಸೋರಲು ಪ್ರಾರಂಭಿಸಿತು. ನಂತರ ಪ್ರತಿವರ್ಷ ಮಳೆಗಾಲದಲ್ಲಿ ದುರಸ್ತಿ ನೆಪದಲ್ಲಿ ಒಂದಷ್ಟು ಲಕ್ಷ ರೂ. ಹಣವನ್ನು ವ್ಯಯ ಮಾಡಲಾಗಿದೆ. ಆದರೆ ಹೈಟೆಕ್ ಮಾರುಕಟ್ಟೆ ಸೋರುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಮಳೆಗಾಲವಿಡೀ ಸೋರುವ ಹೈಟೆಕ್ ಮಾರುಕಟ್ಟೆಯೊಳಗೆ ವ್ಯಾಪಾರ ಮಾಡಬೇಕಾಗಿದೆ. ಕೂಡಲೇ ಪಂಚಾಯಿತಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »