ಬೊಳ್ಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
ಕೊಡಗು

ಬೊಳ್ಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

June 12, 2018

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಎಚ್.ಡಿ.ಕೋಟೆ ನಿವಾಸಿ ಚನ್ನಪ್ಪ ಹತ್ಯೆ ಆಗಿರುವ ವ್ಯಕ್ತಿ. ಚನ್ನಪ್ಪನ ಸ್ನೇಹಿತ ನಾಗರಾಜು ಎಂಬಾತನೆ ಹತ್ಯೆ ಮಾಡಿರುವ ಆರೋಪಿಯಾಗಿದ್ದು, ಇದೀಗ ತಲೆಮರೆಸಿ ಕೊಂಡಿದ್ದಾನೆ. ಬೊಳ್ಳೂರಿನ ಪರ್ಪಲ್ ಫಾರ್ಮ್ ರೆಸಾರ್ಟ್‍ನಲ್ಲಿ ಚನ್ನಪ್ಪ ಹಾಗೂ ನಾಗರಾಜು ಎಂಬವರು ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ವಾಸ್ತವ್ಯಕ್ಕಾಗಿ ರೇಸಾರ್ಟ್ ಮುಂಭಾಗದ ಹಳೇ ಡೈರಿ ಜಾಗದಲ್ಲಿ ರೂಂ ನೀಡಲಾಗಿತ್ತು. ಈ ರೂಂನಲ್ಲಿ ಇಬ್ಬರು ಒಟ್ಟಿಗೆ ಇದ್ದರು. ಭಾನುವಾರ ರಾತ್ರಿ ಚನ್ನಪ್ಪ ಮಲಗಿದ್ದ ಸಂದರ್ಭ ನಾಗರಾಜು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹತ್ಯೆ ಮಾಡಿದ ನಾಗರಾಜು ಪರಾರಿಯಾಗಿದ್ದಾನೆ. ಇಂದು ಬೆಳಿಗ್ಗೆ ರೆಸಾರ್ಟ್‍ಗೆ ಕೆಲಸಕ್ಕೆ ಇಬ್ಬರು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಇತರೆ ಹೋಟೆಲ್ ಸಿಬ್ಬಂದಿಗಳು ಹೋಗಿ ರೂಂ ಪರಿಶೀಲಿಸಿದಾಗ ಚನ್ನಪ್ಪ ಹತ್ಯೆ ಆಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಠಾಣಾಧಿಕಾರಿ ನವೀನ್‍ಗೌಡ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆ ಆರೋಪಿ ನಾಗರಾಜು ಬಂಧನಕ್ಕೆ ಪೊಲೀಸ್ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಕುರಿತು ಪ್ರಕರಣ ದಾಖ ಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »