ಯುವ ಮತದಾರರ ನೋಂದಣಿ, ಮತದಾರರ ಜಾಗೃತಿ ಅಭಿಯಾನ ಮತದಾನ ಮಾಡಿ, ಮತದಾನಕ್ಕೆ ಪ್ರೇರೇಪಿಸಿ: ಡಿಸಿ
ಹಾಸನ

ಯುವ ಮತದಾರರ ನೋಂದಣಿ, ಮತದಾರರ ಜಾಗೃತಿ ಅಭಿಯಾನ ಮತದಾನ ಮಾಡಿ, ಮತದಾನಕ್ಕೆ ಪ್ರೇರೇಪಿಸಿ: ಡಿಸಿ

March 7, 2019

ಹಾಸನ: ಪ್ರತಿಯೊಬ್ಬರೂ ಮತದಾನ ಮಾಡಿ, ಮತದಾನಕ್ಕೆ ಪ್ರೇರೇ ಪಿಸಬೇಕು. ಈ ಮೂಲಕ ರಾಜ್ಯದಲ್ಲಿಯೇ ಜಿಲ್ಲೆಯು ಮುಂಬರುವ ಲೋಕಸಭಾ ಚುನಾವಣೆ ಅತಿಹೆಚ್ಚು ಮತದಾನವಾದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತೆ ಎಲ್ಲರೂ ಸಹಕರಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು.

ನಗರದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಯುವ ಮತದಾರರ ನೋಂದಣಿ ಹಾಗೂ ಮತದಾರರ ಜಾಗೃತಿ ಅಭಿಯಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಯಾವುದೇ ಮತದಾ ರರು ಮತದಾನದಿಂದ ಹೊರಗುಳಿಯ ದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ಶೇ. 100ರಷ್ಟು ಮತದಾನ ನಡೆಯಬೇಕು ಎಂದು ತಿಳಿಸಿದರು.

ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಪ್ರಯೋಗಾ ಲಯವಿದ್ದಂತೆ. ಇದರಲ್ಲಿ ಎಲ್ಲರೂ ಸಕ್ರಿಯ ವಾಗಿ ಪಾಲ್ಗೊಳ್ಳಬೇಕು. 5 ವರ್ಷಕ್ಕೊಮ್ಮೆ ನಡೆಯುವಂತಹ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ವನ್ನು ನಿರ್ಧರಿಸುವ ಹಕ್ಕು ಎಲ್ಲರಿಗೂ ಇದೆ. ಯುವ ಸಮುದಾಯವು ಮತ ದಾನದ ಬಗ್ಗೆ ಪೋಷಕರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಅರಿವು ಮೂಡಿಸಿ ಕಡ್ಡಾಯ ಮತದಾನಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಜ. 1ಕ್ಕೆ 18 ವರ್ಷ ತುಂಬಿದವರಿಗೆ ಮತ ದಾನದ ಹಕ್ಕು ಇದ್ದು, ಎಲ್ಲರೂ ಮತ ದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಗೊಳಿಸಬೇಕು. ತಾಲೂಕು ಕಚೇರಿಗಳಲ್ಲಿ ಮತದಾನ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಮತದಾನದ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ತಿಳಿಯಿರಿ ಇಲ್ಲದಿದ್ದಲ್ಲಿ ತಮ್ಮ ಹೆಸರು ಗಳನ್ನು ನೋಂದಣಿ ಮಾಡಿಸಬೇಕು. ಯಾವುದೇ ಗೊಂದಲವಿದ್ದರೆ 1950ಕ್ಕೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯ ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ಪ್ರತಿಯೊಬ್ಬರಿಗೂ ಕಡ್ಡಾಯ ಮತ ದಾನ ಚಲಾಯಿಸುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿ ಕಾರಿ ನಂದಿನಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಅರುಣ್‍ಕುಮಾರ್, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜು, ಪೌರಾಯುಕ್ತ ಪರಮೇಶ್, ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಹಿಮ್ಸ್‍ನ ಮುಖ್ಯ ಆಡಳಿತಾಧಿ ಕಾರಿ ಕಲ್ಪಶ್ರೀ, ತಹಸೀಲ್ದಾರ್ ಶ್ರೀನಿವಾಸಯ್ಯ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದೇವರಾಜೇಗೌಡ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವ ಮತದಾರರ ಜಾಗೃತಿಗೆ ಬೃಹತ್ ಜಾಥಾ
ಹಾಸನ: ನಗರದ ಜಿಲ್ಲಾಧಿ ಕಾರಿ ಕಚೇರಿ ಆವರಣದಲ್ಲಿ ಆಯೋಜಿ ಸಿದ್ದ ಮತದಾರ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್‍ಗೌಡ, ಜಿಪಂ ಸಿಇಓ ಡಾ.ಕೆ.ಎನ್.ವಿಜಯಪ್ರಕಾಶ್ ಹಸಿರು ನಿಶಾನೆ ತೋರಿಸುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟ ಜಾಥಾದಲ್ಲಿ ಭಿತ್ತಿಪತ್ರಗಳ ಮೂಲಕ ಮತದಾನದ ಅರಿವು ಮೂಡಿಸ ಲಾಯಿತು. ನಗರದ ಎನ್.ಆರ್.ವೃತ್ತ ಹಾಗೂ ಹೇಮಾವತಿ ಪ್ರತಿಮೆ ಬಳಿ ವಿಶೇಷ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ಗಮನ ಸೆಳೆಯಲಾಯಿತು. ಇದಲ್ಲದೆ ವಿವಿಧ ಜಾನಪದ ಕಲಾ ತಂಡಗಳು ಜಾಥಾದಲ್ಲಿ ಮೆರಗು ನೀಡಿದವು.

ಈ ಸಂದರ್ಭದಲ್ಲಿ ಜಿಪಂ ಯೋಜನ ನಿರ್ದೇಶಕ ಅರುಣ್‍ಕುಮಾರ್, ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗ ರಾಜ್, ಪೌರಾಯುಕ್ತ ಪರಮೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೆ.ಶಂಕರ್, ಸ್ವೀಪ್ ಸಮಿ ತಿಯ ಸದಸ್ಯ ಕಾರ್ಯದರ್ಶಿ ವಿನೋದ್ ಚಂದ್ರ, ಹಿಮ್ಸ್‍ನ ಮುಖ್ಯ ಆಡಳಿತಾಧಿ ಕಾರಿ ಕಲ್ಪಶ್ರೀ, ತಹಸೀಲ್ದಾರ್ ಶ್ರೀನಿ ವಾಸಯ್ಯ, ತಾಪಂ ಇಓ ದೇವರಾಜೇ ಗೌಡ ಹಾಗೂ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಅವರ ಕಚೇರಿ ಆವರಣ ದಿಂದ ಹೊರಟ ಅತ್ಯಾಕರ್ಷಕ ಬೃಹತ್ ಜಾಥಾವು ಎನ್.ಆರ್.ವೃತ್ತ, ಹಾಸನಾಂಬ ಕಲಾಭವನ, ಸಾಲಗಾಮೆ ರಸ್ತೆಯ ಮಾರ್ಗವಾಗಿ ಮಲ್ನಾಡ್ ಇಂಜಿನಿಯ ರಿಂಗ್ ಕಾಲೇಜ್ ತಲುಪಿತು.

ಜಾಥಾದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು, ಕಲಾ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಮಲ್ನಾಡ್ ಇಂಜಿ ನಿಯರಿಂಗ್ ಕಾಲೇಜು, ಎಲ್.ವಿ.ಪಾಲಿ ಟೆಕ್ನಿಕ್, ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪಾಲಿಟೆಕ್ನಿಕ್, ಸುಜಲ ಕಾಲೇಜು, ಬಿ.ಜಿ.ಎಸ್ ಕಾಲೇಜು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ ತಂಡಗಳು ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಕಾಲೇಜುಗಳ 7000ಕ್ಕೂ ಅಧಿಕ ವಿದ್ಯಾರ್ಥಿಗಳು ಮತದಾರರ ಜಾಗೃತಿ ಜಾಥಾ ಮೆರ ವಣಿಗೆಯಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು.

Translate »