ಮೈಸೂರು: ಮೈಸೂರಿನ ಐ ಕ್ಯೂ ಪ್ಲಸ್ ಅಕಾಡೆಮಿ ಜನವರಿ 20ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯ ಬಹುಮಾನ ವಿತರಣಾ ಹಾಗೂ ಪದವಿ ಪ್ರದಾನ ಕಾರ್ಯಕ್ರಮ ಫೆ.3ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ನಿವೇದಿತನಗರದ ಅಕ್ಮಿ ಸ್ಕೂಲ್‍ನಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ನಿರ್ದೇಶಕ ಶ್ರೀಕಾಂತ್ ಭಟ್ ತಿಳಿಸಿದರು. ಆ ದಿನದ ಕಾರ್ಯಕ್ರಮದಲ್ಲಿ ಕೌಟಿಲ್ಯ ವಿದ್ಯಾ ಲಯದ ಪ್ರಾಂಶುಪಾಲರಾದ ಡಾ.ಎಲ್.ಸವಿತಾ, ಮೈಸೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆಯ ಡಾ.ನಾರಾಯಣ ಹೆಗ್ಡೆ, ಬಾಲೋದ್ಯಾನ ಶಾಲೆಯ ಅಧ್ಯಕ್ಷ ವಾಸುದೇವರಾವ್ ಅರೂರ್, ಎಸಿಎಂಇ ಶಾಲೆಯ ಪ್ರಾಂಶುಪಾಲರಾದ ಸುಭಾಷಿಣಿ, ವಕೀಲ ಎ.ಎಂ.ಭಾಸ್ಕರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಬಾಕಸ್ ಸ್ಪರ್ಧೆಯಲ್ಲಿ 993 ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಐ ಕ್ಯೂ ಪ್ಲಸ್ ಅಕಾಡೆಮಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ತರಬೇತಿದಾರರಾದ ಪುಷ್ಪಾ, ಸುಪ್ರಿಯಾ ಉಪಸ್ಥಿತರಿದ್ದರು.