ಜಲಮಯ… ಕೊಡಗೆಲ್ಲಾ ಜಲಮಯಾ…!
ಕೊಡಗು

ಜಲಮಯ… ಕೊಡಗೆಲ್ಲಾ ಜಲಮಯಾ…!

June 12, 2018

ನಾಪೋಕ್ಲು : ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಕಾವೇರಿ ನದಿ ಹರಿಯುತ್ತಿರುವ ಚೆರಿಯ ಪರಂಬು, ಕೊಟ್ಟಮುಡಿ ಹಾಗೂ ಬೊಳಿ ಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾ ಗಿದ್ದು, ರಸ್ತೆಯ ಮೇಲೆ ಉಕ್ಕಿ ಹರಿಯು ತ್ತಿದೆ. ಚೆರಿಯಪರಂಬು, ನಾಪೋಕ್ಲು -ಮೂರ್ನಾಡು ರಸ್ತೆಯ ಬೊಳಿಬಾಣೆಯ ಲ್ಲಿಯೂ ಕಾವೇರಿ ನದಿ ಪ್ರವಾಹ ಜೋರಾ ಗಿದ್ದು, ವಾಹನಗಳು ನೀರಿನಲ್ಲಿಯೇ ಸಾಗು ತ್ತಿವೆ. ಇದೇ ರೀತಿ ಮಳೆ ಮುಂದುವರಿ ದರೆ. ನಾಪೋಕ್ಲು -ಮೂರ್ನಾಡು ರಸ್ತೆಯ ಸಂಪರ್ಕ ಕಡಿತಗೊಳ್ಳುವ ಆತಂಕವಿದೆ.

ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯು ವಂತಾಗಿದೆ. ಇದಕ್ಕೆ ವಿದ್ಯುತ್ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ. ಇಲ್ಲಿನ ಬೇತು ಗ್ರಾಮದಲ್ಲಿ ದೊಡ್ಡ ಮರವೊಂದು ಮುರಿದುಬಿದ್ದಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಬೇಸಿಗೆಯಲ್ಲಿ ವಿದ್ಯುತ್ ತಂತಿಗಳ ಬಳಿಯಿರುವ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯ ಕೈಗೊಳ್ಳದೇ ಸಮಸ್ಯೆಯುಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೀರಿನಲ್ಲಿ ಮುಳುಗಿರುವ ಚೆರಿಯಪರಂಬು ರಸ್ತೆ.ಮಡಿಕೇರಿಯಲ್ಲಿ ಮೃಗಶಿರ ಪ್ರತಾಪ

ಮಡಿಕೇರಿ: ನಗರದಲ್ಲಿ ಮೃಗಶಿರ ಮಳೆಯ ಪ್ರತಾಪ ಮುಂದುವರಿ ದಿದ್ದು, ಬೆಟ್ಟ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಮಂಗಳದೇವಿನಗರ, ಇಂದಿರಾನಗರ, ಚಾಮುಂಡೇಶ್ವರಿ ನಗರ, ನಿವಾಸಿಗಳು ಭಯದಿಂದಲೇ ಮಳೆಗಾಲ ಎದುರಿಸುವಂತಾಗಿದೆ.
ಈ ಪ್ರದೇಶಗಳು ಮಳೆಗಾಲದ ಸಂದರ್ಭ ಸೂಕ್ಷ್ಮ ಪ್ರದೇಶಗಳೆಂದೇ ಗುರುತಿಸಿಕೊಂಡಿದ್ದು, ಭಾರಿ ಗಾಳಿ ಮಳೆಗೆ ಹಲವು ಮನೆಗಳ ಹೆಂಚು, ಶೀಟ್‍ಗಳು ಹಾರಿಹೋಗಿವೆ. ಕೆಲವು ಮನೆಗಳ ಗೋಡೆಗಳ ಪಕ್ಕ ಬರೆ ಕುಸಿದ ಘಟನೆಗಳು ನಡೆದಿದ್ದು, ಸಹಜವಾಗಿಯೇ ಅಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವು ಮನೆಗಳ ಗೋಡೆಗಳು ಮತ್ತು ಮೇಲ್ಛಾ ವಣಿ ಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಸಲಾ ಗಿದ್ದು, ಮಳೆಯಿಂದ ಮನೆಗಳನ್ನು ರಕ್ಷಿಸಿ ಕೊಳ್ಳುವುದೇ ಈ ಬಡಾವಣೆಗಳ ನಿವಾಸಿ ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಿಯಂತ್ರಣ ಕೊಠಡಿ: ಅತಿವೃಷ್ಟಿ ಸಂದರ್ಭ ದಲ್ಲಿ ತುರ್ತಾಗಿ ಸ್ಪಂದಿಸಲು ಹಾಗೂ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ತೆರೆಯಲಾಗಿದೆ.
ಡಿಸಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ಮಡಿಕೇರಿ ತಾಲೂಕು ಕಚೇರಿ- 08272-228396, ನಗರಸಭೆ-08272-220111, ಸೋ.ಪೇಟೆ ತಾಲೂಕು ಕಚೇರಿ- 08276-282045, ವಿ.ಪೇಟೆ ತಾಲೂಕು ಕಚೇರಿ- 08274-256328 ಈ ದೂ.ಸಂಖ್ಯೆ ಗಳಿಗೆ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕರೆ ಮಾಡಿ ದೂರು ದಾಖಲಿಸಿಕೊಳ್ಳಬಹುದು.

Translate »