ನೆರೆ ಸಂತ್ರಸ್ತರ ಮನೆ ನಿರ್ಮಾಣ  ಕಾಮಗಾರಿ ಚುರುಕುಗೊಳಿಸಲು ಸೂಚನೆ
ಕೊಡಗು

ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾಮಗಾರಿ ಚುರುಕುಗೊಳಿಸಲು ಸೂಚನೆ

February 1, 2019

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾದ ಮರಗಳನ್ನು ಮಾಲೀಕರಿಗೆ ನೀಡು ವಂತಾಗಲು, ಫೆ.8 ಅಥವಾ 11 ರಂದು ನಡೆ ಯುವ ‘ಕೊಡಗು ಪುನರ್ ನಿರ್ಮಾಣ ಪ್ರಾಧಿ ಕಾರ’ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಿದ್ದಿರುವ ಮರಗಳನ್ನು ಭೂ ಮಾಲೀ ಕರಿಗೆ ನೀಡುವಂತಾಗಬೇಕು ಎಂಬುದು ಹಿಂದಿನಿಂದಲೂ ಕೇಳಿಬರುತ್ತಿದೆ. ಆದ್ದ ರಿಂದ ಈ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಹಾಗೂ ಸ್ಥಳೀಯ ಜನಪ್ರತಿ ನಿಧಿಗಳ ಉಪಸ್ಥಿತಿಯಲ್ಲಿ ನಡೆಯುವ ಪ್ರಾಧಿ ಕಾರದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಸಾ.ರಾ.ಮಹೇಶ್ ಹೇಳಿದರು.

ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲಾಗು ತ್ತಿದ್ದು, ಈ ಕಾಮಗಾರಿಯನ್ನು ಚುರುಕು ಗೊಳಿಸುವಂತೆ ಸಂಬಂಧಪಟ್ಟ ಎಂಜಿನಿ ಯರ್‍ಗಳಿಗೆ ಅವರು ನಿರ್ದೇಶನ ನೀಡಿದರು.

ಜಂಬೂರು, ಕರ್ಣಂಗೇರಿ, ಬಿಳಿಗೇರಿ, ಗಾಳಿಬೀಡು, ಮದೆ ಗ್ರಾಮಗಳಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಮನೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರಲ್ಲದೆ, ಇನ್ಫೋಸಿಸ್ ಸಂಸ್ಥೆಯಿಂದಲೂ ಮನೆ ನಿರ್ಮಿಸಿಕೊಡ ಲಾಗುತ್ತಿದೆ ಎಂದು ತಿಳಿಸಿದರು.

ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕು. ಅದರಂತೆ ಕಾರ್ಯ ನಿರ್ವಹಿಸಬೇಕು. ಗುಣ ಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

ಸಂತ್ರಸ್ತರಿಗೆ ಎರಡು ಬೆಡ್ ರೂಂ ಒಳ ಗೊಂಡ ಮನೆಯನ್ನು 9.85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವುದು ದೇಶದಲ್ಲಿಯೇ ಪ್ರಥಮ ಸಚಿವರು ಹೇಳಿ ದರು. ಶಾಸಕ ಕೆ.ಜಿ.ಬೋಪಯ್ಯ ಅವರು, ಮನೆ ನಿರ್ಮಾಣದ ಕಾಮಗಾರಿ ಪ್ರಗತಿ ಅಷ್ಟಾಗಿ ನಡೆಯುತ್ತಿಲ್ಲ. ಮನೆ ಮತ್ತು ಬೆಳೆ ಹಾನಿ ಪರಿಹಾರ ತಲುಪಿಲ್ಲ ಎಂದು ಹೇಳಿದರು.
ಬೆಳೆ ಹಾನಿ ಪರಿಹಾರ ಸಂಬಂಧ ಇದು ವರೆಗೆ ಹಣ ಪಾವತಿಯಾಗಿಲ್ಲ. ಕೂಡಲೇ ಹಣ ಪಾವತಿಸಬೇಕು. ಬಿದ್ದಿರುವ ಮರಗ ಳನ್ನು ಮಾಲೀಕರಿಗೆ ನೀಡುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಒತ್ತಾಯಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತ ನಾಡಿ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಬೇಕು. ಅರ್ಹರಿಗೆ ಸವಲತ್ತು ಗಳು ದೊರೆಯಬೇಕು. ಮನೆ ನಿರ್ಮಾಣ ಸಂಬಂಧ ಅರ್ಹರನ್ನು ಕೈಬಿಟ್ಟಿದ್ದಲ್ಲಿ, ಕೂಡಲೇ ಪರಿಶೀಲಿಸಿ ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು. ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಮಾತನಾಡಿ, ದಸರಾ ಸಂದರ್ಭ ದಲ್ಲಿ ಘೋಷಣೆ ಮಾಡಿದಂತೆ ಇನ್ಫೋ ಸಿಸ್ ಪ್ರತಿಷ್ಠಾನ ವತಿಯಿಂದ 25 ಕೋಟಿ ರೂ. ನೀಡಲಾಗುವುದು. ಅದರಂತೆ ಮೊದಲ ಹಂತದಲ್ಲಿ 100 ಮನೆ, 2ನೇ ಹಂತದಲ್ಲಿ 100 ಮನೆ ಒಟ್ಟು 200 ಮನೆ ನಿರ್ಮಿಸಲಾಗು ವುದು ಎಂದು ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ರಸ್ತೆಗಳು ಸುಧಾರಣೆಯಾಗು ತ್ತಿವೆ. ಸಾರಿಗೆ ಸಂಪರ್ಕ ಯಥಾ ಸ್ಥಿತಿಗೆ ಮರ ಳುತ್ತಿದೆ ಎಂದು ಸುಧಾಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್, ಜಿಪಂ ಸಿಇಓ ಕೆ.ಲಕ್ಷ್ಮಿಪ್ರಿಯ, ಜಿಲ್ಲಾ ಎಸ್ಪಿ ಸುಮನ್ ಡಿ.ಪೆನ್ನೇಕರ್, ಹೆಚ್ಚುವರಿ ಜಿಲ್ಲಾ ಧಿಕಾರಿ ಶ್ರೀನಿವಾಸ್, ಉಪ ವಿಭಾಗಾ ಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ ರಾದ ಕುಸುಮ, ಇನ್ಫೋಸಿಸ್ ಫೌಂಡೇ ಶನ್‍ನ ಪ್ರತಿನಿಧಿಗಳು, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.

Translate »