ಗೋಣಿಕೊಪ್ಪಲು: ಕೇಂದ್ರ ಸರ್ಕಾರದ ಹಣಕಾಸು ಖಾತೆ ಸಚಿವ ಪಿಯೂಷ್ ಗೋಯಲ್ ಮಂಡಿಸಿದ ಮಧ್ಯಂತರ ಬಜೆಟ್‍ನ ನಿರೀಕ್ಷೆಗಳು ಹುಸಿಯಾಗಿವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಟೀಕಿಸಿದ್ದಾರೆ. ಬಡವರ, ಮಧ್ಯಮವರ್ಗದ ಮೇಲೆ ಗದಾ ಪ್ರಹಾರವಾಗಿದ್ದು, ಬಜೆಟ್‍ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಂಡವಾಳ ಶಾಹಿಗಳಿಗೆ ಅನು ಕೂಲಕರವಾದ ಬಜೆಟ್ ಆಗಿದೆ. ಆದಾಯ ಮಿತಿ ತೆರಿಗೆಯನ್ನು 5 ಲಕ್ಷಕ್ಕೆ ಹೆಚ್ಚಿ ಸಿರುವುದು ಹೊರತುಪಡಿಸಿದ್ದಲ್ಲಿ ಜನತೆಗೆ ಯಾವುದೇ ಪ್ರಯೋಜನ ಕಂಡು ಬರುತ್ತಿಲ್ಲ ಎಂದಿದ್ದಾರೆ. ಕಾಫಿ, ಕರಿಮೆಣಸು ಬೆಳೆಗಾರರಿಗೆ ಬಜೆಟ್‍ನಿಂದ ಯಾವುದೇ ಪ್ರಯೋಜನವಾಗಿಲ್ಲ. ಮುಂಗಡ…
ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿ ಚುರುಕುಗೊಳಿಸಲು ಸೂಚನೆ
February 1, 2019ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾದ ಮರಗಳನ್ನು ಮಾಲೀಕರಿಗೆ ನೀಡು ವಂತಾಗಲು, ಫೆ.8 ಅಥವಾ 11 ರಂದು ನಡೆ ಯುವ ‘ಕೊಡಗು ಪುನರ್ ನಿರ್ಮಾಣ ಪ್ರಾಧಿ ಕಾರ’ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಿದ್ದಿರುವ ಮರಗಳನ್ನು ಭೂ ಮಾಲೀ ಕರಿಗೆ ನೀಡುವಂತಾಗಬೇಕು ಎಂಬುದು ಹಿಂದಿನಿಂದಲೂ ಕೇಳಿಬರುತ್ತಿದೆ. ಆದ್ದ ರಿಂದ ಈ ಬಗ್ಗೆ ಮುಖ್ಯಮಂತ್ರಿಯವರ…
ಪ್ರಕೃತಿ ವಿಕೋಪ ಪ್ರದೇಶಕ್ಕೆ ಸುಧಾಮೂರ್ತಿ ಭೇಟಿ, ಪರಿಶೀಲನೆ
February 1, 2019ಚೆಟ್ಟಳ್ಳಿ: ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿಯವರು ತಮ್ಮ ತಂಡಗೊಡಗೂಡಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಬೇಡಿಕೆಗಳನ್ನು ಆಲಿಸಿದರು. ಮೊದಲಿಗೆ ದೇವಸ್ತೂರ್ ಮಾರ್ಗವಾಗಿ ತೆರಳಿ, ಪಾಣತ್ತಲೆ ಜನಾರ್ದನ್ ಅವರ ಮನೆಗೆ ಭೇಟಿ ನೀಡಿದ ಅವರು, ಅವರ ಮನೆಯ ಪರಿಸ್ಥಿತಿಯನ್ನು ಕಂಡು, ಹೊಸ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ನಂತರ ಅಲ್ಲಿಂದ ತೆರಳಿದ ಸುಧಾಮೂರ್ತಿಯವರು ನೇರವಾಗಿ ಕುಕ್ಕೇರ ಪಳಂಗಪ್ಪ ಅವರ ಜಾಗಕ್ಕೆ ತೆರಳಿ ಅವರ ಮನೆ ಕುಸಿತಗೊಂಡಿದ್ದನು ಕಂಡು ಅವರಿಗೂ ಬದಲಿ ಮನೆ…
ನೂತನ ಜಿಲ್ಲಾಧಿಕಾರಿಯಾಗಿ ಅನ್ನೀಸ್ ಕಣ್ಮಣಿ ಜಾಯ್ ಅಧಿಕಾರ ಸ್ವೀಕಾರ
February 1, 2019ಮಡಿಕೇರಿ: ಕೊಡಗು ಜಿಲ್ಲೆಯ ನೂತನ ಜಿಲ್ಲಾ ಧಿಕಾರಿಯಾಗಿ ಅನ್ನೀಸ್ ಕಣ್ಮಣಿ ಜಾಯ್ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ವಹಿಸಿ ಕೊಂಡಿದ್ದಾರೆ. ಕಳೆದ 20 ದಿನಗಳಿಂದ ಪ್ರಭಾರ ಜಿಲ್ಲಾಧಿ ಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಪಂ ಸಿಇಓ ಕೆ.ಲಕ್ಷ್ಮಿಪ್ರಿಯಾ ಅವರಿಂದ ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕರಿಸಿದರು.
ಅಪರ ಜಿಲ್ಲಾಧಿಕಾರಿಯಾಗಿ ಟಿ.ಯೋಗೇಶ್ ನೇಮಕ
February 1, 2019ಮಡಿಕೇರಿ: ಕೊಡಗು ಅಪರ ಜಿಲ್ಲಾಧಿಕಾರಿಯನ್ನಾಗಿ ಮೈಸೂರಿ ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಟಿ.ಯೋಗೇಶ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಜ.29ರಂದು ಯೋಗೇಶ್ ಅವರನ್ನು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಯ ನ್ನಾಗಿ ಮಾಡಿದ್ದ ವರ್ಗಾವಣೆಯನ್ನು ಮಾರ್ಪಡಿಸಿ ಕೊಡಗಿಗೆ ನಿಯೋಜಿಸಲಾಗಿದೆ.
ಅರಣ್ಯ ಕಾಯ್ದೆ ಅಪರಾಧ ಪ್ರಕರಣದಲ್ಲಿ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರ ಬಂಧನ
February 1, 2019ಮಡಿಕೇರಿ: ಅರಣ್ಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕಳೆದ 18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಪಿ.ಜಿ. ರಾಜಪ್ಪನ್, ಕುಂಞÂಕೃಷ್ಣ ಮತ್ತು ಪಿ.ಸಿ. ವಿಜು ಅವರುಗಳು ಬಂಧಿತ ಆರೋಪಿಗಳು. ಮೂಲತಃ ಕೇರಳ ರಾಜ್ಯದ ಅಶೋಕ್ ಚಾಲ್, ಕೊನ್ನೆಕಾಡುವಿನ ಗೋಪಾಲನ್ ಎಂಬುವವರ ಪುತ್ರ ಪಿ.ಜಿ. ರಾಜಪ್ಪನ್ (68), ರಾಮನ್ ಎಂಬುವರ ಪುತ್ರ ಕುಂಞÂಕೃಷ್ಣ (54) ಮತ್ತು ಜೇಕಬ್ ಎಂಬುವರ ಪುತ್ರ ಪಿ.ಸಿ. ವಿಜು (44) ಹಾಗೂ ಮಂಜಚಾಲುವಿನ ದೇವಸ್ಯ ಎಂಬುವರ ಪುತ್ರ…
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ
February 1, 2019ವಿರಾಜಪೇಟೆ: ವಿರಾಜಪೇಟೆ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಕೊಡಗು ಪ್ಯಾಕೆಜ್ ಅನುದಾನ ಹಾಗೂ ಪ್ರಕೃತಿ ವಿಕೋಪದ ಅನುದಾನ ಸೇರಿ ರೂ.2 ಕೋಟಿ ಅನುದಾನದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ತಾಲೂಕಿನ ಎರಡನೇ ರುದ್ರಗುಪ್ಪೆಯಿಂದ ವಿ.ಬಾಡಗ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಮಳೆ ಪರಿಹಾರದ ಅನುದಾನದಲ್ಲಿ ರೂ.12 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರೂ.10 ಲಕ್ಷದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ…
ಹೈಟೆಕ್ ಮಾರುಕಟ್ಟೆ ಕಾಮಗಾರಿ ಕಳಪೆ ಆರೋಪ; ಪ್ರತಿಭಟನೆ
January 31, 2019ಮಡಿಕೇರಿ: ಮಡಿಕೇರಿ ಹೈಟೆಕ್ ಮಾರುಕಟ್ಟೆ ಕಾಮಗಾರಿ ಕಳಪೆ ಗುಣ ಮಟ್ಟದಿಂದ ಕೂಡಿದ್ದು, ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಆಗಿರುವ ಕಾಮ ಗಾರಿಗೆ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಬಾರದೆಂದು ಒತ್ತಾಯಿಸಿ ಮಾರು ಕಟ್ಟೆ ವ್ಯಾಪಾರಿಗಳು ಮತ್ತು ಎಸ್‍ಡಿಪಿಐ ಕಾರ್ಯಕರ್ತರು ನಗರಸಭಾ ಅಧ್ಯಕ್ಷರ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ ಮೂರು ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿರುವ ಸುಮಾರು 3 ಕೋಟಿ ರೂ. ವೆಚ್ಚದ ಮಾರುಕಟ್ಟೆ ಕಾಮ ಗಾರಿ, ಆರಂಭದಿಂದಲೂ ಕಳಪೆ ಗುಣಮ ಟ್ಟದ ಆರೋಪವನ್ನು ಎದುರಿಸುತ್ತಲೇ ಬಂದಿದೆ. ಮಳೆÉಗಾಲದಲ್ಲಿ ಕಾಮಗಾರಿ…
ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಕ್ರಮ
January 31, 2019ವಿರಾಜಪೇಟೆ: ನೀರಿನ ಸಮಸ್ಯೆಗಳಿರುವ ಕಡೆಗಳಲ್ಲಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಬಳಿಯ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಬರ್ ಕಾಫಿಮಿಲ್ ಪಕ್ಕದ ಮಾದಂಡ ರಸ್ತೆಯಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೊಡಗು ಜಿಲ್ಲಾ ಪಂಚಾಯಿತಿಯಿಂದ ರೂ.2 ಲಕ್ಷ ವೆಚ್ಚದಲ್ಲಿ ನೂತನ ಬೋರ್‍ವೆಲ್ ಅಳವಡಿಸಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕೆ ಸ್ವಿಚ್ ಒತ್ತುವ ಮೂಲಕ ಚಾಲನೆ ನೀಡಿದ ಬೋಪಯ್ಯ, ಬಳಿಕ ಮಾತನಾಡುತ್ತ ಕೊಡಗು ಜಿಲ್ಲೆಯನ್ನು ಈಗಾಗಲೇ ಬರ ಪೀಡಿತ…
ಲೋಕಸಭಾ ಚುನಾವಣೆ: ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ
January 31, 2019ಮಡಿಕೇರಿ: ಲೋಕಸಭಾ ಚುನಾ ವಣೆಯ ಅಧಿಸೂಚನೆಯು ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದ್ದು, ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಈಗಿ ನಿಂದಲೇ ಮಾಡಿಕೊಳ್ಳಬೇಕಿದೆ. ಆದ್ದರಿಂದ ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಬಗ್ಗೆ ಮಾಹಿತಿಯನ್ನು ಫೆ.5 ರೊಳಗೆ ಒದಗಿ ಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾ ವಣೆ ಸಂಬಂಧ ಸೆಕ್ಟರ್ ಅಧಿಕಾರಿಗಳಿಗೆ ಗುರುವಾರ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆ…