ಎಲ್ಲರೂ ಒಗ್ಗೂಡಿ ಪಕ್ಷ ಕಟ್ಟುವ: ಜೆಡಿಎಸ್ ಜಿಲ್ಲಾಧ್ಯಕ್ಷ ಗಣೇಶ್
ಕೊಡಗು

ಎಲ್ಲರೂ ಒಗ್ಗೂಡಿ ಪಕ್ಷ ಕಟ್ಟುವ: ಜೆಡಿಎಸ್ ಜಿಲ್ಲಾಧ್ಯಕ್ಷ ಗಣೇಶ್

March 13, 2019

ಮಡಿಕೇರಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿ ರುವುದರಿಂದ ಕೊಡಗು-ಮೈಸೂರು ಕ್ಷೇತ್ರದ ಮೈತ್ರಿ ಅಭ್ಯ ರ್ಥಿಯ ಗೆಲುವಿಗೆ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕಾರ್ಯ ನಿರ್ವ ಹಿಸಬೇಕೆ ಹೊರತು, ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಯಾರೂ ಗೊಂದಲ ಸೃಷ್ಟಿಸಬಾರದು ಎಂದು ಜಾತ್ಯಾತೀತ ಜನತಾದಳದ ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಜಿಲ್ಲಾಧ್ಯಕ್ಷ ಸ್ಥಾನದ ಜವಬ್ದಾ ರಿಯನ್ನು ನನಗೆ ನೀಡಿದ್ದು, ಹಿರಿಯರ ಆಜ್ಞೆಯನ್ನು ಪಾಲಿಸು ವುದು ನನ್ನ ಕರ್ತವ್ಯವಾಗಿದೆ. ವರಿಷ್ಠರ ಸೂಚನೆಯಂತೆ ನಾನು ಜಿಲ್ಲಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದೇನೆ. ಪಕ್ಷ ದಲ್ಲಿರುವ ಪ್ರತಿಯೊಬ್ಬರ ಸಲಹೆ ಸೂಚನೆಗಳನ್ನು ಪಡೆದೇ ಪಕ್ಷವನ್ನು ಬೆಳೆಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಿರಿಯರು ಹಾಗೂ ಜೆಡಿಎಸ್ ನಾಯಕರಾದ ಬಿ.ಎ. ಜೀವಿ ಜಯ ಅವರು ತಮ್ಮ ಪುತ್ರನನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡ ಬೇಕೆಂದು ಬಯಸಿದ್ದರು. ಆದರೆ ವರಿಷ್ಠರು ಆ ಜವಬ್ದಾರಿ ಯನ್ನು ನನಗೆ ನೀಡಿದ್ದಾರೆ. ನನ್ನನ್ನು ಕೂಡ ತಮ್ಮ ಪುತ್ರನೆಂದು ಭಾವಿಸಿ ಪಕ್ಷ ಸಂಘಟನೆಗೆ ಅಗತ್ಯ ಸಹಕಾರ, ಸಲಹೆ, ಸೂಚನೆ ನೀಡಿ ಪ್ರೋತ್ಸಾಹಿಸಿ ಎಂದು ಗಣೇಶ್ ಮನವಿ ಮಾಡಿದ್ದಾರೆ.

ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದ್ದು, ಪಕ್ಷವನ್ನು ಬಲಗೊಳಿಸುವ ವಿಶ್ವಾಸ ನನಗಿದೆ. ಜೀವಿಜಯ ಅವರೂ ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರ ಹಾಗೂ ಕಾರ್ಯಕರ್ತರ ಮಾರ್ಗದರ್ಶನದಲ್ಲೇ ಮುನ್ನಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಸಧ್ಯದಲ್ಲಿಯೇ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸು ವುದಕ್ಕಾಗಿ ಪಣತೊಟ್ಟಿದ್ದು, ಈ ಗುರಿ ಸಾಧಿಸಲು ಜೆಡಿಎಸ್‍ನ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸಹಕಾರ ನೀಡ ಬೇಕೆಂದು ಗಣೇಶ್ ಕೋರಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡಿದರೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ ಫಲಿತಾಂಶದ ಮೇಲೂ ಅಡ್ಡ ಪರಿಣಾಮವಾ ಗುವ ಸಾಧ್ಯತೆಗಳಿದೆ. ಆದ್ದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಜಿಲ್ಲಾಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಲು ಪ್ರೋತ್ಸಾಹ ನೀಡಬೇಕೆಂದು ಕೆ.ಎಂ.ಗಣೇಶ್ ತಿಳಿಸಿದ್ದಾರೆ.

Translate »