ಇತಿಹಾಸ ಬರೆಯುವುದಕ್ಕಿಂತ ಅಧ್ಯಯನಶೀಲರಾಗುವುದು ಅಗತ್ಯ
ಕೊಡಗು

ಇತಿಹಾಸ ಬರೆಯುವುದಕ್ಕಿಂತ ಅಧ್ಯಯನಶೀಲರಾಗುವುದು ಅಗತ್ಯ

March 13, 2019

ವಿರಾಜಪೇಟೆ: ಜಗತ್ತಿನ ಇತಿ ಹಾಸ ತಿಳಿದುಕೊಳ್ಳುವುದಕ್ಕಿಂತ ಮೊದಲು ತನ್ನ ಪರಿಸರದ ಇತಿಹಾಸದ ಅರಿವನ್ನು ಪಡೆದುಕೊಂಡು ನಂತರ ಇತಿಹಾಸ ಅಧ್ಯ ಯನ ಮಾಡುವುದರಿಂದ ನಮ್ಮಲ್ಲಿರುವ ತಪ್ಪು ಗ್ರಹಿಕೆಯನ್ನು ಸರಿಪಡಿಸಿಕೊಳ್ಳ ಬಹುದು ಎಂದು ಅರಮೇರಿ ಕಳಂಚೇರಿ ಮಠಾಧಿಶರಾದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿರಾಜಪೇಟೆ ಸಮೀಪದ ಅರಮೇರಿಯ ಕಳಂಚೇರಿ ಮಠದ ಸಭಾಂಗಣದಲ್ಲಿ ನಡೆದ ಹೊಂಬೆಳಕು ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಶಿಶಿಲ ಅವರ ‘ದೊಡ್ಡ ವೀರ ರಾಜೇಂದ್ರ’ ಎಂಬ ಐತಿಹಾಸಿಕ ಕೃತಿ ಯನ್ನು ಬಿಡುಗಡೆಗೊಳಿಸಿದ ಮಾತನಾ ಡಿದ ಅವರು, ದೊಡ್ಡ ವೀರರಾಜೇಂದ್ರ ನನ್ನು ರಾಜನನ್ನಾಗಿ ಮಾಡುವಲ್ಲಿ ಕೊಡವ ಸಮುದಾಯದ ಶ್ರಮವನ್ನು ನಾವು ಗಮನಿ ಸಬೇಕು. ಪರರನ್ನು ಮೆಚ್ಚಿಸಲು ಇತಿಹಾಸ ವನ್ನು ಬರೆಯುವುದಕ್ಕಿಂತ ಪ್ರತಿಯೊಬ್ಬರು ಅಧ್ಯಯನಶೀಲರಾಗುವ ಮೂಲಕÀ ಪುಸ್ತಕ ದಂತಹ ಸನ್ಮಿತ್ರ ದೊರೆಯುವಂತಾಗುತ್ತದೆ ಎಂದರು. ಸಾಹಿತಿ ಡಾ.ಪ್ರಭಾಕರ ಶಿಶಿಲ ಮಾತನಾಡಿ, ಕೊಡಗನ್ನು ಪರರ ತುತ್ತಾಗ ದಂತೆ ಕಾಪಾಡಿ ಕಟ್ಟುವಲ್ಲಿ ದೊಡ್ಡ ವೀರ ರಾಜೇಂದ್ರನ ಶ್ರಮವಿದೆ. ಕೊಡಗಿನ ಕುರಿತು ಇನ್ನು ಎರಡು ಪುಸ್ತಕವನ್ನು ಬರೆಯುವ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ದೊಡ್ಡ ವೀರರಾಜೇಂದ್ರ ಕೃತಿಯ ಪ್ರತಿಗಳ ಮಾರಾಟದಿಂದ ಬಂದ ಹಣವನ್ನು ಜಿಲ್ಲೆ ಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೀಡುವುದಾಗಿ ಅವರು ಘೋಷಿ ಸಿದರು. ನಿವೃತ್ತ ಪ್ರಾಧ್ಯಾಪಕ ಸಿ.ಕೆ.ರೇಣುಕಾ ಚಾರ್ಯ ಮಾತನಾಡಿ, ಬೇರೆ ಬೇರೆ ಕ್ಷೇತ್ರ ದಲ್ಲಿ ಕನ್ನಡ ಮಾಧ್ಯಮದ ಪುಸ್ತಕಗಳ ಅವಶ್ಯ ಕತೆ ಸಾಕಷ್ಟಿದೆ. ಇತಿಹಾಸದ ಅರಿವು ಎಲ್ಲ ರಿಗೂ ಬಹುಮುಖ್ಯವಾಗಿದೆ ಎಂದರು.

ಪ್ರಾಧ್ಯಾಪಕ ಮೋಹನ್ ಪಾಳೆಗಾರ್ ದೊಡ್ಡ ವೀರರಾಜೇಂದ್ರ ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಇಟ್ಟಿರ ಬಿದ್ದಪ್ಪ, ಪಕ್ಷಿ ತಜ್ಞ ಡಾ.ನರಸಿಂಹನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮುಧೋಶ್ ಪೂವಯ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಬ್ರಾಯ ಸಂಪಾಜೆ, ವಿರಾಜಪೇಟೆ ಸರ್ಕಾರಿ ಪದವಿ ಕಾಲೇ ಜಿನ ಪ್ರಾಂಶುಪಾಲ ಡಾ,ಟಿ.ಕೆ.ಬೋಪಯ್ಯ, ಪೆÇ್ರ.ಕಮಲಾಕ್ಷಿ, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ ಮುಂತಾ ದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಸಿಂಧು ಸ್ವಾಗತಿಸಿ, ವಂದಿಸಿದರು.

Translate »