ಶ್ರದ್ಧೆ, ಛಲದಿಂದ ಯಶಸ್ಸು ಸಾಧ್ಯ
ಕೊಡಗು

ಶ್ರದ್ಧೆ, ಛಲದಿಂದ ಯಶಸ್ಸು ಸಾಧ್ಯ

March 7, 2019

ವಿರಾಜಪೇಟೆ: ವಿದ್ಯಾರ್ಥಿ ಜೀವನ ಮಹತ್ವದ ಘಟ್ಟ. ಜೀವನದಲ್ಲಿ ಗುರಿಯನ್ನಿ ಟ್ಟುಕೊಂಡು ಶ್ರದ್ಧೆ ಮತ್ತು ಛಲದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಹೇಳಿದರು.

ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿ ಯಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ವಿದ್ಯಾನಿಲಯ ಮಟ್ಟದ ಕೊಡಗಿನ ಇತಿ ಹಾಸ ಅಧ್ಯಯನದಲ್ಲಿ ಪುರಾತತ್ಪ ಆಧಾರಗಳ ಮಹತ್ವ ಎಂಬ ವಿಷಯದ ಬಗ್ಗೆ ಒಂದು ದಿನದ ವಿಚಾರ ಗೋಷ್ಠಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದು ಕೊಳ್ಳುವುದರೊಂದಿಗೆ ಅದರ ಮಹತ್ವ ವನ್ನು ಅರಿತುಕೊಳ್ಳಬೇಕು. ಏನಾದರು ಸಾಧನೆ ಮಾಡಬೇಕೆಂಬ ಮುಖ್ಯ ಗುರಿಯನ್ನು ಇಟ್ಟು ಕೊಂಡು ದೇಶಕ್ಕಾಗಿ ಏನಾದರು ಸೇವೆ ಸಲ್ಲಿಸಬೇಕೆಂಬ ಛಲ ವಿದ್ಯಾರ್ಥಿಗಳಲ್ಲಿರ ಬೇಕು. ತಮ್ಮ ಪೋಷಕರು ಹಾಗೂ ಗುರುಗ ಳಿಗೆ ಗೌರವ ನೀಡುವುದರೊಂದಿಗೆ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.

ನಂತರ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರೊ.ಡಾ. ಗಣಪತಿ ಗೌಡ, ಕೊಡಗಿನ ಸೌಂದರ್ಯ ಹಾಗೂ ಪರಂಪರೆಯ ಇತಿಹಾಸ, ಸಂಸ್ಕø ತಿಯ ನೆಲೆ, ಕೊಡವರ ಐನ್‍ಮನೆಗಳು, ಹಿರಿಯರು ರಚಿಸಿದ ಗ್ರಂಥ, ದಾನದ ರೂಪ ದಲ್ಲಿ ಬರೆದಂತಹ ದಾಖಲೆಗಳನ್ನು ಗಮನಿ ಸಿದರೆ ಕೊಡಗು ಧರ್ಮ ಕೇಂದ್ರವಾಗಿ ಗುರು ತಿಸಿಕೊಂಡಿದೆ. ಹಾಗೂ ಕೊಡವ ಸಂಸ್ಕøತಿ, ಆಚಾರ-ವಿಚಾರ ಮಹತ್ವವನ್ನು ಪಡೆದು ಕೊಂಡಿದೆ. ನಮ್ಮ ದೇಶ ಇತರ ದೇಶಗಳಿ ಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ವಿದ್ಯಾ ರ್ಥಿಗಳು ಭಾರತದ ಇತಿಹಾಸವನ್ನು ಒಂದೇ ಬಾರಿಗೆ ತಿಳಿದುಕೊಳ್ಳಲು ಸಾಧ್ಯವಾಗದಿ ದ್ದರೂ ಹಂತಹಂತವಾಗಿ ತಿಳಿದುಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಶಿಕ್ಷಣ ಪಡೆದು ಉನ್ನತ ಹುದ್ದೆ ಗೇರುವಂತಾಗ ಬೇಕು ಎಂದರು. ವೇದಿ ಕೆಯಲ್ಲಿ ಇತಿಹಾಸ ವಿಭಾಗದ ರುದ್ರಾ, ಎ.ಎಸ್.ಸತೀಶ್ ಕುಮಾರ್, ಟಿ.ಎನ್. ತ್ಯಾಗರಾಜು, ಜಿ.ಟಿ.ಚೈತ್ರ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ರುದ್ರಾ ಸ್ವಾಗತಿಸಿದರು. ಜೆರೀಟ ಮೆನೇಜಸ್ ಹಾಗೂ ವಿ.ಪಿ.ಮಧುರ ನಿರೂಪಿಸಿದರೆ. ಸತೀಶ್ ಕುಮಾರ್ ವಂದಿಸಿದರು.

Translate »