ಪಿಡಿಜಿ ಕರ್ನಲ್ ಬಿದ್ದಂಡ ಎಂ.ಚಂಗಪ್ಪ ಇನ್ನಿಲ್ಲ
ಕೊಡಗು

ಪಿಡಿಜಿ ಕರ್ನಲ್ ಬಿದ್ದಂಡ ಎಂ.ಚಂಗಪ್ಪ ಇನ್ನಿಲ್ಲ

March 7, 2019

ಮಡಿಕೇರಿ: ಮೂಲತಃ ವಿರಾ ಜಪೇಟೆಯ ಪಿಡಿಜಿ ಕರ್ನಲ್ ಚಂಗಪ್ಪ ಅವರು ಇಂದು ರಾತ್ರಿ ಅಹಮದಾ ಬಾದ್‍ನಲ್ಲಿ ನಿಧನರಾದರು.

ಅವರಿಗೆ 101 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಚಂಗಪ್ಪ ಅವರು 1983-84ರಲ್ಲಿ ಮಡಿ ಕೇರಿ ರೋಟರಿ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ತಮ್ಮ 24ನೇ ವಯಸ್ಸಿ ನಲ್ಲೇ ಅಂದರೆ 1941ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಸೇವೆ ಸಲ್ಲಿಸಿ ದ್ದರು. ನಿವೃತ್ತಿ ನಂತರ ಕೊಡಗಿನಲ್ಲಿ ನೆಲೆಸಿದ್ದ ಚಂಗಪ್ಪ ಅವರು ಅಹಮದಾಬಾದ್‍ನಲ್ಲಿ ರುವ ಪುತ್ರನ ಮನೆಗೆ ತೆರಳಿದ್ದರು.

Translate »