ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ
ಕೊಡಗು

ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ

March 13, 2019

ಮಡಿಕೇರಿ: ಪರೀಕ್ಷೆಗೆ ಹೆದರಿಕೊಂಡು ಶಾಲಾ ಬಾಲಕಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣೆಯ ಹೊಸ್ಕೇರಿಯಲ್ಲಿ ನಡೆದಿದೆ.

ಹೊಸ್ಕೇರಿ ನಿವಾಸಿ ಚಂದ್ರಶೇಖರ್ ಎಂಬುವರ ಪುತ್ರಿ ಜಸ್ಮಿತಾ(14) ಎಂಬಾಕೆಯೇ ಮೃತ ವಿದ್ಯಾ ರ್ಥಿನಿ. ಮರಗೋಡು ಸರಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜಸ್ಮಿತಾ ಸೋಮವಾರ ಗಣಿತ ಪರೀಕ್ಷೆ ಬರೆದಿದ್ದಳು. ಪರೀಕ್ಷೆ ಮುಗಿಸಿ ಮನೆಗೆ ಬಂದ ಆಕೆ ಡೆತ್‍ನೋಟ್ ಬರೆದಿಟ್ಟು ಮನೆಯ ಹಿಂಬದಿಯಲ್ಲಿದ್ದ ಕೆರೆಗೆ ಹಾರಿ ಸಾವಿಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಬರೆದ ಡೆತ್‍ನೋಟ್‍ನಲ್ಲಿ “ಐ ಲವ್ ಯೂ ಅಪ್ಪ ಅಮ್ಮ. ಮೇ, ನಲ್ಲಿ ನಿಶ್ಚಯ ಆಗಿರೋ ಅಕ್ಕನ ಮದುವೆ ತುಂಬಾ ಚೆನ್ನಾಗಿ ನಡೀಬೇಕು. ಪರೀಕ್ಷೆ ಕಷ್ಟವಿತ್ತು. ನಾನು ಪಾಸಾಗುವುದು ಕಷ್ಟ” ಎಂದು ಉಲ್ಲೇಖ ಮಾಡಲಾಗಿದೆ. ಘಟನೆ ಕುರಿತಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Translate »