ಭತ್ತ ಖರೀದಿಯಲ್ಲಿ ವಿಳಂಬ: ಕಂಗಾಲಾದ ರೈತರು
ಕೊಡಗು

ಭತ್ತ ಖರೀದಿಯಲ್ಲಿ ವಿಳಂಬ: ಕಂಗಾಲಾದ ರೈತರು

March 14, 2019

ಗುಡ್ಡೆಹೊಸೂರು: ಗುಡ್ಡೆಹೊ ಸೂರು ಸುತ್ತಮುತ್ತ ಮತ್ತು ಜಿಲ್ಲೆಯ ವಿವಿಧ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆದ ರೈತರು ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಡಿಸೆಂಬರ್ ತಿಂಗಳಿ ನಲ್ಲಿ ಬೆಂಬಲ ಬೆಲೆ ಘೋಷಣೆಯಾ ಯಿತು. ಆದರೆ ಕೃಷಿ ಮಾರುಕಟ್ಟೆ ಸಂಸ್ಥೆ (ಆರ್.ಎಂ.ಸಿ) ಭತ್ತ ಖರಿದಿಸಲು ವಿಳಂಬ ಮಾಡಿದರು. ರೈತರು ಕಛೇರಿ ಮುಂದೆ ಪ್ರತಿನಿತ್ಯ ಕಾದು ಕಾದು ಸುಸ್ತಾದರು. ಇದ ರಿಂದ ಬೇಸತ್ತ ಹಲವು ರೈತರು ಸ್ಥಳೀಯ ಅಕ್ಕಿ ಗಿರಣಿಗೆ ಕ್ವೀಂಟಾಲ್‍ಗೆ 1200ರಿಂದ 1300ಕ್ಕೆ ಮಾರಿದರೆ, ಅದೆಷ್ಟೋ ರೈತರು ಅಂಗಳದಲ್ಲಿಯೆ ದಾಸ್ತಾನು ಮಾಡಿ ಇಂದೋ ನಾಳೆಯೋ ಖರೀದಿ ಮಾಡುವ ಸಂದೇಶ ಬರಬಹುದು ಎಂದು ಕಾದು ಕಾದು ಸುಸ್ತಾ ದರು. 20018ರ ಡಿಸೆಂಬರ್ 26ರಿಂದ ರೈತರಲ್ಲಿರುವ ಭತ್ತವನ್ನು ಖರೀದಿ ಸುವುದಾಗಿ ಆರ್.ಎಂ.ಸಿ ಯವರು ನೊಂದಣಿ ಮಾಡಿಕೊಂಡಿದ್ದಾರೆ.

ಭತ್ತ ಬೆಳೆದ ರೈತರ ಆರ್.ಟಿ.ಸಿ, ಆಧಾರ್, ಬ್ಯಾಂಕಿನ ಖಾತೆ ಸಂಖ್ಯೆ ಎಲ್ಲಾವನ್ನು ಪಡೆದು ಭತ್ತವನ್ನು ಪಡೆಯಲ್ಲಿಲ್ಲ. ಬದಲಿಗೆ ನೊಂದಣಿ ಪತ್ರವನ್ನು ಮಾತ್ರ ನೀಡಿರುತ್ತಾರೆ. ರೈತರು ವಾರಕ್ಕೆ ನಾಲ್ಕು ಬಾರಿ ಖರೀದಿ ಕೇಂದ್ರಗಳಿಗೆ ತೆರಳಿ ವಿಚಾ ರಿಸುವುದು ಮಾತ್ರ ನಿಲ್ಲಲಿಲ್ಲ. ಮಳೆಗಾಲದ ಬೆಳೆ ಮುಗಿದು ಬೇಸಿಗೆ ಕಾಲದ ಬೆಳೆ ಕೈಸೇರುವ ಸಮಯ ಬಂದಿದೆ. ಕೇವಲ ವೇದಿಕೆಗಳಲ್ಲಿ ಮಾತ್ರ ರೈತರಪರ ಎಂಬ ಘೋಷಣೆ ಮಾಡುವುದು ಯಾವ ಕಾಟಾ ಚಾರಕ್ಕೆ ಎಂಬುದು ಇದೀಗ ರೈತರ ಪ್ರಶ್ನೆಯಾಗಿದೆ. ಇಲ್ಲಿನ ರೈತರ ಮಂಡೆ ಪಂಡಸೋಮಯ್ಯ(ರಘು) ಅವರು 31.12.2018ರಲ್ಲಿ ತಮ್ಮ ಭತ್ತವನ್ನು ಖರೀದಿಸಲು ಆರ್.ಎಂ.ಸಿ.ಯಲ್ಲಿ ನೊಂದಾ ಯಿಸಿಕೊಂಡಿದ್ದರು ಇದುವರೆಗೂ ಭತ್ತ ಖರೀದಿಸಲಿಲ್ಲ ಎಂದು ಆರೋಪಿಸಿದರು.

ಅಲ್ಲದೆ ಈ ಬಗ್ಗೆ ರೈತರಾದ ಎಂ.ಆರ್. ಸೋಮಯ್ಯ, ಮನು, ಗಣೇಶ್, ಕುಶಾ ಲಪ್ಪ, ಪಟ್ಟಡ ಪ್ರಭಾಕರ್, ಬಿ.ಎಸ್.ಧನ ಪಾಲ್, ಮುಂತಾದವರು ದೂರಿದ್ದಾರೆ. ಭತ್ತ ಖರೀದಿ ಕೇಂದ್ರಗಳಿಗೆ ಸರಕಾರದ ಆದೇಶ ಬರದೆ ಖರೀದಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.

Translate »