ಸಂತ್ರಸ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಕಿ ಪಂದ್ಯಾವಳಿ
ಕೊಡಗು

ಸಂತ್ರಸ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಕಿ ಪಂದ್ಯಾವಳಿ

March 14, 2019

ಮಡಿಕೇರಿ: ಮಹಾಮಳೆ ಹಾಗೂ ಭೂ ಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡಿ ರುವ ಕೊಡವ ಕುಟುಂಬಗಳಲ್ಲಿ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಏಪ್ರಿಲ್ ಎರಡನೇ ವಾರ 16 ಕೊಡವ ಕುಟುಂಬ ಗಳ ಆಹ್ವಾನಿತ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ಕಕ್ಕ ಬ್ಬೆಯ ‘ದ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್’ನ ಪದಾಧಿಕಾರಿಗಳು ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಕ್ಲಬ್‍ನ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ ಹಾಗೂ ನಿರ್ದೇಶಕ ಅಂಜಪರ ವಂಡ ಕುಶಾಲಪ್ಪ ಅವರು, ಪ್ರಕೃತಿ ವಿಕೋಪ ಸಂತ್ರಸ್ತ ಕುಟುಂಬಗಳಿಗೆ ಹಲವು ರೀತಿಯ ಸೌಲಭ್ಯಗಳನ್ನು ಸರಕಾರ ಹಾಗೂ ದಾನಿ ಗಳು ಒದಗಿಸಿದ್ದರೂ, ಕ್ರೀಡೆಗೆ ಸಂಬಂಧಿಸಿ ಯಾವುದೇ ನೆರವು ಲಭ್ಯವಾಗಿಲ್ಲ. ಇದನ್ನು ಮನಗಂಡು ನಮ್ಮ ಕ್ಲಬ್ ಸಂತ್ರಸ್ತ ಪ್ರದೇ ಶದ ಕೊಡವ ಕುಟುಂಬಗಳ ಹಾಕಿ ಪಂದ್ಯಾ ವಳಿ ಆಯೋಜಿಸಲು ನಿರ್ಧರಿಸಿದೆ ಎಂದರು.

ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ರದ್ದುಗೊಂಡಿತ್ತು. ಮುಂದಿನ ವರ್ಷ ಆರಂ ಭವಾಗಲಿರುವ ಪಂದ್ಯಾವಳಿಯಲ್ಲಿ ಭಾಗ ವಹಿಸಲು ಸಂತ್ರಸ್ತ ಪ್ರದೇಶದ ಕೊಡವ ಕುಟುಂಬಗಳಲ್ಲಿ ಆತ್ಮಸ್ಥೈರ್ಯ ತುಂಬು ವುದು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಹ್ವಾನಿತ ಪಂದ್ಯಾವಳಿ ಆಯೋಜಿ ಸುವುದರೊಂದಿಗೆ ತಂಡಕ್ಕೆ ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವುದು ಕ್ಲಬ್‍ನ ಉದ್ದೇಶವಾಗಿದೆ ಎಂದರು.

ಏಪ್ರಿಲ್ ಎರಡನೇ ವಾರದಲ್ಲಿ ನಾಪೋಕ್ಲು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾ ನದಲ್ಲಿ ನಾಕೌಟ್ ಮಾದರಿ ಪಂದ್ಯಾವಳಿ ನಡೆಯಲಿದೆ. ಜೊತೆಗೆ ನಾಲ್ಕುನಾಡಿನ ಸುತ್ತ ಮುತ್ತಲ ನಾಲ್ಕು ಬಲಿಷ್ಠ ತಂಡಗಳನ್ನು ಸೇರಿಸಿ ಲೀಗ್ ಪಂದ್ಯಾಟ ಆಯೋಜಿಸಲಾ ಗುವುದು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಕ್ರೀಡಾಪಟು ವಿದ್ಯಾರ್ಥಿಗಳಾದ್ದಲ್ಲಿ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದÀರು.

ಕೊಡವ ಕುಟುಂಬಗಳ ಆಹ್ವಾನಿತ ಪಂದ್ಯಾ ವಳಿಯಲ್ಲಿ ಶಾಂತೆಯಂಡ, ಮಂಡೆಯಂಡ, ನಾಗಂಡ, ಓಡಿಯಂಡ, ಮುಕ್ಕಾಟಿರ, ಮಂದಿರ, ಬಾಚಿನಾಡಂಡ, ಹಂಚೆಟ್ಟಿರ, ತಂಬುಕುತ್ತಿರ, ಮೋರ್ಕಂಡ, ಮುದ್ದಂಡ, ಕನ್ನಿಕಂಡ, ಮಡ್ಲಂಡ, ಕನ್ನಂಡ ಸೇರಿದಂತೆ 16 ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇರುವುದಾಗಿ ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಕಾರ್ಯದರ್ಶಿ ನಾಟೋಳಂಡ ಕರುಂಬಯ್ಯ ಹಾಗೂ ನಿರ್ದೇಶಕ ಕಲಿಯಂಡ ಅಯ್ಯಪ್ಪ ಉಪಸ್ಥಿತರಿದ್ದರು.

Translate »