Tag: Kodagu

ಮರದಿಂದ ಬಿದ್ದು ಕಾರ್ಮಿಕ ಸಾವು
ಕೊಡಗು

ಮರದಿಂದ ಬಿದ್ದು ಕಾರ್ಮಿಕ ಸಾವು

March 7, 2019

ಸೋಮವಾರಪೇಟೆ: ತೋಟದಲ್ಲಿ ಮರ ಕಪಾತು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಆಯತಪ್ಪಿ ಕೆಳಬಿದ್ದು ಕಾರ್ಮಿಕ ರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಮೀಪದ ನಗರಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಪಟ್ಟಣ ಸಮೀಪದ ಹಾನಗಲ್ಲು ಬಾಣೆ ನಿವಾಸಿ ಭಾಗ್ಯ ಎಂಬುವರ ಪತಿ ಶಿವ(55) ಎಂಬುವರು ಇಂದು ಮರ ಕಪಾತು ಮಾಡಲೆಂದು ನಗರಳ್ಳಿ ಗ್ರಾಮದ ತನುಷಿ ಅವರ ತೋಟಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆಗೆ ಮರ ಕಡಿಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದಿದ್ದಾರೆ. ಸುಮಾರು 45 ಅಡಿ ಎತ್ತರದಿಂದ ಕೆಳ ಬಿದ್ದಿರುವ ಶಿವ ಸ್ಥಳದಲ್ಲೇ ಅಸುನೀಗಿದ್ದಾರೆ….

ಬೆಳೆಹಾನಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಸೂಚನೆ
ಕೊಡಗು

ಬೆಳೆಹಾನಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಸೂಚನೆ

March 7, 2019

ಮಡಿಕೇರಿ: ಬೆಳೆ ಹಾನಿ ಪರಿಹಾರ ಸಂಬಂಧ ಪರಿಹಾರ ತಂತ್ರಾಂಶ ದಲ್ಲಿ ದಾಖಲಿಸಿ, ಕೂಡಲೇ ಕಚೇರಿಗೆ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದ ಕಾಮಗಾರಿಗಳು ಹಾಗೂ ಪರಿಹಾರ ವಿತರಣೆ ಪ್ರಗತಿ ಕುರಿತು ಬುಧವಾರ ನಡೆದ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆಹಾನಿ ಸಂಬಂಧಿಸಿದಂತೆ ಈಗಾ ಗಲೇ ಬೆಳೆ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಬಾಕಿ ಇರುವುದನ್ನು ತಂತ್ರಾಂಶದಲ್ಲಿ ಅಳವಡಿಸಿ ಮಾಹಿತಿ…

ಶ್ರದ್ಧೆ, ಛಲದಿಂದ ಯಶಸ್ಸು ಸಾಧ್ಯ
ಕೊಡಗು

ಶ್ರದ್ಧೆ, ಛಲದಿಂದ ಯಶಸ್ಸು ಸಾಧ್ಯ

March 7, 2019

ವಿರಾಜಪೇಟೆ: ವಿದ್ಯಾರ್ಥಿ ಜೀವನ ಮಹತ್ವದ ಘಟ್ಟ. ಜೀವನದಲ್ಲಿ ಗುರಿಯನ್ನಿ ಟ್ಟುಕೊಂಡು ಶ್ರದ್ಧೆ ಮತ್ತು ಛಲದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಹೇಳಿದರು. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿ ಯಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ವಿದ್ಯಾನಿಲಯ ಮಟ್ಟದ ಕೊಡಗಿನ ಇತಿ ಹಾಸ ಅಧ್ಯಯನದಲ್ಲಿ ಪುರಾತತ್ಪ ಆಧಾರಗಳ ಮಹತ್ವ ಎಂಬ ವಿಷಯದ ಬಗ್ಗೆ ಒಂದು ದಿನದ ವಿಚಾರ ಗೋಷ್ಠಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದು…

ಹಾರಂಗಿ ಸಂತ್ರಸ್ತರಿಗೆ ಸಿಗದ ಪರಿಹಾರ ಮಾ.12, ನಾಡಕಚೇರಿ ಮುಂದೆ ಪ್ರತಿಭಟನೆ
ಕೊಡಗು

ಹಾರಂಗಿ ಸಂತ್ರಸ್ತರಿಗೆ ಸಿಗದ ಪರಿಹಾರ ಮಾ.12, ನಾಡಕಚೇರಿ ಮುಂದೆ ಪ್ರತಿಭಟನೆ

March 7, 2019

ಕುಶಾಲನಗರ: ಸಮೀಪದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಹಾರಂಗಿ ನದಿ ದಂಡೆಯಲ್ಲಿ ವಾಸವಿರುವ ಅನೇಕ ಕುಟುಂಬಗಳು ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ನೆರೆ ಪ್ರವಾಹಕ್ಕೆ ಸಿಲುಕಿ ತೀವ್ರ ಹಾನಿ ಉಂಟಾಗಿದ್ದರೂ ಕೂಡ ಇದುವರೆಗೂ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಮಾ.12 ರಂದು ನಾಡಕಚೇರಿ ಮುಂದೆ ಸಂತ್ರಸ್ತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಪಂ ಸದಸ್ಯ ಭಾಸ್ಕರ್ ನಾಯಕ್ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಿಂದ ಹಾರಂಗಿ ಜಲಾಶಯದ ಸುತ್ತಮುತ್ತ ವಾಸವಿರುವ ಅನೇಕ ಕಟುಂಬಗಳಿಗೆ ಹಾನಿ ಉಂಟಾಗಿತ್ತು….

ಶೌಕತ್ ಅಲಿ ವಿ.ಪೇಟೆ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ
ಕೊಡಗು

ಶೌಕತ್ ಅಲಿ ವಿ.ಪೇಟೆ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ

March 7, 2019

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆ ಲೆಯಲ್ಲಿ ಮೈಸೂರು ನಗರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೌಕರ್ ಅಲಿ ಅವರನ್ನು ಕೊಡಗಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶ ಹೊರಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದ ರ್ಭದಲ್ಲಿ ಸಹ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ಶೌಕತ್ ಅಲಿ ಅವರನ್ನು ನೇಮಿಸಲಾಗಿತ್ತು.

ಪಿಡಿಜಿ ಕರ್ನಲ್ ಬಿದ್ದಂಡ ಎಂ.ಚಂಗಪ್ಪ ಇನ್ನಿಲ್ಲ
ಕೊಡಗು

ಪಿಡಿಜಿ ಕರ್ನಲ್ ಬಿದ್ದಂಡ ಎಂ.ಚಂಗಪ್ಪ ಇನ್ನಿಲ್ಲ

March 7, 2019

ಮಡಿಕೇರಿ: ಮೂಲತಃ ವಿರಾ ಜಪೇಟೆಯ ಪಿಡಿಜಿ ಕರ್ನಲ್ ಚಂಗಪ್ಪ ಅವರು ಇಂದು ರಾತ್ರಿ ಅಹಮದಾ ಬಾದ್‍ನಲ್ಲಿ ನಿಧನರಾದರು. ಅವರಿಗೆ 101 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಚಂಗಪ್ಪ ಅವರು 1983-84ರಲ್ಲಿ ಮಡಿ ಕೇರಿ ರೋಟರಿ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ತಮ್ಮ 24ನೇ ವಯಸ್ಸಿ ನಲ್ಲೇ ಅಂದರೆ 1941ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಸೇವೆ ಸಲ್ಲಿಸಿ ದ್ದರು. ನಿವೃತ್ತಿ ನಂತರ ಕೊಡಗಿನಲ್ಲಿ ನೆಲೆಸಿದ್ದ ಚಂಗಪ್ಪ ಅವರು ಅಹಮದಾಬಾದ್‍ನಲ್ಲಿ…

ಪಲ್ಸ್ ಪೋಲಿಯೋ ಯಶಸ್ವಿಗೆ ಶ್ರಮಿಸಲು ಮನವಿ
ಕೊಡಗು

ಪಲ್ಸ್ ಪೋಲಿಯೋ ಯಶಸ್ವಿಗೆ ಶ್ರಮಿಸಲು ಮನವಿ

March 6, 2019

ಮಡಿಕೇರಿ: ಮಾರ್ಚ್ 10 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಶೇಕಡವಾರು ಯಶಸ್ಸಿಗೆ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ ಸಂಸ್ಥೆ ಗಳು ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್ ಕೋರಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಪಲ್ಸ್ ಪೋಲಿಯೊ ಕಾರ್ಯ ಕ್ರಮ ಸಿದ್ಧತೆ ಕೈಗೊಳ್ಳುವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐದು ವರ್ಷದೊಳಗಿನ ಎಲ್ಲಾ ಮಕ್ಕ ಳಿಗೆ ಪಲ್ಸ್ ಪೋಲಿಯೊವನ್ನು ಕಡ್ಡಾಯ ವಾಗಿ ಹಾಕಬೇಕು….

ಕೊಡಗು ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯ ಚುರುಕುಗೊಳಿಸಲು ಸೂಚನೆ
ಕೊಡಗು

ಕೊಡಗು ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯ ಚುರುಕುಗೊಳಿಸಲು ಸೂಚನೆ

March 6, 2019

ಮಡಿಕೇರಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕೊಡಗು ಜಿಲ್ಲೆಯಲ್ಲಿ ಕೈಗೊಂಡಿರುವ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳು ಕುರಿತಂತೆ ಸಭೆ ನಡೆಯಿತು. ಬಡಾವಣೆಗಳಿಗೆ ಸಂಪರ್ಕ ರಸ್ತೆ, ಬಡಾವಣೆ ನಿರ್ಮಾಣ, ಜಿಲ್ಲಾ ಕ್ರೀಡಾಂಗಣ ಹಾಗೂ ಸರ್ಕಾರಿ ಜೂನಿಯರ್ ಕಾಲೇಜು ದುರಸ್ತಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ದುರಸ್ತಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಬೆಳೆ ಹಾನಿ: ಜಿಲ್ಲೆಯಲ್ಲಿ 32,312 ರೈತರ 75201.68 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿದ್ದು, ಪರಿಹಾರಕ್ಕಾಗಿ…

ಜಿಲ್ಲಾದ್ಯಂತ ಭಕ್ತಿ ಭಾವದ ಮಹಾಶಿವರಾತ್ರಿ ಆಚರಣೆ
ಕೊಡಗು

ಜಿಲ್ಲಾದ್ಯಂತ ಭಕ್ತಿ ಭಾವದ ಮಹಾಶಿವರಾತ್ರಿ ಆಚರಣೆ

March 6, 2019

ಮಡಿಕೇರಿ: ಶಿವರಾತ್ರಿಯ ಪ್ರಯುಕ್ತ ಜಿಲ್ಲೆಯ ಶಿವ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಶಿವನ ವೇಷ, ಭೂಷಣದೊಂದಿಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜಿಲ್ಲೆಯಾ ದ್ಯಂತ ನಡೆಯಿತು. ರಾತ್ರಿ ಜಾಗರಣೆಯ ಮೂಲಕ ಶಿವನನ್ನು ಭಕ್ತಾದಿಗಳು ಆರಾಧಿಸಿದರು. ಮಡಿಕೇರಿಯ ವಿವಿಧ ದೇವಾಲಯ ಗಳಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬೆಳ ಗ್ಗಿನಿಂದಲೇ ವಿಶೇಷ ಪೂಜೆಗಳು ನೆರ ವೇರಿದವು. ಇತಿಹಾಸ ಪ್ರಸಿದ್ಧ ಶ್ರೀ ಓಂಕಾ ರೇಶ್ವರ ದೇವಾಲಯ, ಶ್ರೀ ರಾಜರಾಜೇ ಶ್ವರಿ ದೇವಾಲಯ, ಶ್ರೀ ಮುತ್ತಪ್ಪ ದೇವಾ ಲಯ,…

ಬೋಗಸ್ ಬಂದೂಕು ಪರವಾನಗಿ ವಿತರಣೆ ಆರೋಪ ಡಿಸಿ ಕಚೇರಿ ಸಿಬ್ಬಂದಿ ಅಮಾನತು
ಕೊಡಗು

ಬೋಗಸ್ ಬಂದೂಕು ಪರವಾನಗಿ ವಿತರಣೆ ಆರೋಪ ಡಿಸಿ ಕಚೇರಿ ಸಿಬ್ಬಂದಿ ಅಮಾನತು

March 6, 2019

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೋರ್ವ ವ್ಯಕ್ತಿಯೊಬ್ಬರಿಗೆ ಬೋಗಸ್ ಬಂದೂಕಿನ ಪರವಾನಗಿ ವಿತರಿಸಿದ ಆರೋಪದಲ್ಲಿ ಅಮಾನತ್ತುಗೊಂಡಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಈತನ ವಿರುದ್ದ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಶ್ರೀನಿಧಿ ಎಂಬಾತನೇ ಕರ್ತವ್ಯದಿಂದ ಅಮಾನತು ಗೊಂಡಿದ್ದು, ಪೊಲೀಸ್ ಮೊಕದ್ದಮೆ ದಾಖಲಾಗಿರುವ ಹಿನ್ನಲೆಯಲ್ಲಿ ತಲೆಮರೆಸಿ ಕೊಂಡಿರುವುದಾಗಿ ತಿಳಿದು ಬಂದಿದೆ. ಈತನ ವಿರುದ್ಧ ಮೊಕದ್ದಮೆ ಸಂಖ್ಯೆ 06/2019 ಪೊಲೀಸ್ ಕಾಯ್ದೆ 465, 466ರ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು…

1 25 26 27 28 29 84
Translate »