ಮಡಿಕೇರಿ: ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವ್ಯವ ಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವ ಸಿದ್ಧತೆ ಸಂಬಂಧ ಬುಧವಾರ ನಡೆದ ಸಭೆ ಯಲ್ಲಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸುವುದು, ಕುಡಿಯುವ ನೀರು ವ್ಯವಸ್ಥೆ ಮಾಡು ವುದು, ಸೂಕ್ತ ಭದ್ರತೆ ಕಲ್ಪಿಸುವುದು ಮತ್ತಿ ತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳು ವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು….
ಸಂತ್ರಸ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಕಿ ಪಂದ್ಯಾವಳಿ
March 14, 2019ಮಡಿಕೇರಿ: ಮಹಾಮಳೆ ಹಾಗೂ ಭೂ ಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡಿ ರುವ ಕೊಡವ ಕುಟುಂಬಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಏಪ್ರಿಲ್ ಎರಡನೇ ವಾರ 16 ಕೊಡವ ಕುಟುಂಬ ಗಳ ಆಹ್ವಾನಿತ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ಕಕ್ಕ ಬ್ಬೆಯ ‘ದ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್’ನ ಪದಾಧಿಕಾರಿಗಳು ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಕ್ಲಬ್‍ನ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ ಹಾಗೂ ನಿರ್ದೇಶಕ ಅಂಜಪರ ವಂಡ ಕುಶಾಲಪ್ಪ ಅವರು, ಪ್ರಕೃತಿ ವಿಕೋಪ ಸಂತ್ರಸ್ತ ಕುಟುಂಬಗಳಿಗೆ ಹಲವು ರೀತಿಯ ಸೌಲಭ್ಯಗಳನ್ನು…
ಭತ್ತ ಖರೀದಿಯಲ್ಲಿ ವಿಳಂಬ: ಕಂಗಾಲಾದ ರೈತರು
March 14, 2019ಗುಡ್ಡೆಹೊಸೂರು: ಗುಡ್ಡೆಹೊ ಸೂರು ಸುತ್ತಮುತ್ತ ಮತ್ತು ಜಿಲ್ಲೆಯ ವಿವಿಧ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆದ ರೈತರು ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಡಿಸೆಂಬರ್ ತಿಂಗಳಿ ನಲ್ಲಿ ಬೆಂಬಲ ಬೆಲೆ ಘೋಷಣೆಯಾ ಯಿತು. ಆದರೆ ಕೃಷಿ ಮಾರುಕಟ್ಟೆ ಸಂಸ್ಥೆ (ಆರ್.ಎಂ.ಸಿ) ಭತ್ತ ಖರಿದಿಸಲು ವಿಳಂಬ ಮಾಡಿದರು. ರೈತರು ಕಛೇರಿ ಮುಂದೆ ಪ್ರತಿನಿತ್ಯ ಕಾದು ಕಾದು ಸುಸ್ತಾದರು. ಇದ ರಿಂದ ಬೇಸತ್ತ ಹಲವು ರೈತರು ಸ್ಥಳೀಯ ಅಕ್ಕಿ ಗಿರಣಿಗೆ ಕ್ವೀಂಟಾಲ್‍ಗೆ 1200ರಿಂದ 1300ಕ್ಕೆ ಮಾರಿದರೆ, ಅದೆಷ್ಟೋ…
ಮಾದರಿ ನೀತಿ ಸಂಹಿತೆ ಪಾಲಿಸಲು ಡಿಸಿ ಸೂಚನೆ
March 13, 2019ಮಡಿಕೇರಿ: ಲೋಕಸಭೆ ಚುನಾ ವಣೆ ಹಿನ್ನೆಲೆ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡ ರೊಂದಿಗೆ ಮಂಗಳವಾರ ನಡೆದ ಸಭೆ ಯಲ್ಲಿ ಅವರು ಮಾತನಾಡಿದರು. ಚುನಾ ವಣಾ ಆಯೋಗವು ಮಾದರಿ ನೀತಿ ಸಂಹಿತೆ ಪಾಲಿಸುವ ಸಂಬಂಧ ಹಲವು ನಿರ್ದೇ ಶನಗಳನ್ನು ನೀಡಿದೆ. ಅದನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ಸ್…
ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ
March 13, 2019ಮಡಿಕೇರಿ: ಪರೀಕ್ಷೆಗೆ ಹೆದರಿಕೊಂಡು ಶಾಲಾ ಬಾಲಕಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣೆಯ ಹೊಸ್ಕೇರಿಯಲ್ಲಿ ನಡೆದಿದೆ. ಹೊಸ್ಕೇರಿ ನಿವಾಸಿ ಚಂದ್ರಶೇಖರ್ ಎಂಬುವರ ಪುತ್ರಿ ಜಸ್ಮಿತಾ(14) ಎಂಬಾಕೆಯೇ ಮೃತ ವಿದ್ಯಾ ರ್ಥಿನಿ. ಮರಗೋಡು ಸರಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜಸ್ಮಿತಾ ಸೋಮವಾರ ಗಣಿತ ಪರೀಕ್ಷೆ ಬರೆದಿದ್ದಳು. ಪರೀಕ್ಷೆ ಮುಗಿಸಿ ಮನೆಗೆ ಬಂದ ಆಕೆ ಡೆತ್‍ನೋಟ್ ಬರೆದಿಟ್ಟು ಮನೆಯ ಹಿಂಬದಿಯಲ್ಲಿದ್ದ ಕೆರೆಗೆ ಹಾರಿ ಸಾವಿಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಬರೆದ ಡೆತ್‍ನೋಟ್‍ನಲ್ಲಿ…
ಜೆಡಿಎಸ್‍ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ
March 13, 2019ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ತಳಮಟ್ಟದಿಂದ ಜೆಡಿಎಸ್ ಪಕ್ಷ ವನ್ನು ಕಟ್ಟಿ ಬೆಳೆಸಿದ್ದು, ಪಕ್ಷಕ್ಕೆ ರಾಜೀ ನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ, ಜಿಲ್ಲಾ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಸ್ಪಷ್ಟ ಪಡಿಸಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರ ನೇಮಕ ಸಂಬಂಧ ಅಸಮಾಧಾನಗೊಂಡ ಜೀವಿಜಯ, ಸೋಮವಾರ ಪಕ್ಷಕ್ಕೆ ರಾಜಿನಾಮೆ ಸಲ್ಲಿ ಸುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಪಕ್ಷಕ್ಕೆ ರಾಜೀ ನಾಮೆ ಸಲ್ಲಿಸುವ ಪ್ರಮೇ ಯವೇ ಇಲ್ಲವೆಂದು ಹೇಳುವ ಮೂಲಕ “ಯೂ ಟರ್ನ್” ಹೊಡೆದಿದ್ದಾರೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ….
ಇತಿಹಾಸ ಬರೆಯುವುದಕ್ಕಿಂತ ಅಧ್ಯಯನಶೀಲರಾಗುವುದು ಅಗತ್ಯ
March 13, 2019ವಿರಾಜಪೇಟೆ: ಜಗತ್ತಿನ ಇತಿ ಹಾಸ ತಿಳಿದುಕೊಳ್ಳುವುದಕ್ಕಿಂತ ಮೊದಲು ತನ್ನ ಪರಿಸರದ ಇತಿಹಾಸದ ಅರಿವನ್ನು ಪಡೆದುಕೊಂಡು ನಂತರ ಇತಿಹಾಸ ಅಧ್ಯ ಯನ ಮಾಡುವುದರಿಂದ ನಮ್ಮಲ್ಲಿರುವ ತಪ್ಪು ಗ್ರಹಿಕೆಯನ್ನು ಸರಿಪಡಿಸಿಕೊಳ್ಳ ಬಹುದು ಎಂದು ಅರಮೇರಿ ಕಳಂಚೇರಿ ಮಠಾಧಿಶರಾದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ವಿರಾಜಪೇಟೆ ಸಮೀಪದ ಅರಮೇರಿಯ ಕಳಂಚೇರಿ ಮಠದ ಸಭಾಂಗಣದಲ್ಲಿ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಶಿಶಿಲ ಅವರ ‘ದೊಡ್ಡ ವೀರ ರಾಜೇಂದ್ರ’ ಎಂಬ ಐತಿಹಾಸಿಕ ಕೃತಿ ಯನ್ನು ಬಿಡುಗಡೆಗೊಳಿಸಿದ ಮಾತನಾ ಡಿದ ಅವರು, ದೊಡ್ಡ…
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆಗೆ ಆಗ್ರಹ
March 13, 2019ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸೇವಾದಳ ಯುವ ಬ್ರಿಗೇಡ್ ಅಧ್ಯಕ್ಷ ಮಜೀದ್ ಇನಾಯತ್ ಖಾನ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಲೋಕಸಭಾ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುತ್ತಿರುವ ಸಂದರ್ಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಮನವಿ ಮಾಡಿದರಲ್ಲದೆ, ಕಾಂಗ್ರೆಸ್ ನಿಂದ ಯಾರನ್ನೇ ಕಣಕ್ಕಿಳಿಸಿದರೂ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರಲ್ಲದೆ, ಒಂದು…
ಮಕ್ಕಳ ವಿಕಲತೆ ದೂರ ಮಾಡಲು ಪೋಲಿಯೋ ಲಸಿಕೆ ಪೂರಕ
March 11, 2019ಮಡಿಕೇರಿ: ಐದು ವರ್ಷ ದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸುವ ಮೂಲಕ ಮಕ್ಕಳನ್ನು ವಿಕಲತೆಯಿಂದ ದೂರ ಮಾಡಿ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಕರೆ ನೀಡಿದ್ದಾರೆ. ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಶಿಶುಗಳಿಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಯನ್ನು ಕಡ್ಡಾಯ ವಾಗಿ ಹಾಕಿಸಬೇಕು ಎಂದು ಕಾವೇರಮ್ಮ ಸೋಮಣ್ಣ ಅವರು ಮನವಿ ಮಾಡಿದರು. ಪೋಲಿಯೋ ಸಂಬಂಧಿಸಿದಂತೆ…
ವಿರಾಜಪೇಟೆಯಲ್ಲಿ ಮಾದರಿ ನ್ಯಾಯಾಲಯ ಕಾರ್ಯಕ್ರಮ
March 11, 2019ವಿರಾಜಪೇಟೆ: ದೇಶದಲ್ಲಿ ಕಾನೂನಿಗೆ ಸಂವಿಧಾನವೇ ಶ್ರೇಷ್ಠ. ನಾವು ಗಳು ಸಂವಿಧಾನದ ಆಶಯಕ್ಕೆ ಪೂರಕವಾ ಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ, ಕೆವಿಜಿ ಕಾನೂನು ಕಾಲೇಜು ಸುಳ್ಯ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಮಾದರಿ ನ್ಯಾಯಾ ಲಯ ಕಾರ್ಯಕ್ರಮ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನ್ಯಾಯಾಧೀಶ ಜಯಪ್ರಕಾಶ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾನೂನಿನ ಅರಿವು ಇದ್ದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರಿಗೂ ಕಾನೂನಿನ ಅವಶ್ಯಕತೆ…